ಪ್ರೇಮಿಗಳ ದಿನದಂದು ಪುಸ್ತಕ ಬಿಡುಗಡೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಫೆ.12: ತಾಲೂಕಿನ ಸುಟ್ಟುಕೋಡಿಹಳ್ಳಿ ಗ್ರಾಮದ ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಉಜ್ಜಿನಿ ರುದ್ರಪ್ಪ ಅವರು ರಚಿಸಿರುವ ಧರ್ಮ, ಜಾತಿಯ ಸಂಕೋಲೆಯನ್ನು ಕಿತ್ತೆಸೆದು ಪ್ರೀತಿಸಿ ಮದುವೆಯಾದ ಯಶಸ್ವಿ ಜೋಡಿಗಳ ನೈಜ ಘಟನೆಗಳನ್ನು ಒಳಗೊಂಡ “ಪ್ರೀತಿಯನ್ನು ಹಂಬಲಿಸಿ”  ಎಂಬ ಪುಸ್ತಕ ಫೆಬ್ರವರಿ 14 ರಂದು ಲೋಕಾರ್ಪಣೆಯಾಗಲಿದೆ.
ನಂತರ ಮಾತಾನಾಡಿದ ಅವರು
ಪ್ರೇಮಿಗಳ ದಿನದಂದು, ಈ ಪುಸ್ತಕ ಲೋಕಾರ್ಪಣೆಗೊಳ್ಳುತ್ತಿರುವುದು ಮತ್ತೊಂದು ವಿಶೇಷ. ಈ ಪುಸ್ತಕ  ಪ್ರೀತಿಯ ಹಂಬಲಕ್ಕೆ ಬಿದ್ದ ಯುವಕ-ಯುವತಿಯರಿಗೆ ಪ್ರೀತಿ ಏನೆಂಬುದನ್ನು ಅರಿವು ಮೂಡಿಸುತ್ತದೆ. ದೈಹಿಕ ಆಕರ್ಷಣೆ ಮಾತ್ರವಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುತ್ತದೆ.  ಪ್ರೀತಿಯಲ್ಲಿಯೂ ನೋವು ಇದೆ. ನಲಿವಿದೆ. ಸಮಾಜದಲ್ಲಿ ಮಾದರಿ ಜೋಡಿಯಾಗಿ ಬದುಕಬೇಕು ಎಂಬ ಛಲವನ್ನು ಮೂಡಿಸುತ್ತದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಸಮಾಜದಲ್ಲಿನ ಜಾತಿಯ ವ್ಯವಸ್ಥೆಯನ್ನು ತೊಡೆದು ಹಾಕಿ ಸಮ ಸಮಾಜ ಕಟ್ಟಬಲ್ಲವು ಎಂಬುದನ್ನು ಈ ಕೃತಿಯಲ್ಲಿದೆ.
ಪ್ರೀತಿಸಿ ಮದುವೆಯಾಗುವುದು ಸಿನಿಮಾಗಳಲ್ಲಿ ನೋಡಿದಷ್ಟು, ಕತೆ ಕಾದಂಬರಿಗಳಲ್ಲಿ ಓದಿದಷ್ಟು ಸುಲಭವಲ್ಲ.
ಬದುಕಿನ ಕಟು ವಾಸ್ತವವೇ ಬೇರೆ ಎಂಬುದನ್ನು ಪ್ರೀತಿಯನ್ನು ಹಂಬಲಿಸಿ ಕೃತಿಯಲ್ಲಿನ ಪ್ರೇಮಿಗಳ ಬದುಕಿನ ಘಟನೆಗಳು ಎಚ್ಚರಿಕೆ ಮತ್ತು ಅರಿವುವನ್ನು ಪ್ರೀತಿಯ ಹಂಬಲಕ್ಕೆ ಹಾತೊರೆಯುವ ಯುವಕ ಯುವತಿಯರಿಗೆ ಮೂಡಿಸುತ್ತದೆ.
ಇದೇ ವಿಷಯವನ್ನು ಒಳಗೊಂಡ  ಪ್ರೀತಿಸಿ ಮದುವೆಯಾದ 40 ಜೋಡಿಗಳ ಬದುಕಿನ ಘಟನೆಗಳನ್ನು ಒಳಗೊಂಡ  “ವಾಸ್ತವ” ಕೃತಿಯನನ್ನು 2016 ರಲ್ಲಿ ಬಿಡುಗಡೆಗೊಳಿಸಿದ್ದರು. ಇದು ಓದುಗರರ ಮೆಚ್ಚುಗೆ, ಪ್ರಶಂಸೆ ಮತ್ತು ಪ್ರೀತಿಯನ್ನು ಪಡೆದಿತ್ತು. ಭೂಮಿ ಹುಟ್ಟಿದಾಗಿನಿಂದ ಪ್ರೀತಿ ಹುಟ್ಟಿದೆ. ಭೂಮಿ ಇರುವ ತನಕವೂ ಪ್ರೀತಿ ಬದುಕಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರೀತಿಸಿ ಮದುವೆಯಾದವರ ಇತಿಹಾಸ, ಚರಿತ್ರೆ, ಪುರಾಣದಲ್ಲಿ ಅನೇಕ ಘಟನಾವಳಿಗಳು ಸಾಕ್ಷೀಕರಿಸುತ್ತವೆ.
