ಪ್ರೇಕ್ಷಕರ ಮನ ಗೆದ್ದ ಜಾನಪದ ಗೀತೆ ಸಮೂಹ ನೃತ್ಯ, ನಾಟಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.15: ರಾಘವ ಕಲಾ ಮಂದಿರದಲ್ಲಿ ಅಲಾಪ್ ಸಂಗೀತ ಕಲಾ ಟ್ರಸ್ಟ್, ಬಳ್ಳಾರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ,ವೀಶೆಷ ಘಟಕ ಯೋಜನೆಯಡಿಯಲ್ಲಿ ಜಾನಪದ ಗೀತೆ ಗಾಯನ, ಸಮೂಹ ನೃತ್ಯ,ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆಯನ್ನು ಹಿರಿಯ ಲೆಕ್ಕ ಪರಿಶೋಧಕರಾದ ಶ್ರೀ ಜಯಪ್ರಕಾಶ್ ಜೆ ಗುಪ್ತ ಮತ್ತು ವೇದಿಕೆ ಗಣ್ಯರೊಂದಿಗೆ ಹಾರ್ಮೋನಿಯಂ ಬಾರಿಸುವ ಮೂಲಕನೇರವೇರಿಸಲಾಯಿತು. ನಂತರ ಉದ್ಘಾಟನ ನುಡಿಗಳನ್ನು ಮಾತನಾಡಿದ ಪ್ರಸ್ತುತ ಸಂದರ್ಭದಲ್ಲಿ ಜನರು ಆಸಕ್ತಿಯಿಂದ ನಾಟಕ ನೋಡಲು ರಂಗಮಂದಿರ ಕಡೆ ಹೆಜ್ಜೆ ಹಾಕುತ್ತಿರುವುದು ಸಂತೋಷದ ವಿಷಯ ಪ್ರೇಕ್ಷಕರಿಗೆ ಉತ್ತಮವಾದಂತಹ ನಾಟಕಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬೇಕು.
ಕಲೆಗಳಲ್ಲಿ ನಾಟಕ ಸಂಗೀತ ಮತ್ತು ನೃತ್ಯ ಪ್ರಧಾನವಾಗಿ ನಮ್ಮಲ್ಲಿ ಉಳಿದಿವೆ ನಮ್ಮ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಕರೆದೊಯ್ಯಲು ಇಂತಹ ಕಾರ್ಯಕ್ರಮಗಳು ಮತ್ತಷ್ಟು ನಡೆಯಬೇಕು ಎಂದು ಹಿರಿಯ ಲೆಕ್ಕ ಪರಿಶೋಧಕರು ಶ್ರೀ ಜಯಪ್ರಕಾಶ ಜೆ.ಗುಪ್ತ ರವರು ಅಭಿಪ್ರಾಯಪಟ್ಟರು.
ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಸಂಗೀತ ನೃತ್ಯ ನಾಟಕಕ್ಕೆ ಇದೆ ಮಕ್ಕಳು ಈ ಮೂರು ಕಲೆಗಳನ್ನು ಅಳವಡಿಸಿಕೊಂಡರೆ ಪ್ರತಿಯೊಬ್ಬರೂ ಉನ್ನತ ಮಟ್ಟಕ್ಕೆ ಹೋಗಬಹುದು ಹಾಗೂ ಒಳ್ಳೆಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬಹುದು ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಬಳ್ಳಾರಿಯ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಶ್ರೀ ಕೆ.ಚನ್ನಪ್ಪ ನವರು ಹೇಳಿದರು
ನಾಟಕ ಪ್ರದರ್ಶನ ಹಮ್ಮಿಕೊಂಡಿರುವುದು ಆನಂದದ ವಿಷಯ ನಾಟಕ ಮತ್ತು ಸಂಗೀತ ನೃತ್ಯಕ್ಕೆ ನಾವೆಲ್ಲ ಪ್ರೋತ್ಸಾಹ ನೀಡಬೇಕು ಪ್ರೇಕ್ಷಕರು ಇಲ್ಲವೆಂದರೆ ಯಾವ ಕಾರ್ಯಕ್ರಮ ಯಶಸ್ವಿಯಾಗುವುದಿಲ್ಲ ಪ್ರೇಕ್ಷಕರು ಕಾರ್ಯಕ್ರಮದ ಮುಖ್ಯ ಜೀವಾಳ ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಕೆ.ಕೋಟೇಶ್ವರ ರಾವ್ ರವರು ಹೇಳಿದರು
ಆಧ್ಯಾತ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕಾರ್ಯಕ್ರಮ ಆಯೋಜಿಸುವುದು ಒಂದು ಸವಾಲಿನ ವಿಷಯ ಆಲಾಪ್ ಸಂಗೀತ ಕಲಾ ಟ್ರಸ್ಟ್ ನವರು ಆರು ಏಳು ವರ್ಷಗಳಿಂದ ನಿರಂತರವಾಗಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿರುವುದು ಹೆಮ್ಮೆಯ ವಿಷಯ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಧನ ಸಹಾಯ ನೀಡಿ ಕಲಾತಂಡಗಳನ್ನು ಪ್ರೋತ್ಸಾಹಿಸುತ್ತಿದೆ 75ರ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಎಲ್ಲಾ ಕಡೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜನೆ ಮಾಡಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಸಮಾಜದಲ್ಲಿ ನಾಟಕ ಸಂಗೀತ ನೃತ್ಯ ಇನ್ನೂ ಹೆಚ್ಚಿನ ಮಟ್ಟದಲ್ಲಿ ಪ್ರದರ್ಶನಗಳು ಕಾಣಬೇಕು ಎನ್ನುವ ನಿಟ್ಟಿನಲ್ಲಿ ಆಲಾಪ್ ಸಂಗೀತ ಕಲಾ ಟ್ರಸ್ಟ್ ನವರು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತೋಷದ ವಿಷಯ ಇದೇ ರೀತಿಯಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯಕ್ರಮಗಳು ನಡೆಯಬೇಕು ಹಾಗೂ ರಾಘವ ಮೆಮೋರಿಯಲ್ ಅಸೋಶಿಯೇಶನ್ ಸಂಸ್ಥೆ ಸ್ಥಾಪನೆಯಾಗಿ 75 ವರ್ಷಗಳೂ ತುಂಬಿದೆ ಈ ಸಂಸ್ಥೆಯು ಅಮೃತ ಮಹೋತ್ಸವ ಕಾರ್ಯಕ್ರಮ ಇಡಿ ವರ್ಷ ಪೂರ್ತಿ ನಿರಂತರವಾಗಿ ನಡೆಯಬೇಕು.ಉತ್ತಮವಾದಂತ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಬಳ್ಳಾರಿಯ ಕಲಾತಂಡಗಳು ಯಾವತ್ತಿಗೂ ಮುಂದೆ ಇರುತ್ತವೆ ಇದೇ ನಿಟ್ಟಿನಲ್ಲಿ ಸಂಗೀತ ಕಲಾ ಟ್ರಸ್ಟ್ ನವರು ಮಕ್ಕಳಿಗೆ ವೇದಿಕೆಯನ್ನು ಕಲ್ಪಿಸಿ ಕೊಡುತ್ತಿರುವುದು ಒಳ್ಳೆಯದು ಹೀಗೆ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಿ ಅನೇಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಶ್ರೀ ಪ್ರಭುದೇವ ಕಪ್ಪಗಲ್ಲುರವರು ನುಡಿದರು.ವೇದಿಕೆ ಮೇಲೆ ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಎಸ್. ದೊಡ್ಡನಗೌಡರು ಉಪಸ್ಥಿತರಿದ್ದರು.
