ಪ್ರೊ.ನಂಜುಂಡಸ್ವಾಮಿ ಪುತ್ಥಳಿ ನಿರ್ಮಿಸಲು ರೈತ ಸಂಘ ಒತ್ತಾಯ

ರಾಯಚೂರು.ಮೇ.೨೬.ಲಿಂಗಸೂಗೂರು ತಾಲೂಕಿನ ನವಲಿ ರಾಂಪುರು ಗ್ರಾಮದಲ್ಲಿ ಪ್ರೊ.ನಂಜುಂಡಸ್ವಾಮಿ ಅವರ ಪುತ್ಥಳಿ ನಿರ್ಮಿಸಲು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಸ್ಥಾನಿಕ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಲಿಂಗಸೂಗೂರು ತಾಲೂಕಿನ ನವಳಿ ರಾಂಪೂರು ಸುಮಾರು ೩೦-೩೫ ವರ್ಷಗಳಿಂದ ರೈತ ಸಂಘದಲ್ಲಿ ಮುಖಂಡರಾಗಿ ಸದರಿ ಸಂಘದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಾ ಬಂದಿರುತ್ತಾರೆ ಪ್ರೋ : ನಂಜುಂಡಸ್ವಾಮಿ ಯವರ ಮತ್ಥಳಿ ನಿರ್ಮಿಸಬೇಕೆಂಬ ಅಪೇಕ್ಷೆ ಇರುತ್ತದೆ. ಕಾರಣ ಸದರಿ ಪ್ರೋ : ನಂಜುಂಡಸ್ವಾಮಿ ಯವರ . ಮತ್ಥಳಿ ನಿರ್ಮಿಸಬೇಕೆಂಬುದು ರೈತ ಸಂಘದ ನಿರ್ಣಯವಾಗಿದೆ ಅಲ್ಲದೆ ಲಿಂಗಸಗೂರು ತಾಲೂಕಿನ ಮುದಗಲ್ಲ ಹೋಬಳಿಯ ರಾಂಪೂರು ಶಿವಾರದ ಜಮೀನು ಸರ್ವೆ ನಂ .೨೩ / ೨ , ವಿಸ್ತೀರ್ಣ : ೦೦-೧೩ ಗುಂಟೆ ಜಮೀನು ಇದ್ದು , ಸದರಿ ಜಮೀನು ಮಲ್ಲನಗೌಡರ ತಂದೆಯಾದ ಮಾಜಪ್ಪಗೌಡ ತಂದೆ ಮಲ್ಲಪ್ಪ ಸಾ.ನವಲಿ – ರಾಂಪೂರು ಇವರ ಹೆಸರಿನಲ್ಲಿದ್ದು , ಸದರಿಯವರು ಈಗಾಗಲೇ ಸದರಿ ಜಮೀನಿನಲ್ಲಿ ೧೦ :೧೫ ಫೀಟುಗಳ ಜಾಗವನ್ನು ಪ್ರೋ : ನಂಜುಂಡಸ್ವಾಮಿ ಯವರ ಗೌರವಾರ್ಥವಾಗಿ ಮತ್ಥಳಿ ನಿರ್ಮಿಸಲು ಈಗಾಗಲೇ ಒಪ್ಪಿಗೆಯನ್ನು ನೀಡಿರುತ್ತಾರೆ . ಅಲ್ಲದೆ ಸದರಿ ಮಳೆಯನ್ನು ನಿರ್ಮಿಸಲು ಸುಮಾರು ಎರಡು ವರ್ಷದಿಂದ ಪ್ರಯತ್ನ ನಡೆದಿರುತ್ತದೆ , ಅನಿವಾರ್ಯ ಕಾರಣಗಳಿಂದ ಈ ಕಾರ್ಯವು ಕೈಗೂಡಿರುವುದಿಲ್ಲ . ಕಾರಣ ಸದರಿ ಪ್ರೋ ನಂಜುಂಡಸ್ವಾಮಿ ಯವರ ಪುತ್ಥಳಿ ನಿರ್ಮಿಸಲು ಒತ್ತಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲನಗೌಡ,ಬಡೇಸಾಬ್,ಅಮರೇಶ,ಮಂಜುನಾಥ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.