ಪ್ರೇರಕರಿಂದ ಪಡನಾ ಲಿಖನಾ ಸಾಕ್ಷರತಾ ಕುಟುಂಬ ಸಮೀಕ್ಷೆ ನಡೆಸಿ ಜಿಲ್ಲೆಯಲ್ಲಿ 80143 ಅನಕ್ಷರಸ್ಥರಿಗಾಗಿ 2.42 ಕೋಟಿ ರೂ. ವೆಚ್ಚ

ಆಳಂದ:ಎ.21:ಕೇಂದ್ರ ಸರಕಾರದ ಪ್ರಾಯೋಜಿತ ಸಾಕ್ಷರತಾ ಯೋಜನೆ ಆದ ಪಡನಾ ಲಿಖನಾ ಅಭಿಯಾನದ ಅನುಷ್ಠಾನ ಪೂರ್ವದಲ್ಲಿ ಕುಟುಂಬ ಸಮೀಕ್ಷೆಯನ್ನು ಸಾಕ್ಷರತಾ ಪ್ರೇರಕರಿಂದ ನಡೆಸಿ ಎಂದು ಜಿಲ್ಲಾ ಸಾಕ್ಷರತಾ ಪ್ರೇರಕರ ಒಕ್ಕೂಟದ ಅಧ್ಯಕ್ಷ ಶಿವಲಿಂಗ ತೇಲ್ಕರ್ ಧಂಗಾಪೂರ ಅವರು ಜಿಲ್ಲಾಡಾಳಿತಕ್ಕೆ ಒತ್ತಾಯಿಸಿದ್ದಾರೆ.

ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರ ಕಾರ್ಯಕ್ರಮಗಳು ಅನುಷ್ಠಾನಗೊಳಿಸಲು ಸುಮಾರು 6 ತಿಂಗಳು ಬೇಕು. ಆದರೆ 2019-20ರ ಮಾರ್ಚ ತಿಂಗಳಲ್ಲಿ ಮುಗಿಸಬೇಕಾದ ಪಡನಾ ಲಿಖನಾ ಕಾರ್ಯಕ್ರಮ ಅಧಿಕಾರಿಗಳು ಕೇವಲ 2 ತಿಂಗಳಲ್ಲಿ ಮುಗಿಸಲು ಮುಂದಾಗಿದ್ದು. ಅನುಮಾನಕ್ಕೆ ಎಡೆ ಮಾಡಿಕೊಟ್ಟಂತೆ ಆಗಿದೆ.

ಜಿಲ್ಲೆಯಲ್ಲಿ 248 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ತಲಾ ಇಬ್ಬರಂತೆ 496 ಸಾಕ್ಷರತಾ ಪ್ರೇರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರನ್ನು ಕಡೆಗಣಿಸಿ ಕೋವಿಡ-19ರ ಅಬ್ಬರ ಅಲೆಯಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿಗಳು ತರಾತುರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಸಮೀಕ್ಷೆ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಮಾರ್ಚ 2020ಕ್ಕೆ ಮುಗಿಯಬೇಕಾಗಿದ. ಕೇಂದ್ರ ಸರಕಾರ ಈ ಕಾರ್ಯಕ್ರಮಕ್ಕೆ 80143 ಅನಕ್ಷರಸ್ಥರನ್ನು ಸಮೀಕ್ಷೆ ಮುಖಾಂತರ ಗುರುತಿಸಿ ಅವರನ್ನು ಸಾಕ್ಷರನ್ನಾಗಿ ಮಾಡಲು ಒಬ್ಬ ಕಲಿಕಾತಿಗೆ 30 ರೂ ಯಂತೆ ಒಟ್ಟು 2.42 ಕೋಟಿ ರೂ. ಖರ್ಚು ಈ ಕಾರ್ಯಕ್ರಮದಲ್ಲಿ ಮಾಡಬೇಕಾಗಿತ್ತು. ಆದರೆ ಲೋಕ ಶಿಕ್ಷಣ ನಿರ್ದೇಶನಾಲಯ ಹಾಗೂ ರಾಜ್ಯ ಸಾಕ್ಷರತಾ ಮಶೀನ್ ಪ್ರಾಧಿಕಾರ ಬೆಂಗಳೂರು ಅವರು ಈ ಕಾರ್ಯಕ್ರಮವನ್ನು ಪ್ರಸ್ತಕ 2021ರಲ್ಲಿ ಕೇವಲ ತಿಂಗಳಲ್ಲಿ ಮುಗಿಸಲು ಮುಂದಾಗಿದ್ದು ನೋಡಿದೆರೆ ಈ ಅನುದಾನವನ್ನು ಎತ್ತಿ ಹಾಕುವ ಹುನ್ನಾರ ನಡೆಯುತ್ತಿದೆ ಎಂದು ಮೇಲನೋಟಕ್ಕೆ ಕಂಡು ಬರುತ್ತಿದೆ.

