ಪ್ರೇಮಿಗಳ ದಿನದ ಬದಲು ಕರಾಳ ದಿನವನ್ನಾಗಿ ಆಚರಿಸಿ

ವಿಜಯಪುರ, ಫೆ.೧೯: ೧೪ರ ದಿನಾಂಕವನ್ನು ಪ್ರೇಮಿಗಳ ದಿನವನ್ನಾಗಿ ಆಚರಿಸುವ ಬದಲು ಪ್ರತಿಯೊಬ್ಬ ಭಾರತೀಯರು ದಿನವನ್ನಾಗಿ ಆಚರಿಸಬೇಕೆಂದು ಜೈ ಹಿಂದ್ ಯೋಧ ನಮನ ಬಳಗದ ರವಿಕುಮಾರ್ ತಿಳಿಸಿದರು.
ಅವರು ಗಾಂಧಿ ಚೌಕದಲ್ಲಿ ಜೈ ಹಿಂದ್ ಯೋಧ ನಮನ ಬಳಗದ ವತಿಯಿಂದ ಏರ್ಪಡಿಸಲಾದ ಕಾಶ್ಮೀರದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದಂತಹ ಸೈನಿಕರ ಕುಟುಂಬಕ್ಕೆ ಸಾಂತ್ವನ ರೂಪವಾಗಿ ಹಾಗೂ ಸೈನಿಕರಿಗೆ ಶ್ರದ್ಧಾಂಜಲಿ ಸೂಚಿಸುವ ಸಲುವಾಗಿ ದೀಪಗಳನ್ನು ಹಿಡಿದು, ತಾಯಿ ಭಾರತ ಮಾತೆಯ ಭಾವ ಚಿತ್ರದೊಂದಿಗೆ ಹೊರಟ ಮೌನ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
೨೦೧೯ರ ಫೆಬ್ರುವರಿ ೧೪ರಂದು ಪಾಕಿಸ್ತಾನಿ ಬೆಂಬಲಿತ ಉಗ್ರಗಾಮಿಗಳು ಭಾರತೀಯ ಸೇನೆಯ ವಾಹನದ ಮೇಲೆ ಬಾಂಬ್ ಧಾಳಿ ಎಸೆಗುವ ಮೂಲಕ ನಮ್ಮ ೪೦ ವೀರ ಯೋಧರು ಹುತಾತ್ಮರಾದಂತಹ ದಿನವನ್ನು ನಾವು ಪ್ರೇಮಿಗಳ ದಿನವನ್ನಾಗಿ ಆಚರಿಸದೆ ಕರಾಳ ದಿನವನ್ನಾಗಿ ಆಚರಿಸಬೇಕಾಗಿದೆ ಎಂದು ತಿಳಿಸಿದರು.
ಜೈ ಹಿಂದ್ ಯೋಧ ನಮನ ಬಳಗದ ರಾಮಕೃಷ್ಣ ಹೆಗಡೆ, ಪುರಸಭಾ ಸದಸ್ಯರಾದ ಶಿಲ್ಪ ಅಜಿತ್ ಕುಮಾರ್, ಮಾಜಿ ಸದಸ್ಯರಾದ ಚ.ವಿಜಯಬಾಬು, ಮಹಂತಿನ ಮಠದ ಕಾರ್ಯದರ್ಶಿ ವಿ ವಿಶ್ವನಾಥ್, ಶಾಮಣ್ಣ, ಸುಬ್ಬಣ್ಣ ಮತ್ತಿತರರು ಭಾಗವಹಿಸಿದ್ದರು.
ಜೈ ಹಿಂದ್ ಯೋಧ ನಮನ ಬಳಗದ ಕಾರ್ಯಕರ್ತರು ದೀಪಗಳನ್ನು ಹಿಡಿದು ಗಾಂಧಿ ಚೌಕದಿಂದ ಅಂಕತಟ್ಟಿ ನಂಜುಂಡಪ್ಪ ವೃತ್ತದವರೆಗೂ ಮೌನ ಮೆರವಣಿಗೆ ಕೈಗೊಂಡಿದ್ದರು.