ಪ್ರೇಮ್‌ಸಾಗರ್ ಫೌಂಡೇಷನ್‌ನಿಂದ ಬಡವರಿಗೆ ಕಿಟ್ ವಿತರಣೆ

ದಾವಣಗೆರೆ, ಜೂ.೪: ದೆಹಲಿಯ ರಾಜ್ ವಿದ್ಯಾಕೇಂದ್ರ ಹಾಗೂ ಪ್ರೇಮ್‌ಸಾಗರ್ ಫೌಂಡೇಷನ್ ಸಹಯೋಗದಲ್ಲಿ ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ, ಅಲೆಮಾರಿ ಜನರಿಗೆ ಉತ್ತಮ ಗುಣಮಟ್ಟದ ಆಹಾರ ದಿನಸಿ ಪದಾರ್ಥಗಳ ಕಿಟ್‌ಗಳನ್ನು ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಕಿಟ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಇನ್ನೂ ಹೆಚ್ಚಿನ ಸಂಘ ಸಂಸ್ಥೆಗಳು ಮುಂದೆ ಬರಬೇಕು. ಇದರಿಂದ ನಿರ್ಗತಿಕ ಕುಟುಂಬಗಳಿಗೆ ಅಲ್ಪ ಸಹಾಯ ದೊರೆತಂತಾಗುತ್ತದೆ ಎಂದರು.ನಗರದ ಡಿಸಿ ಕಚೇರಿ ಸಮೀಪ, ಶಕ್ತಿನಗರ, ಆನಗೋಡು ಬಳಿ ತೆರಳಿ ಸುಮಾರು 100 ಆಹಾರ ದಿನಸಿ ಕಿಟ್‌ಗಳನ್ನು, ಮಾಸ್ಕ್ಗಳನ್ನು ವಿತರಿಸಿ ಸರ್ಕಾರದ ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಅನುಸರಿಸುವಂತೆ ಜಾಗೃತಿ ಮೂಡಿಸಲಾಯಿತು. ಫೌಂಡೇಷನ್‌ನ ಜಿಲ್ಲಾ ಸಂಯೋಜಕ ಎಂ.ಎಸ್.ರಾಮಚಂದ್ರಪ್ಪ, ಸ್ವಯಂ ಸೇವಕರಾದ ಸುಮಾ, ರಾಕೇಶ ಇತರರು ಇದ್ದರು.