ಪ್ರೇರಣಾ ಪಬ್ಲಿಕ್ ಸ್ಕೂಲ್‍ಗೆ ಇಟಿ ಟೆಕ್ ಎಕ್ಸಲನ್ಸ್ ಅವಾರ್ಡ

ವಿಜಯಪುರ,ಜ.14:ಇತ್ತೀಚೆಗೆ ಹೈದರಾಬಾದ್‍ನಲ್ಲಿ ನಡೆದ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಲೆನ್ಸ್ ಅವಾಡ್ರ್ಸ್ 2023-24 ಸಮಾರಂಭದಲ್ಲಿ ವಿಜಯಪುರದ “ಪ್ರೇರಣಾ ಪಬ್ಲಿಕ್ ಸ್ಕೂಲ್” ಭಾರತದ ಟಾಪ್ 500 ಶಾಲೆಗಳಲ್ಲಿ ಸ್ಥಾನ ಪಡೆದಿದೆ.

ಈ ಪ್ರಶಸ್ತಿಯು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಮಗ್ರ ಅಭಿವೃದ್ಧಿಯಲ್ಲಿ ಶಾಲೆಯ ಶ್ರೇಷ್ಠತೆಯನ್ನು ಗುರುತಿಸುತ್ತದೆ. ಇದಲ್ಲದೆ ಶಾಲೆಯು ಕರ್ನಾಟಕದ 25 ಅತ್ಯುತ್ತಮ ಶಾಲೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. ಈ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಜಯಪುರ ಜಿಲ್ಲೆಯ ಏಕೈಕ ಶಾಲೆ ಇದಾಗಿದೆ.

ಪ್ರೇರಣಾ ಪಬ್ಲಿಕ್ ಸ್ಕೂಲ್ ಇನ್ನಿತರ ಮಾನದಂಡಗಳಾದ “ಉತ್ತಮ ಕ್ರೀಡಾ ಶಿಕ್ಷಣದ ಶಾಲೆ”, “ಉತ್ತಮ ಸಮುದಾಯ ಸಹಯೋಗದ ಶಾಲೆ” ಮತ್ತು “ಅತ್ಯುತ್ತಮ ಪಠ್ಯೇತರ ಚಟುವಟಿಕೆಗಳ ಶಾಲೆ” ಎಂಬ ಗೌರವಕ್ಕೆ ಭಾಜನವಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಪರವಾಗಿ ಪ್ರೇರಣಾ ಸಂಘ ಸಂಸ್ಥೆಗಳ ನಿರ್ದೇಶಕÀ ಕುಮಾರ. ಸುಕೃತ ಪಾಟೀಲ ಮತ್ತು ಪ್ರಾಂಶುಪಾಲ ಸತೀಶ ಕವಿಶ್ವರ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ ಪ್ರೇರಣಾ ಸಂಘ ಸಂಸ್ಥೆಗಳ ಅಧ್ಯಕ್ಷ ಡಾ.ಅರವಿಂದ ಪಾಟೀಲ ಅವರು, ಈ ಸುದ್ದಿ ಕೇಳಿ ನನಗೆ ಅತೀವ ಸಂಭ್ರಮವಾಗಿದೆ. ಇದು ಪ್ರೇರಣಾ ಮತ್ತು ಇಡೀ ವಿಜಯಪುರ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಈ ಪ್ರಶಸ್ತಿಗೆ ಕಾರಣರಾದ ಹಾಗೂ ಸಹಕರಿದ ಎಲ್ಲಾ ಪಾಲಕರಿಗೆ ಧನ್ಯವಾದ ಅರ್ಪಿಸಿದರು. ಪ್ರೇರಣಾ ಶಿಕ್ಷಕ ವೃಂದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಹಂಚಿಕೊಂಡರು.