ಪ್ರೇಮ ವೈಫಲ್ಯ: ಸಹಪಾಠಿ ಕೊಂದು ಗುಂಡು ಹಾರಿಸಿಕೊಂಡ ವಿದ್ಯಾರ್ಥಿ

ನೋಯ್ಡಾ, ಮೇ.೧೯ – ಗ್ರೇಟರ್ ನೋಯ್ಡಾ ವಿಶ್ವವಿದ್ಯಾನಿಲಯದ ಮೂರನೇ ವರ್ಷದ ವಿದ್ಯಾರ್ಥಿ ಕ್ಯಾಂಪಸ್ ಆವರಣದಲ್ಲಿ ಪ್ರೇಮ ವೈಫಲ್ಯದಿಂದ ಸಹಪಾಠಿಯನ್ನು ಕೊಂದು ತನ್ನ ಮೇಲೆ ಗುಂಡು ಹಾರಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಶಿವ ನಾಡಾರ್ ವಿಶ್ವವಿದ್ಯಾನಿಲಯದಲ್ಲಿ ಪದವಿಪೂರ್ವ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್‌ಗೆ ಹಿಂತಿರುಗುವ ಮೊದಲು ಕ್ಯಾಂಪಸ್‌ನಲ್ಲಿ ಪಾಯಿಂಟ್-ಬ್ಲಾಂಕ್ ರೇಂಜ್‌ನಿಂದ ಸಹಪಾಠಿ ಗುಂಡು ಹಾರಿಸಿ ತಾನೂ ಹಾರಿಸಿಕೊಂಡಿದ್ದಾರೆ.
೨೧ ವರ್ಷ ವಯಸ್ಸಿನ ಮೂರನೇ ವರ್ಷದ ಸಮಾಜಶಾಸ್ತ್ರದಲ್ಲಿ ಇಬ್ಬರೂ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ – ಸ್ನೇಹಾ ಚೌರಾಸಿಯಾ ಅವರು ಆಸ್ಪತ್ರೆಗೆ ತಲುಪುವ ಮೊದಲು ಮತ್ತು ಶೂಟರ್ ಅನುಜ್ ಸಿಂಗ್ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆ ಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಜ್ ದಾದ್ರಿಯಲ್ಲಿರುವ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ಗಳ ಪಕ್ಕದಲ್ಲಿರುವ ಡೈನಿಂಗ್ ಹಾಲ್ ೨ ರ ಹೊರಗೆ ಸ್ನೇಹಾಳನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ದೃಶ್ಯಗಳು ಡೈನಿಂಗ್ ಹಾಲ್‌ನಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾಗಿವೆ.
ಹೊಟ್ಟೆ ಮತ್ತು ಎದೆಗೆ ಎರಡು ಗುಂಡು ತಗುಲಿ ಸ್ನೇಹಾ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ. ಅನುಜ್ ತನ್ನ ತಲೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು. ಪೊಲೀಸರು ಹೇಳಿದ್ದಾರೆ.
ಯಥಾರ್ಥ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಸುನಿಲ್ ಬಲ್ಯಾನ್, ಶಿವ ನಾಡರ್ ವಿಶ್ವವಿದ್ಯಾಲಯದ ಆಂಬ್ಯುಲೆನ್ಸ್ ಮತ್ತು ಅವರ ಶುಶ್ರೂಷಾ ಸಿಬ್ಬಂದಿಯ ಮೂಲಕ ಸ್ನೇಹಾಳನ್ನು ತುರ್ತು ವಿಭಾಗಕ್ಕೆ ಕರೆತರಲಾಯಿತು.ಆದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇಬ್ಬರೂ ಕೆಲವು ಸಮಯದಿಂದ ಸಂಬಂಧ ಹೊಂದಿದ್ದರು ಮತ್ತು ಮುರಿದುಬಿದ್ದಿತ್ತು ಅವಳು ಬೇರೊಬ್ಬರನ್ನು ಪ್ರೀತಿಸುತ್ತಿದ್ದಳು ಇದೇ ಕಾರಣಕ್ಕೆ ಆತ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ತಿಳಿಸಲಾಗಿದೆ.
ಡೆತ್ ನೋಟ್ ಅನ್ನು ಈ ಮೇಲ್ ನಲ್ಲಿ ಕಳುಹಿಸಲಾಗಿದ್ದು ಮೇಲ್‌ನಲ್ಲಿ, ಅನುಜ್ ತನ್ನ ಮತ್ತು ಸ್ನೇಹಾಳ ಪೋಷಕರಿಗೆ “ಯಾವುದೇ ಸಮಸ್ಯೆ ಸೃಷ್ಟಿಸಬೇಡಿ” ಎಂದು ವಿನಂತಿಸುತ್ತಾನೆ ಮತ್ತು “ನೀವು ಸಾಧ್ಯವಾದರೆ ದಯವಿಟ್ಟು ನನ್ನನ್ನು ಕ್ಷಮಿಸಿ” ಎಂದು ಬರೆದಿದ್ದಾನೆ.
ಸ್ನೇಹಾಳ ಕುಟುಂಬ ಕಾನ್ಪುರದಲ್ಲಿ ಮತ್ತು ಅನುಜ್ ಅಮ್ರೋಹಾದಲ್ಲಿ ನೆಲೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ದಾದ್ರಿ ಪೊಲೀಸ್ ಠಾಣೆಯ ತಂಡ, ಹಿರಿಯ ಅಧಿಕಾರಿಗಳೊಂದಿಗೆ ನಮಗೆ ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ಧಾವಿಸಿತು. ಮಹಿಳೆಯೊಬ್ಬರು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣ ಯಥಾರ್ಥ್ ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಡಿಸಿಪಿ ಸಾದ್ ಮಿಯಾ ಖಾನ್ ಹೇಳಿದ್ದಾರೆ.