ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ ಬಿ. ಪ್ರಾಣೇಶ್ ಹಾಸ್ಯ ಸಂಜೆ

ರಾಯಚೂರು,ಜ.೧೮- ನಗರದ ಸಾಹಿತಿಕ ಸಾಂಸ್ಕೃತಿಕ ಸಂಘಟನೆಯಾದ ಶ್ರುತಿ ಸಾಹಿತ್ಯ ಮೇಳದ ೩೫ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಶಾರದಾ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಹಮ್ಮಿಕೊಂಡ ಶೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಗಂಗಾವತಿ ಬಿ.ಪ್ರಾಣೇಶ್ ಇವರ ಹಾಸ್ಯ ಸಂಜೆ ಎಲ್ಲಾ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಯಶಸ್ವಿಯಾಯಿತು.
ಕಲಾವಿದರಾದ ಬಸವರಾಜ್ ಮಹಾಮನೆ, ಬಸವರಾಜ್ ಬೆಣ್ಣಿ, ಇವರು ಸಹ ಹಾಸ್ಯ ಸಂಜೆಯನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ನಗರದ ಶಾಸಕ ಡಾ. ಶಿವರಾಜ್ ಪಾಟೀಲ್ ಅವರು ಉದ್ಘಾಟಿಸಿ, ಶೃತಿ ಸಾಹಿತ್ಯ ಮೇಳ ರಾಯಚೂರಿನಲ್ಲಿ ಸಾಹಿತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸಿಕೊಂಡು ಬರುತ್ತಿದೆ. ಇದರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರುತಿ ಸಾಹಿತ್ಯ ಮೇಳದ ಗೌರವಾಧ್ಯಕ್ಷರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಯಲಕ್ಷ್ಮಿ ಮಂಗಳಮೂರ್ತಿಯವರು ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ, ಗಂಗಾವತಿ ಪ್ರಾಣೇಶ ಹಾಗೂ ಅವರ ಸಂಗಡಿಗರ ಕಾರ್ಯಕ್ರಮಗಳು ಅವಶ್ಯವಾಗಿ ಬೇಕು.
ಇಂತಹ ಕಾರ್ಯಕ್ರಮಗಳನ್ನು ಶೃತಿ ಸಾಹಿತ್ಯ ಮೇಳದಿಂದ ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲಲಿತಾ ಕಡಗೋಲ ಆಂಜನೇಯ, ನಗರ ಸಭೆ ಅಧ್ಯಕ್ಷರು, ಬಿಜೆಪಿ ಮುಖಂಡರುಗಳಾದ ರವೀಂದ್ರ ಜಲ್ದಾರ್, ವೈ. ಗೋಪಾಲ ರೆಡ್ಡಿ, ನಗರಸಭಾ ಸದಸ್ಯರುಗಳಾದ ಎನ್.ಕೆ ನಾಗರಾಜ್, ಈ. ಶಶಿರಾಜ್, ಬ್ರಾಹ್ಮಣ ಸಮಾಜದ ಮುಖಂಡರುಗಳಾದ ಜಗನ್ನಾಥ್ ಕುಲಕರ್ಣಿ ನಿರ್ದೇಶಕರು ಬ್ರಾಹ್ಮಣ ಅಭಿವೃದ್ಧಿ ಮಂಡಳಿ, ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷರುಗಳಾದ ನರಸಿಂಗರಾವ್ ದೇಶ ಪಾಂಡೆ, ಡಿ.ಕೆ.ಮುರಳಿ ಇವರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆರ್. ಮುತ್ತುರಾಜ್ ಶೆಟ್ಟಿ ಮಾನ್ವಿ, ಡಾ.ರಾಯಚೂರು ಶೇಷಗಿರಿ ದಾಸ್, ರವೀಂದ್ರ ಕುಲಕರ್ಣಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ರಾಘವೇಂದ್ರ ಸಿಎನ್ ರಾಯಚೂರು ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಪ್ರಾರ್ಥನೆಯನ್ನು ಕೃಷ್ಣ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಮೇಶ್ ಕುಲಕರ್ಣಿ ಸ್ವಾಗತಿಸಿದರು. ನಿರೂಪಣೆಯನ್ನು ಶ್ರುತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರಳಿದರ ಕುಲಕರ್ಣಿ ಅವರು ನಡೆಸಿಕೊಟ್ಟರು.
ಶೃತಿ ಸಾಹಿತ್ಯ ಮೇಳದ ಸದಸ್ಯರುಗಳಾದ ವಸುದೇಂದ್ರ ಸಿರವಾರ, ಸುರೇಶ್ ಕಲ್ಲೂರ್, ರಮಕಾಂತ್ ಕುಲಕರ್ಣಿ, ವೇಣುಗೋಪಾಲ್ ವರಪ್ಪ, ಪ್ರಾಣೇಶ್ ಫಡ್ಮಿನ್ಸ್, ವಿಯಲಕ್ಷ್ಮಿಸೇಡಂ ಕರ್, ವೈ.ಕೆ. ಯಶೋಧ, ಶ್ರೀ ರಕ್ಷಾ ಕುಲಕರ್ಣಿ, ಮುಂತಾದ ಸದಸ್ಯರುಗಳು ಇದ್ದರು. ಕಾರ್ಯಕ್ರಮ ಸಾವಿರಾರು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು.