
ಸಂಜೆವಾಣಿ ವಾರ್ತೆ
ಸಿರಿಗೇರಿ ಏ.2. ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಮಾ.30 ರಂದು ಗುರುವಾರ ಶ್ರೀರಾಮನವಮಿ ಮತ್ತು, ಸಿರಿಗೇರಮ್ಮದೇವಿ ಉತ್ಸವ ಪ್ರಯುಕ್ತ ರಾಮಾಯಣ- ವಾಲಿಸುಗ್ರೀವರ ಕಾಳಗ ಎಂಬ ಬಯಲಾಟ ಪ್ರದರ್ಶನಗೊಂಡಿತು. ಹೆಜ್ಜೆಗೆಜ್ಜೆ ಬಯಲಾಟ ಕಲಾಟ್ರಸ್ಟ್ ಲಕ್ಷ್ಮಿನಗರಕ್ಯಾಂಪ್ ಮುದ್ದಟನೂರು ಇವರ ತಮ್ಮ 6ನೇವರ್ಷದ ವಾರ್ಷಿಕೋತ್ಸವ ಅಂಗವಾಗಿ ಬಯಲಾಟ ಜಾನಪದ ಸಂಬ್ರಮ ಎಂಬ ಶೀರ್ಷಿಕೆ ಅಡಿಯಲ್ಲಿ ರಾಮಾಯಣ ಬಯಲಾಟದ ಪ್ರದರ್ಶನ ನಡೆಸಲಾಯಿತು. ಉತ್ಸವಕ್ಕೆ ಆಗಮಿಸಿದ್ದ ಸಿರಿಗೇರಿ ಮತ್ತು ವ್ಯಾಪ್ತಿಯ ಸಾವಿರಾರು ಪ್ರೇಕ್ಷಕರು ಬಯಲಾಟವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಮರುಳಸಿದ್ದಯ್ಯಸ್ವಾಮಿ, ಸಿ.ಎಂ.ಸಿದ್ದರಾಮಯ್ಯಸ್ವಾಮಿ, ಎಚ್.ಎಂ.ಮಲ್ಲಿಕಾರ್ಜುನಯ್ಯಸ್ವಾಮಿ, ಗೋಡೆ ಬೀಮನಗೌಡ, ವೈ.ವೀರೇಶಗೌಡ, ಬುಜ್ಜಿಗೌಡ ಇವರ ವ್ಯವಸ್ಥಾಪನೆಯಲ್ಲಿ ನಡೆದ ಬಯಲಾಟಕ್ಕೆ ನಿರ್ದೇಶನ ಮತ್ತು ಸಂಗೀತ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಹೆಚ್.ತಿಪ್ಪೇಸ್ವಾಮಿ, ಸಹ ನಿರ್ದೇಶನ ವೈ.ಮಂಜುನಾಥನಿನಾಸಂ, ಮದ್ದಳೆ ಹೆಚ್.ಭೀಮೇಶ, ಸ್ತ್ರೀಪಾತ್ರಧಾರಿಗಳಾಗಿ ಕಮಲಮ್ಮ ಕೂಡ್ಲೀಗಿ , ಗೀತಾಕೂಡ್ಲೀಗಿ, ದಿವ್ಯಹೊಸಪೇಟೆ, ಲಕ್ಷ್ಮಿಶಿವಮೊಗ್ಗ, ತುಳಸಿಧಾರವಾಡ, ಹಾಗೂ ಗಂಡು ಪಾತ್ರಧಾರಿಗಳಾಗಿ ಸ್ಥಳೀಯ ಎಸ್.ರವಿಕಿರಣ್, ಸಿ.ಎಂ.ನಟರಾಜಸ್ವಾಮಿ, ವೈ.ಮಲ್ಲಿಕಾರ್ಜುನ, ವೈ.ಚನ್ನಪ್ಪ, ಕೆ.ಶರಣಬಸವ, ಗ್ರಾ.ಪಂ.ಸಹಾಯಕ ಕೆ.ಲಿಂಗಪ್ಪ, ಜೆ.ಶ್ರೀನಿವಾಸ, ಎಸ್.ಧನುಂಜಯ, ಯಲ್ಲನಗೌಡ, ವೈ.ಜಡೇಶ, ಜಿ.ಪ್ರಕಾಶ್, ವೈ.ಚಿನ್ನಪ್ಪ ಇವರು ಉತ್ತಮ ಅಭಿನಯ ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದರು.