ಪ್ರೇಮ ವೈಫಲ್ಯನೇಣು ಹಾಕಿಕೊಂಡು ಫುಡ್ ಡೆಲಿವರಿ ಬಾಯ್ ಆತ್ಮಹತ್ಯೆ

ಕಲಬುರಗಿ,ಜು.30-ಪ್ರೇಮ ವೈಫಲ್ಯದಿಂದ ಮನನೊಂದು ಯುವಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಓಂ ನಗರ ಬಡಾವಣೆಯಲ್ಲಿ ನಡೆದಿದೆ.
ಇಲ್ಲಿನ ಶಿವಾಜಿ ನಗರದಲ್ಲಿ ವಾಸವಿದ್ದ ಮೂಲತ: ಆಳಂದ ತಾಲ್ಲೂಕಿನ ಬೆಡಜೇವರ್ಗಿ ಗ್ರಾಮದÀ ರಾಜಕುಮಾರ ತಂದೆ ರಾಮಚಂದ್ರ (23) ಆತ್ಮಹತ್ಯೆ ಮಾಡಿಕೊಂಡ ಯುವಕ.
ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಾಜಕುಮಾರ ಪ್ರೇಮ ವೈಫಲ್ಯದಿಂದ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಎಂ.ಬಿ.ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.