“ಪ್ರೀತಿಯನ್ನು ಹಂಬಲಿಸಿ” ಕೃತಿಯು 31 ಜೋಡಿಗಳ ಬದುಕಿನ ನೈಜ ಘಟನೆಗಳನ್ನು ಒಳಗೊಂಡಿದೆ. ಪ್ರೀತಿಸುವ ಮನಸ್ಸಿದ್ದರೆ ಅಂಗವಿಕತೆ ಅಡ್ಡಿಯಾಗದು ಎಂಬುದಕ್ಕೆ ಬದ್ದಿ ದುರುಗೇಶನ ಪ್ರೇಮ ವಿವಾಹ, ಮೂಕಳಾದರೇನು ಹೃದಯಕ್ಕೆ ಪ್ರೀತಿಯ ಅರ್ಥವಾಗುತ್ತದೆ ಎಂಬುದನ್ನು ಸಾಭೀತು ಮಾಡಿದ್ದಾಳೆ ಮೈದೂರು ಅಶ್ವಿನಿ. ಮತಾಂಧರಿಂದಾಗಿಯೇ ನಮ್ಮ  ಪ್ರೀತಿ ಚಿಗುರಿ ಮದುವೆಯಾದ ಸತೀಶ ಮತ್ತು ನಗ್ಮಾ, ನಡುರಾತ್ರಿ ಮದುವೆಯಾದ ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ, ಅನಾಥೆಗೆ ಬಾಳುಕೊಟ್ಟ ಕಾವಲ್ಲಿ ಶಿವಪ್ಪನಾಯಕ,
ಬಾಣಲೆಯಿಂದ ಬೆಂಕಿಗೆ ಬಿದ್ದ ವೇದಾವತಿಯ ಕರುಣಾಜನಕ ಪ್ರೇಮ ಕತೆ, ಪ್ರೀತಿಯನ್ನು ಬೆಸೆದಿದ್ದು ಹಳ್ಳದ ಒರತೆ..! ಹುಡುಗಿಯನ್ನು ಕೇಳದೆ ಪ್ರೀತಿಸಿ ಪ್ರೀತಿಸಿದ ಮಲ್ಲಿಕಾರ್ಜುನ ಕಲಮರನಹಳ್ಳಿ, ಹುಡುಗಿಯ ಮುಖವನ್ನೇ ನೋಡದೆ ತಾಳಿಯೊಂದಿಗೆ ಮದುವೆಯಾಗಲು  ಹೋಗಿದ್ದ ಕರಿಬಸಪ್ಪ..!
ಆ ಹುಡುಗಿಯಿಂದ ಬದುಕು ಕಲಿತುಕೊಂಡೆ ಅನ್ನುವ ಹನುಮೇಶ, ಅಗ್ನಿ ಪರೀಕ್ಷೆ ಗೆದ್ದ ಅಕ್ಬರ್ ಅಲಿ, ಖುಷ್ಬು. ನಮ್ಮಿಬ್ಬರನ್ನು ಬೆಸೆದಿದ್ದು ಮೊಬೈಲ್ ಅನ್ನುವ ದೇವಿಕಾ ಹೀಗೆ ಒಂದೊಂದು ಜೋಡಿಯದ್ದು, ಮೈನವಿರೇಳಿಸುವ, ಕುತೂಹಲ ಮೂಡಿಸುವ ಘಟನಾವಳಿಗಳು ಈ ಕೃತಿ ಒಳಗೊಂಡಿದೆ.