ಕಲಿಕಾ ಸಾಮಗ್ರಿ ಹೆಸರಲ್ಲಿ ಬೆಂಗಳೂರು ಪ್ರಾಧಿಕಾರದವರು 1.30 ಕೋಟಿ ರೂ. ಅಲ್ಲಿ ಖರ್ಚು ಮಾಡುತ್ತಾರೆ. ಉಳಿದಿದ್ದು. ತರಬೇತಿ, ಕಲಿಕಾ ವಾತಾವರಣಕ್ಕಾಗಿ ಬಳಸುತ್ತಾರೆ. ಸಾಕ್ಷರತಾ ಕಾರ್ಯಕ್ರಮಕ್ಕೆ ಆಧಾರಸ್ಥಂಭವಾದ ಪ್ರೇರಕರಿಗೆ ಯಾವುದೇ ತರಹದ ಗೌರವ ಧನ ಇಲ್ಲ. ಸ್ವ ಇಚ್ಛೆಯಿಂದ ಕಳಿಸಬೇಕೆಂದು ಹೇಳುತ್ತಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಒಂದು ಗುಂಡಿ ತೊಡಿದರೆ 280 ರೂ ಕೂಲಿ ಕೋಡುತ್ತಾರೆ ಇದನ್ನು ಬಿಟ್ಟು ಸ್ವ ಇಚ್ಛೆಯಿಂದ ಕಲಿಸಲು ಸಾಧ್ಯವಿದೆ ಎಂದು ಪ್ರಶ್ನಿಸಿದ್ದಾರೆ.

ಸಮೀಕ್ಷೆ ಮಾಡಲು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡಿದ ಆದೇಶವನ್ನು ಹಿಂಪಡೆದು ಪ್ರೇರಕರು ಆಗಲಿ ಅಥವಾ ಇಲಾಖೆಯ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರತೇರ ಸಂಘ ಸಂಸ್ಥೆಗಳ ಸಹಕಾರ ಪಡೆದು ಸಮೀಕ್ಷೆ ನಡೆಸಿ ಪ್ರಮಾಣಿಕ ಪ್ರಯತ್ನದಿಂದ ಕಾರ್ಯಕ್ರಮ ಅನುಷ್ಠಾನಗೊಳಿಸಲು ಜಿಲ್ಲಾ ಆಡಳಿತ ಮುಂದಾಗಿ ಅನುದಾನ ಸೋರಿಕೆ ಆಗದಂತೆ ಕ್ರಮ ವಹಿಸಬೇಕೆಂದು ಸಲಹೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಪ್ರೇರಕರ ಒಕ್ಕೂಟ ಅಧ್ಯಕ್ಷ ಗುಂಡಪ್ಪ ರಾಮನ, ಪ್ರೇರಕರಾದ ಚಂದ್ರಕಾಂತ ಹಿರೋಳ್ಳಿ, ಗೌತಮ ಕಾಂಬಳೆ ಉಪಸ್ಥಿತರಿದ್ದರು.