ಪ್ರೊ: ಜಿ.ವೆಂಕಟಸುಬ್ಬಯ್ಯರಿಂದ ಕನ್ನಡ ನಿಘಂಟು: ಸಾಧನೆ

ಕೆ.ಆರ್.ಪೇಟೆ: ಏ.22: ಕನ್ನಡ ನಿಘಂಟು ಸಂಪಾದನೆಯ ಮೂಲಕ ಕನ್ನಡ ಸಾರಸ್ವತಲೋಕದಲ್ಲಿ ಪ್ರೊ: ಜಿ.ವೆಂಕಟಸುಬ್ಬಯ್ಯರವರು ಅಚ್ಚಳಿಯದ ಸಾಧನೆ ಮಾಡಿದ್ದಾರೆಂದು ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳು ಆಯೋಜಿಸಿದ್ದ ಶತಾಯುಷಿಗೆ ನಮನ ಕಾರ್ಯಕ್ರಮದಲ್ಲಿ ಜಿ.ವೆಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಲೋಕಕ್ಕೆ ಮಂಡ್ಯ ಜಿಲ್ಲೆಯ ಕೊಡುಗೆ ಅಪಾರ. ಜಿಲ್ಲೆಯ ಕೀರ್ತಿಯನ್ನು ಸಾಹಿತ್ಯ ಸಂಘಟನೆಯ ಮೂಲಕ ಎತ್ತರಿಸಿದ ಹತ್ತಾರು ಮಹನೀಯ ಸಾಹಿತಿಗಳ ನಡುವೆ ಕನ್ನಡ- ಕನ್ನಡ ನಿಘಂಟು ಸಂಪಾಧನೆಯ ಮೂಲಕ ಜಿ.ವೆಂ ಎತ್ತರದಲ್ಲಿ ನಿಂತಿದ್ದಾರೆ. ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ನವರಾದ ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕೈಗೋನಹಳ್ಳಿಯ ಮೊಮ್ಮಗ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಜಿ .ವೆಂ ರವರ ತಾಯಿಯ ತವರೂರಾದ ಕೈಗೋನಹಳ್ಳಿಯಲ್ಲಿ ಹುಟ್ಟಿ ಬೆಳೆದ ಜಿ.ವೆಂರವರು ತಾಲ್ಲುಕಿನ ಸುಪುತ್ರರೂ ಆಗಿದ್ದಾರೆ. ಕನ್ನಡ ನಿಘಂಟು ಕೋಶವನ್ನು ರೆ.ಫಾ ಕಿಟೆಲ್‍ರವರ ನಂತರ ಶಾಸ್ತ್ರೋಕ್ತವಾಗಿ ಸಿದ್ದಪಡಿಸಿ ಎಂಟು ಸಂಪುಟಗಳಲ್ಲಿ ಸಂಪಾದಿಸಿದ ಅವರು ಪ್ರಜಾವಾಣಿಯಲ್ಲಿ ಇಗೋ ಕನ್ನಡ ಅಂಕಣದಲ್ಲಿ ಕನ್ನಡದ ಶಬ್ದಾರ್ಥವನ್ನು ಬಿಡಿಸಿ ಹೇಳುವ ಮೂಲಕ ಭಾಷೆಯ ಸೊಗಡನ್ನು ಜನರಿಗ ಮನಸ್ಸಿಗೆ ಹತ್ತಿರ ತಂದವರಾಗಿದ್ದಾರೆಂದರು.
ನಿವೃತ್ತ ಕನ್ನಡ ಶಿಕ್ಷಕ ಚಾ. ಶಿ ಜಯಕುಮಾರ್ ಮಾತನಾಡಿ ಗುರುತರ ಸಾಧನೆ ಮಾಡಿದ ಕನ್ನಡ ಸಾಹಿತಿಗಳ ಸಾಲಿನಲ್ಲಿ ಶತಾಯುಷಿ ಜಿ.ವೆಂಕಟಸುಬ್ಬಯ್ಯ ನªರ ಹೆಸರು ಅಚ್ಚಳಿಯದೆ ಉಳಿಯುವಂತಹದ್ದು. ಒಂದು ಶÀತಮಾ£ದ ಸುದೀರ್ಘ ಬದುಕಿನಲ್ಲಿ ಅವರ ಸಾಹಿತ್ಯ ಸೇವೆ ಯನ್ನು ವಿವರಿಸಲು ಪದಬಂಢಾರದಲ್ಲಿ ಪದಗಳೇ ಇಲ್ಲ ಎಂದರು.
ತಾಲ್ಲೂಕು ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಹಿರಿಯ ಪತ್ರಕರ್ತ ಎಂ.ಕೆ.ಹರಿಚರಣ್ ತಿಲಕ್, ಮಕ್ಕಳ ಸಾಹಿತ್ಯ ವೇದಿಕೆಯ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್, ಉದಯ ರವಿ ಟ್ರಸ್ಟ್ ಸಂಚಾಲಕ ಕತ್ತರ ಘಟ್ಟವಾಸು, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಪೂರ್ಣಚಂದ್ರ ತೇಜಶ್ವಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷ ಪದ್ಮೇಶ್. ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಲ್.ಧರ್ಮಪ್ಪ, ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಹೊನ್ನೇನಹಳ್ಳಿ ವೇಣು, ಶಿಕ್ಷಕರಾದ ಬೋರೇಗೌಡ, ಮಂಜು, ಮಹೇಶ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸಾಹಿತಿಗಳು, ಮತ್ತು ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಜಿ,ವೆಂ ರವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು.