
ಅವಳ್ ಲೈಲಾ ಅಲ್ಲ ನಾನ್ ಮಜ್ನು ಅಲ್ಲ ಚಿತ್ರದ ಪ್ರೇಮಗೀತೆ ಬಿಡುಗಡೆಯಾಗಿದೆ. ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಹಾಡು ಬಿಡುಗಡೆ ಮಾಡಿ ಹಾರೈಸಿದರು.
ಯಲ್ಲು ಪುಣ್ಯಕೋಟಿ ನಿರ್ದೇಶನದ ಚಿತ್ರದಲ್ಲಿ ಅಜಯ್ ಚಿತ್ರದ ನಾಯಕ, ನಿಹಾರಿಕಾ, ಅಶ್ವಿನಿ ನಾಯಕಿಯರಾಗಿ ಅಭಿನಯಿಸಿದ್ದಾರೆ. ನಾಯಕ ಹಾಗೂ ನಿರ್ಮಾಪಕ ಅಜಯ್ ಮಾತನಾಡಿ, ನಾವೇ ಬಂಡವಾಳ ಹೂಡಿ ಸಿನಿಮಾ ಆರಂಭಿಸಿದೆವು, ಕೋವಿಡ್‌ಗೂ ಮುಂಚೆಯೇ ಶುರು ಮಾಡಿದ್ದೆವು. 16 ರಿಂದ 24 ವರ್ಷದ ಹುಡುಗ, ಹುಡುಗಿಯರ ಕುರಿತಾದ ಚಿತ್ರ.
ಯಲ್ಲು ಒಳ್ಳೇ ಕಥೆ ಮಾಡಿಕೊಂಡು, ನಿರ್ದೇಶನ ಮಾಡಿದ್ದಾರೆ, ಸಂತು ಸಾಫ್ಟ್ ಹಾಗೂ ರಫ್ ಕ್ಯಾರೆಕ್ಟರ್ ಹುಡುಗನಾಗಿ ಎರಡು ಶೇಡ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ ಹೈಸ್ಕೂಲಿನಲ್ಲಿದ್ದಾಗ, ಕಾಲೇಜಿಗೆ ಹೋದ ಮೇಲೆ, ಆತನ ಜೀವನದಲ್ಲಿ ಪ್ರೀತಿ ಪ್ರೇಮದ ವಿಷಯದಲ್ಲಿ ಏನೇನು ಎನ್ನುವುದು ಚಿತ್ರದ ತಿರುಳು ಎಂದರು.
ನಿರ್ದೇಶಕ ಯಲ್ಲು ಪುಣ್ಯಕೋಟಿ ಮಾತನಾಡಿ ನಿರ್ದೇಶನದ ಬಗ್ಗೆ ಹೈದರಾಬಾದ್ ಕಡೆ ಹೋಗಿ ಒಂದಷ್ಟು ಕಲಿತೆ, ನಂತರ ಟಿವಿಯಲ್ಲಿ ಕೆಲಸ ಮಾಡುವಾಗ ಅಜಯ್ ಸಿಕ್ಕರು.ಹಳ್ಳಿ ಮತ್ತು ನಗರದಲ್ಲಿ ನಡೆಯುವ ಕಥೆ, ಚಿತ್ರದುರ್ಗ, ಹೊಸಪೇಟೆ, ಬೆಂಗಳುರು, ಹಿರಿಯೂರು, ಬಳ್ಳಾರಿ, ರಾಯಚೂರು ಕೊಪ್ಪಳ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ, ಹೈಸ್ಕೂಲ್ ಎಪಿಸೋಡನ್ನು ಚಿಕ್ಕಮಗಳೂರಲ್ಲಿ ಶೂಟ್ ಮಾಡಿದ್ದೇವೆ, ಚಿತ್ರವೀಗ ಬಿಡುಗಡೆಗೆ ಸಿದ್ದವಾಗಿದ್ದು ಸೆ.8ಕ್ಕೆ ಬಿಡುಗಡೆಯಾಗುತ್ತಿದೆ ಎಂದರು. ಡಿಂಗ್ರಿ ನರೇಶ್ ನಾಯಕನ ಸ್ನೇಹಿತನಾಗಿ ಕಾಣಿಸಿಕೊಂಡಿದ್ದಾರೆ.