ಪ್ರೇಮಮಯಿ ಹೃದಯಗಳ ವಿಷಯ

ಪ್ರೇಮಮಯಿ”ಚಿತ್ರ ಸೆಟ್ಟೇರಿದೆ. ಇದು ಹೃದಯಗಳ ವಿಷಯವಾಗಿರುವ ಹಿನ್ನೆಲೆಯಲ್ಲಿ ಪ್ರೀತಿ,ಪ್ರೇಮಕ್ಕೆ ಒತ್ತು ನೀಡಿರುವ ಚಿತ್ರ. ಶಿವಮೊಗ್ಗ, ಬೆಂಗಳೂರು ಹಾಗೂ ಗೋವಾದ ವಿವಿಧ ಕಡೆ ಚಿತ್ರೀಕರಣ ನಡೆಸಲು ತಂಡ ಯೋಜನೆ ರೂಪಿಸಿಕೊಂಡಿದೆ.
ರಘುವರ್ಮ ಚಿತ್ರಕ್ಕೆ ಕತೆ,ಚಿತ್ರಕತೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಚಿತ್ರಕ್ಕೆ ಎಲ್.ನಾಗಭೂಷಣ್ ಬಂಡವಾಳ ಹಾಕುತ್ತಿದ್ದು ಅವರೊಂದಿಗೆ ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಮತ್ತು ಪಿ.ಎನ್.ಕಿರಣ್ಕುಮಾರ್ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ.
ಪ್ರೀತಿ, ಪ್ರೇಮ ಪ್ರತಿಯೊಬ್ಬರ ಜೀವನ, ಮನಸ್ಸಿನಲ್ಲಿ ಇರುತ್ತದೆ. ತಂದೆ-ಮಗ, ಸ್ನೇಹಿತ ಎಲ್ಲರಲ್ಲಿ ಪ್ರೀತಿ ಯಾವ ರೀತಿ ಮೂಡುತ್ತೆ. ಜನರು ಇದನ್ನು ಹುಡುಗ-ಹುಡುಗಿ, ತಂದೆ-ಮಗ ಅಥವಾ ಸ್ನೇಹಿತನ ಮೇಲೆ ಪ್ರೀತಿ ಅನ್ನೋದನ್ನು ತೆಗೆದುಕೊಳ್ತಾರಾ ಎನ್ನುವುದನ್ನು ನಿರ್ಧಾರಕ್ಕೆ ಬಿಡಲಾಗಿದೆ. ಅಪ್ಪನ ಜವಬ್ದಾರಿ ಬಂದಾಗ ಆತ ಏನು ಮಾಡ್ತಾನೆ ಎನ್ನುವ ತಿರುಳು ಹೊಂದಿದೆ ಎನ್ನುವ ವಿವರ ನಿರ್ದೇಶಕ ರಘುವರ್ಮ ಅವರದು. ವಯಸ್ಸಾದ ಪೋಷಕರನ್ನು ಮಕ್ಕಳು ಹೇಗೆ ನೋಡಿಕೊಳ್ಳಬೇಕು. ಇದರ ಜೊತೆಗೆ ರೈತರ ವಿಷಯಗಳನ್ನು ಚಿತ್ರದ ಮೂಲಕ ಕಟ್ಟಕಕೊಡಲಾಗುತ್ತಿದೆ. ನಾಯಕ ರೈತನಾಗಿ ಬರುವ ದೃಶ್ಯಗಳು ಇರಲಿದೆ. ’ಓದು ಬರಹ ಇರಲೂ ಬೇಕು.
ಅದರೊಂದಿಗೆ ನಮ್ಮದೆ ಆದಂತಹ ಕೆಲಸನೂ ಇರಬೇಕು’ ಎಂಬುದನ್ನು ಸಂದೇಶದಲ್ಲಿ ಹೇಳಲಾಗುತ್ತಿದೆ ಎನ್ನುವುದು ಚಿತ್ರದ ಸಾರ ಎನ್ನುತ್ತಾರೆ ನಿರ್ದೇಶಕರು.
ಚಿತ್ರದಲ್ಲಿ ರಾಮು, ಸುರಕ್ಷಿತ, ಶಂಕರ್.ಎ, ಅರ್ಚನಾ, ಗೂಳಿಸೋಮ, ಶಂಕರ್.ಎಸ್, ಆಂಜನಪ್ಪ, ಶಿವಕುಮಾರ್‌ಆರಾಧ್ಯ, ಸಂದೀಪ್ಮಲಾನಿ, ಕಲಾರತಿ ಮಹದೇವ್, ವಿಕ್ಟರಿವಾಸು, ಶಿಲ್ಪಮೂರ್ತಿ ಮುಂತಾದವರು ನಟಿಸುತ್ತಿದ್ದಾರೆ. ಐದು ಹಾಡುಗಳಿಗೆ ಸಂಗೀತ ಕಾರ್ತಿಕ್ವೆಂಕಟೇಶ್, ಛಾಯಾಗ್ರಹಣ ಕೀರ್ತಿವರ್ಧನ್, ಸಂಕಲನ ಭಾರ್ಗವ್, ಸಾಹಸ ನವೀನ್, ನೃತ್ಯ ಮಲ್ಲಿಕಾರ್ಜುನ್ ಅವರದಾಗಿದೆ.
ಪ್ರೀತಿಗೆ ಆದ್ಯತೆ
ಪ್ರೀತಿ, ಪ್ರೇಮದ ವಿಷಯಕ್ಕೆ ಆದ್ಯತೆನೀಡುವ ಮುಂದಿಟ್ಟುP
ಂಡು ಚಿತ್ರೀಕರಣ ಮಾಡಲು ಮುಂದಾಗಿರುವ ಚಿತ್ರ “ಪ್ರೇಮಮಯಿ”. ಚಿತ್ರವನ್ನು ಬೆಂಗಳೂರು, ಶಿವಮೊಗ್ಗ, ಗೋವಾ ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ.ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಹೊಸಬರ ತಂಡ ಉತ್ಸಾಹದಲ್ಲಿ ಚಿತ್ರ ಮಾಡಲು ಮುಂದಾಗಿದೆ.