
ಧಾರವಾಡ,ಆ.14: ಕರ್ನಾಟಕ ವಿದ್ಯಾವರ್ಧಕ ಸಂಘ ಎಂದರೆಒಂದು ವಿಶ್ವವಿದ್ಯಾಲಯವಿದ್ದಂತೆ, ಈ ವಿಶ್ವವಿದ್ಯಾಲಯದ ಸಂಪರ್ಕಕ್ಕೆ ನಾವೆಲ್ಲಾ ಬಂದಿರುವುದು ನಮ್ಮ ಭಾಗ್ಯಎಂದುಧಾರವಾಡ ಕ.ವಿ.ವಿ.ಯ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ.ಎ. ಮುರಿಗೆಪ್ಪದತ್ತಿಉದ್ಘಾಟನೆಕಾರ್ಯಕ್ರಮದಲ್ಲಿದತ್ತಿ ಉದ್ಘಾಟಿಸಿ ಅವರು ಮಾತನಾಡಿದರು.
140 ಕ್ಕೂ ಹೆಚ್ಚು ದತ್ತಿ ಮೂಲಕ ಕರ್ನಾಟಕ ವಿದ್ಯಾವರ್ಧಕ ಸಂಘ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಆ ದತ್ತಿಗಳಲ್ಲಿ ಎ. ಮುರಿಗೆಪ್ಪಅವರದತ್ತಿಯು ಸೇರಿದುದು ಹೆಮ್ಮೆಯ ಸಂಗತಿ.ಸಂಘದಕಾರ್ಯಕ್ರಮದ ಸಮಯ ಪ್ರಜ್ಞೆ ಇಂದಿನ ಎಲ್ಲ ಸಂಸ್ಥೆಗಳಿಗೂ ಮಾದರಿ.ಎ. ಮುರಿಗೆಪ್ಪಅವರು ಸರಳ ಸಜ್ಜನಿಕೆಯಿಂದ, ವಿನಯ ಹಾಗೂ ನಗುಮೊಗದಿಂದ ತಾಳ್ಮೆಯಿಂದ ವ್ಯವಹರಿಸುವ ಪರಿಎಲ್ಲರನ್ನುಆಕರ್ಷಿಸುತ್ತದೆ.ಸಮಾಜಕ್ಕೆ ಸಾಹಿತ್ಯಿಕವಾಗಿಅವರದೇಆದಕೊಡುಗೆಯನ್ನು ನೀಡಿದ್ದಾರೆ.ಇಂಥವರದತ್ತಿಉದ್ಘಾಟನೆ ನನ್ನಿಂದಆದದ್ದು ಸಂತಸತಂದಿದೆಎಂದರು.
ಧಾರವಾಡಆಕಾಶವಾಣಿಕೇಂದ್ರದಡಾ. ಶಶಿಧರ ನರೇಂದ್ರ ರಂಗಭೂಮಿ ಚಟುವಟಿಕೆಗಳು ಮತ್ತು ಪ್ರೊ.ಎ. ಮುರಿಗೆಪ್ಪ' ವಿಷಯಕುರಿತು ಮಾತನಾಡುತ್ತಾ, 80ರ ದಶಕದಲ್ಲಿಯೇರಂಗಭೂಮಿಯ ಸಂಘಟಕರಾಗಿ, ನಟರಾಗಿ, ನಿರ್ದೇಶಕರಾಗಿ, ರಂಗತಂತ್ರಜ್ಞರಾಗಿಧಾರವಾಡದಲ್ಲಿರಂಗಭೂಮಿಕುರಿತಾಗಿ ಸಾಕಷ್ಟು ಕೆಲಸ ಮಾಡುವುದರಜೊತೆಗೆ ಅನೇಕ ಅತ್ಯುತ್ತಮ ನಾಟಕಗಳನ್ನು ರಂಗಕ್ಕೆ ನೀಡಿದ ಶ್ರೇಯಸ್ಸುಅವರಿಗೆ ಸಲ್ಲುತ್ತದೆ.ಅಂದಿನ ಯುವಕರಾದ ನಾವೆಲ್ಲರೂರಂಗಭೂಮಿಯತ್ತ ಒಲವು ಮೂಡುವಲ್ಲಿ ಎ. ಮುರಿಗೆಪ್ಪಅವರುದಾರಿದೀಪವಾಗಿದ್ದರು.ಸಂಘದಲ್ಲಿಟ್ಟಿರುವದತ್ತಿಯ ಮೂಲಕ ಸಾಂಸ್ಕøತಿಕವಾಗಿ ಪ್ರಾಯೋಗಿಕವಾದಕಾರ್ಯಕ್ರಮಜರುಗಲಿ ಎಂದುಆಶಯ ವ್ಯಕ್ತಪಡಿಸಿದರು. ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ದತ್ತಿಗಳಲ್ಲಿ ಎ. ಮುರಿಗೆಪ್ಪದತ್ತಿ ಸೇರಿದ್ದುಅಭಿನಂದನೀಯ.ಸಂಘದ ಮೇಲಿನ ಅವರ ಪ್ರೀತಿಗೆಕೃತಜ್ಞತೆ ಸಲ್ಲಿಸಿದರು. ಎ. ಮುರಿಗೆಪ್ಪಅವರ ವಿರಚಿತ
ಅಹಿಂಸೆ ಪ್ರತಿಪಾದಕ ಹುತಾತ್ಮ ಮೈಲಾರ ಮಹದೇವ’À ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಎ. ಮುರಿಗೆಪ್ಪಕುಟುಂಬಸ್ಥರುಕರ್ನಾಟಕ ವಿದ್ಯಾವರ್ಧಕ ಸಂಘದ ಸಿಬ್ಬಂದಿಗಳನ್ನು ಸನ್ಮಾನಿಸಿ, ಗೌರವಿಸಿದರು.
ವೇದಿಕೆಯಲ್ಲಿ ಪ್ರೊ.ಎ. ಮುರಿಗೆಪ್ಪ ಮತ್ತು ಶ್ರೀಮತಿ ಲೀಲಾ ಮುರಿಗೆಪ್ಪ ದಂಪತಿಗಳು ಉಪಸ್ಥಿತರಿದ್ದರು.