ಪ್ರೇಮಿಗಳು ತಮ್ಮ ಬದುಕಿನಲ್ಲಿ ಅನುಭವಿಸಿದ ಪ್ರಸಂಗಗಳು ಎದುರಿಸಿದ ಕಷ್ಟಗಳು ಯಾವುದೇ ಸಾಹಿತ್ಯ ಕೃತಿಯಲ್ಲಿ ಓದಲು ಸಿಗದ, ಸಿನಿಮಾಗಳಲ್ಲಿ ನೋಡಿಲ್ಲದ ಘಟನೆಗಳು “ಪ್ರೀತಿಯನ್ನು ಹಂಬಲಿಸಿ” ಕೃತಿಯಲ್ಲಿವೆ. ಈ ಪುಸ್ತಕ, ಓದುಗರರನ್ನು ಪ್ರೇಮಲೋಕದಲ್ಲಿ ತೇಲಿಸಿ, ಕಣ್ಣನ್ನು ಹನಿಗೂಡಿಸಿ, ಹೀಗೂ ಸಾಧ್ಯವೇ ಎಂಬುದರ ಕುತೂಹಲ ಅಚ್ಚರಿ ಮೂಡಿಸುತ್ತದೆ. ಈ ಜೋಡಿಗಳನ್ನು ಹುಡುಕಿ, ಅವರ ಊರು, ಪಟ್ಟಣ, ನಗರಗಳಿಗೆ ತೆರಳಿ, ಅವರನ್ನು ಸಂದರ್ಶಿಸಿ ಅದ್ಬುತವಾಗಿ ನಿರೂಪಣಾ ಶೈಲಿಯಲ್ಲಿ ಕೃತಿಯನ್ನು ಹೊರತರಲಾಗಿದೆ ಕನ್ನಡ ಸಾಹಿತ್ಯದಲ್ಲಿ ಹೀಗೆ ಪ್ರೀತಿಸಿ ಮದುವೆಯಾದವರ ಕುರಿತು ಪುಸ್ತಕ ರೂಪದಲ್ಲಿ ಹೊರ ಬಂದಿರುವ ಮೊದಲ ಕೃತಿಗಳು.
ಪ್ರೇಮಿಗಳನ್ನು ಬೆಂಬಲಿಸುವುದಾಗಲಿ, ವಿರೋಧಿಸುವುದಾಗಲಿ ನಮ್ಮ ಆಶಯವಲ್ಲ. ಬದಲಾಗಿ ನಮ್ಮ ಸಮಾಜದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳದ್ದೆ ಒಂದು ಪ್ರತ್ಯೇಕ ಸಮಾಜವಿದೆ. ಪ್ರೀತಿಯೇ ನಮ್ಮ ಧರ್ಮ, ಪ್ರೀತಿಯೇ ನಮ್ಮ ಬದುಕು ಎಂದು ಹೆತ್ತವರಿಂದ ಬಂಧು ಬಳಗದಿಂದ ದೂರವಾಗಿ  ನಮ್ಮ ನಡುವೆ ಸುಂದರವಾಗಿ ಬದುಕು ಕಟ್ಟಿಕೊಂಡು ಬದುಕುವವರ ವಾಸ್ತವದ ಚಿತ್ರಣವನ್ನು ಇಲ್ಲಿ ಅನಾವರಣಗೊಳಿಸಿದ್ದೇನೆ.
ಪ್ರೀತಿಯ ಹಂಬಲಕ್ಕೆ ಬಿದ್ದವರು, ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರ ಕಟ್ಟಿಕೊಂಡವರು, ತಪ್ಪದೆ ಫೆಬ್ರವರಿ ೧೪ರಂದು ಬೆಳಗ್ಗೆ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಪ್ರೀತಿಯನ್ನು ಹಂಬಲಿಸಿ ಕೃತಿಯನ್ನು ಮಾಜಿ ಲೋಕಾಯುಕ್ತರಾದ ಸಂತೋಷ ಹೆಗಡೆ ಲೋಕಾರ್ಪಣೆ ಮಾಡಲಿದ್ದಾರೆ.
ಖ್ಯಾತ ಕವಿ, ವಿಮರ್ಶಕ ಪ್ರೋ. ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ ಕುಂ.ವೀರಭದ್ರಪ್ಪ, ಇಸ್ರೋ ವಿಜ್ಞಾನಿ ದಾರುಕೇಶ, ಕೊಪ್ಪಳ ವಿ.ವಿ. ಕುಲಪತಿ ಡಾ. ಬಿ.ಕೆ. ರವಿ, ಅಕ್ಕಮಹಾದೇವಿ ಪ್ರಶಸ್ತಿ ಪುರಸ್ಕೃತೆ ಡಾ. ವಸುಂಧಾರ ಭೂಪತಿ, ಪುಸ್ತಕ ಕುರಿತು ಹಿರಿಯ ಕವಿ ಮುಕುಂದರಾಜ್ ಮಾತನಾಡಲಿದ್ದಾರೆ. ಸಿನಿಮಾ ನಟ ಹಾಗೂ ಹೋರಾಟಗಾರ ಚೇತನ ಕುಮಾರ್ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.