ಪ್ರೊ.ಕೆ.ಎಸ್.ರಂಗಪ್ಪ ವಿಶ್ವದ ಅತ್ಯುನ್ನತ ವಿಜ್ಞಾನಿ

ಮೈಸೂರು, ನ. ೨- ಖ್ಯಾತ ರಸಾಯನ ಶಾಸ್ತ್ರಜ್ಞ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ವಿಶ್ವದ ಅತ್ಯುನ್ನತ ವಿಜ್ಞಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿರುವ ವಿಶ್ವದ ಟಾಪ್ ಮೋಸ್ಟ್ ವಿಜ್ಞಾನಿಗಳ ಪೈಕಿ ಪ್ರೊ.ಕೆ.ಎಸ್.ರಂಗಪ್ಪ ಅವರು ಸ್ಥಾನ ಪಡೆದಿರುವುದು ವಿಶೇಷ.
ಈ ಸಂಬಂಧ ೨೫ ಪುಟಗಳ ಪಟ್ಟಿಯನ್ನು ಅಮೇರಿಕಾದ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿದೆ.
ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪೈಕಿ ಭಾರತದ ಶೇ. ೨ ರಷ್ಟು ವಿಜ್ಞಾನಿಗಳನ್ನು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಪಟ್ಟಿ ಮಾಡಿದೆ.
ಈ ಪೈಕಿ ಸಾವಯವ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರ ಸಾಧನೆಯನ್ನು ಗುರುತಿಸಿ ಸ್ಥಾನ ನೀಡಿರುವುದು ವಿಶೇಷ.
ವರ್ಲ್ಡ್ ವೈಡ್ ರ್ಯಾಂಕಿಂಗ್ ನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಕೆ.ಎಸ್.ರಂಗಪ್ಪ ಅವರ ಸಾಧನೆಯನ್ನು ಈ ರ್ಯಾಂಕಿಂಗ್ ನೀಡುವ ವೇಳೆ ಅಮೇರಿಕಾದ ಸ್ಟ್ಯಾನ್
ಫೋರ್ಡ್ ವಿವಿ ಗಣನೆಗೆ ತೆಗೆದುಕೊಂಡಿದೆ. ವರ್ಲ್ಡ್ ವೈಡ್ ರ್ಯಾಂಕಿಂಗ್ ನಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಅವರು ೨೧೮೧ ನೇ ಸ್ಥಾನದಲ್ಲಿದ್ದು, ಅವರ ೪೩೮ ಸಂಶೋಧನಾ ಪ್ರಬಂಧಗಳನ್ನು ರ್ಯಾಂಕಿಂಗ್ ಆಯ್ಕೆ ವೇಳೆ ಪರಿಗಣಿಸಲಾಗಿದೆ.
ದೇಶದಲ್ಲಿ ಅಂದಾಜು ೭೫೦ ವಿಶ್ವವಿದ್ಯಾನಿಲಯಗಳಿದ್ದು, ( ಸರಕಾರಿ ಸ್ವಾಮ್ಯದ ) ಈ ಪೈಕಿ ಬಹುಶಃ, ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಕೆ.ಎಸ್.ರಂಗಪ್ಪ ಅವರೊಬ್ಬರೇ ಸ್ಥಾನ ಪಡೆದಿರುವುದು ವಿಶೇಷ.
ಹಲವು ಮೈಲುಗಲ್ಲು :
ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ಸಾಧನೆಗಳ ಮೂಲಕ ಮೈಲುಗಲ್ಲು ಸ್ಥಾಪಿಸಿದ್ದಾರೆ. ೫೦೦ ಕ್ಕೂ ಹೆಚ್ಚು ಅಂತರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಅವರು ೧೧ ವಿವಿಧ ಸಂಶೋಧನಾ ಪೇಟಂಟ್ಸ್ ಗಳನ್ನು ಸಂಪಾದಿಸಿದ್ದಾರೆ.
ಮಾಲಿಕ್ಯೂಲರ್ ಕೆಮಿಸ್ಟ್ರಿಯಲ್ಲಿನ ಇವರ ಹಲವಾರು ಸಂಶೋಧನೆಗಳು ಈಗ ಚೀನಾ, ಸಿಂಗಾಪುರದಲ್ಲಿ ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ. ವಿವಿಧ ದೇಶಗಳ ೩೫೦ ರಿಂದ ೪೦೦ ಮಂದಿ ಸಂಶೋಧಕರು ಪ್ರೊ.ರಂಗಪ್ಪ ಅವರ ಸಹಭಾಗಿತ್ವದಲ್ಲಿ ಸಂಶೋಧನೆ ನಡೆಸುತ್ತಿರುವುದು ಮತ್ತೊಂದು ವಿಶೇಷ. ಅತ್ಯುನ್ನತ ಪ್ರಶಸ್ತಿ
ಅಮೇರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ವರ್ಲ್ಡ್ ಟಾಪ್ ಮೋಸ್ಟ್ ಸೈಂಟಿಸ್ಟ್ ಗಳ ಪೈಕಿ ಭಾರತದ ಶೇ. ೨ ರಷ್ಟು ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಆರ್ಗಾನಿಕ್ ಕೆಮಿಸ್ಟ್ರಿ ವಿಭಾಗದಲ್ಲಿ ಸ್ಥಾನ ಪಡೆದಿರುವ ಬಗ್ಗೆ ಪ್ರೊ.ಕೆ.ಎಸ್.ರಂಗಪ್ಪ ಅವರು ‘ ಜತೆ ಮಾತನಾಡಿ ಇದು ತುಂಬಾ ಸಂತಸದ ಸಂಗತಿ. ನನ್ನ ಪಾಲಿಗೆ ವಿಶ್ವದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಲಭಿಸಿದಷ್ಟೆ ಖುಷಿಯಾಗಿದೆ. ಕಳೆದ ೪೦ ವರ್ಷಗಳಿಂದ ನಾನು ನಡೆಸಿದ ಸಂಶೋಧನೆಗಳಿಗೆ ಲಭಿಸಿದ ನಿಜವಾದ ಮಾನ್ಯತೆ ಎಂದರು.