ದಾವಣಗೆರೆ ಮೇ ೨೮;ನಾಡಿನ ಹೆಸರಾಂತ ಸಾಹಿತಿ, ವಿಮರ್ಶಕ, “ಪಂಪ ಪ್ರಶಸ್ತಿ” ಪುರಸ್ಕೃತ ಪ್ರೊ. ಜಿ.ಎಚ್. ನಾಯಕರವರು ನಮ್ಮನ್ನಗಲಿದ್ದಾರೆ.ಶ್ರೀಯುತರ ಅಗಲಿಕೆಯಿಂದ ಸಾಹಿತ್ಯ ಲೋಕ ಬಡವಾಗಿದೆ. ಇಂತಹ ಧೀಮಂತ ವ್ಯಕ್ತಿ ಸಾಹಿತ್ಯ ಲೋಕದಲ್ಲಿ ಸಿಕ್ಕುವುದು ಅತಿ ವಿರಳ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ವಾಮದೇವಪ್ಪ ಅವರು ಮೃತರ ಸಾಹಿತಿಕ ಕೊಡುಗೆಗಳನ್ನು ಸ್ಮರಿಸಿದ್ದಾರೆ. ಭಗವಂತನು ಹಾಗೂ ಕನ್ನಡ ತಾಯಿ ಶ್ರೀ ಭುವನೇಶ್ವರಿಯಲ್ಲಿ ಮೃತರ ಚಿರಶಾಂತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತಾ, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎಲ್ಲಾ ಕನ್ನಡದ ಮನಸುಗಳ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸುತ್ತೇವೆ ಎಂದಿದ್ದಾರೆ.