ಪ್ರೇಮ ಯಾನಕ್ಕೆ 25ರ ಸಂಭ್ರಮ

ನೆನಪಿರಲಿ” ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ ನಟ ಲವ್ಲಿ ಸ್ಟಾರ್ ಪ್ರೇಮ್ ಅವರು ವೃತ್ತಿ ಬದುಕಿನಲ್ಲಿ ೨೫ನೇ ಚಿತ್ರ ಪೂರ್ಣಗೊಳಿಸಿದ್ದಾರೆ. ಅದುವೇ “ಪ್ರೇಮಂ ಪೂಜ್ಯಂ.” ಈ ಹಿನ್ನೆಲೆಯಲ್ಲಿ ಪ್ರೇಮ್ ಅವರನ್ನು ವಿಭಿನ್ನವಾಗಿ ತೆರೆಯಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಡಾ.ಬಿ.ಎಸ್. ರಾಘವೇಂದ್ರ ಬಹುತೇಕ ವೈದ್ಯರೇ ಸೇರಿ ನಿರ್ಮಿಸಿರುವ ಇದು.
ವಿದ್ಯಾರ್ಥಿ ಜೀವನದಿಂದ ಹಿಡಿದು ನಾಯಕನ ಪ್ರೀತಿಯ ಕಥೆಯ ವಿವಿಧ ಹಂತಗಳನ್ನು ಹೇಳುವ ಚಿತ್ರವಿದು.
ಲವ್ಲಿ ಸ್ಟಾರ್ ಪ್ರೇಮ್, ಬೃಂದಾ ಆಚಾರ್ಯ, ಐಂದ್ರಿತಾ ರೇ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ಪ್ರೇಮಿಗಳು, ತಂದೆ-ತಾಯಿ, ಸ್ನೇಹಿತರು ಈ ಎಲ್ಲ ಸಂಬಂಧಗಳಲ್ಲೂ ಪೂಜನೀಯ ಭಾವನೆ ಇರಬೇಕೆಂಬ ಉತ್ತಮ ಸಂದೇಶವಿದೆ, ಡಾ.ರಕ್ಷಿತ್ ಕದಂಬಾಡಿ, ಡಾ. ರಾಜ್‌ಕುಮಾರ್ ಜಾನಕಿರಾಮನ್, ಮನೋಜ್ ಕೃಷ್ಣನ್ ಹಾಗೂ ರಾಘವೇಂದ್ರ ಎಸ್. ಸೇರಿ ಚಿತ್ರ ನಿರ್ಮಿಸಿದ್ದಾರೆ.
ಮಾಧವ ಕಿರಣ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ನವೀನ್ ಕುಮಾರ್ ಕ್ಯಾಮೆರಾವರ್ಕ್, ರಾಘವೇಂದ್ರ ಸಂಗೀತ ಸಂಯೋಜನೆ, ಹರೀಶ್ ಕೊಮ್ಮೆ ಸಂಕಲನ ಚಿತ್ರಕ್ಕಿದೆ. ಮಾಸ್ಟರ್ ಆನಂದ್, ಟಿ.ಎಸ್.ನಾಗಾಭರಣ, ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ೧೪ ಹಾಡುಗಳಿದ್ದು ಎಲ್ಲವೂ ಕಥೆಗೆ ಪೂರಕವಾಗಿ ಸಾಗಲಿದೆ ಜೊತೆಗೆ ಪ್ರೇಮ್ ಹತ್ತು ಕೆಕೆಜಿಗೂ ಹೆಚ್ಚು ದೇಹ ತೂಕ ಕಡಿಮೆ ಮಾಡಿಕೊಂಡು ಮತ್ತೆ ಹೆಚ್ಚಳ ಮಾಡಿಕೊಂಡಿದ್ದಾರೆ ಇದೇ ವಾರ ರಾಜ್ಯಾದ್ಯಂತ ತೆರೆ ಮೇಲೆ ಕಾಣಿಸಿಕೊಳ್ಳಲಿದೆ.
ಕೊರೊನಾ ಸೋಂಕು ಸೇರಿದಂತೆ ವಿವಿಧ ಕಾರಣಗಳಿಗಾಗಿ ಎರಡು ಮೂರು ಬಾರಿ ಬಿಡುಗಡೆ ದಿನಾಂಕ ಮುಂದೂಡ ಲಾಗಿ. ಇದೀಗ ತೆರೆಯ ಮೇಲೆ ರಂಜಿಸಲು ಬರುತ್ತಿದೆ.