ಪೂರ್ವದಲ್ಲಿಹನುಮಯ್ಯ ಮತ್ತು ತಂಡದವರು ಜಾನಪದ ಗೀತೆ ಗಾಯನವನ್ನ ಅದ್ಬುತವಾಗಿ ಪ್ರದರ್ಶನ ನೀಡಿದರು, ಕುಮಾರಿ ಅಮನಿ ಗಂಗಾವತಿರವರು ನೃತ್ಯ ಮಾಡಿದರು. ವೇದಿಕೆ ಕಾರ್ಯಕ್ರಮ ನಂತರ ನಾಗಲಕ್ಷ್ಮಿ ಮತ್ತು ತಂಡದವರು ಸಮೂಹ ನೃತ್ಯವನ್ನ ನೆರವೇರಿಸಿ ಕೊಟ್ಟರು
ನಂತರ ಪ್ರೊ. ಆರ್.ಎನ್. ಕುಲಕರ್ಣಿ ಅವರ ರಚನೆಯ ಟಿ.ನಾಗಭೂಷಣ ರವರ ನಿರ್ದೇಶನದಲ್ಲಿ
ವಿ.ರಾಮಚಂದ್ರ ಮತ್ತು ತಂಡದವರು
“ಯಾರಿಗೆ ಬೇಕು ನಿನ್ನ ಕವಿತೆ” ಎಂಬ ಸಾಮಾಜಿಕ ನಾಟಕವನ್ನು ಪ್ರಸ್ತುತಪಡಿಸಿದರು.ಈ ನಾಟಕದಲ್ಲಿ, ರಮೇಶ್ ಗೌಡ ಪಾಟೀಲ್,ಆದೋನಿ ವೀಣ, ಜಿ ಆರ್ ವೆಂಕಟೇಶಲು, ಯಂ.ರಾಮಂಜನೇಯಲು, ಲಾಲ್ ರೆಡ್ಡಿ,ವಿ.ರಾಮಚಂದ್ರ, ಕಾಳಿದಾಸ, ರಮಣಪ್ಪ ಭಜಂತ್ರಿ,ಅಮರಪುರ ನಾಗರಾಜ್ ಟಿ. ನಾಗಭೂಷಣ ಮುಂತಾದವರು ಅಭಿನಯಿಸಿ ನಾಟಕ ಪ್ರದರ್ಶನ ಯಶಸ್ವಿಗೊಳಿಸಿದರು.ಹಾಗೂ ರಾಘವೇಂದ್ರ ಗೂಡದೂರು ಸಂಗೀತ ಸಥ ನೀಡಿದರು.
ಕಾರ್ಯಕ್ರಮದ ನಿರೂಪಣೆ ವಿಷ್ಣು ಹಡಪದ ಪ್ರಾರ್ಥನೆ ಎನ್. ಬಸವರಾಜ ವಂದನಾರ್ಪಣೆ ಸುನಿಲ್ ಕುಮಾರ್ ನೆರವೇರಿಸಿ ಕೊಟ್ಟರು. ಧ್ವನಿ ಮತ್ತು ಬೆಳಕು ಅರುಣ್ ಸೌಂಡ್ ನೀಡಿದರು. ಕಾರ್ಯಕ್ರಮದಲ್ಲಿ ಆಲಾಪ್ ಸಂಗೀತ ಕಲಾ ಟ್ರಸ್ಟ್, ಬಳ್ಳಾರಿ ಅಧ್ಯಕ್ಷರಾದ ರಮಣಪ್ಪ ಭಜಂತ್ರಿ ಹಾಗೂ ಕಾರ್ಯದರ್ಶಿಗಳಾದ ಕೆ.ಸುರೇಶ್. ಕಲಾವಿದರು, ಕಲಾಭಿಮಾನಿಗಳು ಮತ್ತಿತರರು ಭಾಗವಹಿಸಿ ಯಶಸ್ವಿಗೊಳಿಸಿದರು.