ಪ್ರೇಕ್ಷಕರನ್ನು ಆಕರ್ಷಿಸಿದ ರಕ್ತರಾತ್ರಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.24: ನಗರದ ರಾಘವ ಕಲಾಮಂದಿರದಲ್ಲಿ ನಿನ್ನೆ ರಾತ್ರಿ‌ ಪ್ರದರ್ಶನಗೊಂದ ರಕ್ತರಾತ್ರಿ‌ ನಾಟಕ ನೆರೆದ ಪ್ರೇಕ್ಷಕರ ಗಮನ ಸೆಳೆಯಿತು.
ಡಾ.ಪುಟ್ಟರಾಜ ಕವಿ ಗವಾಯಿಗಳ 12 ನೇ ಪುಣ್ಯ ಸ್ಮರಣೆಯ ಅಂಗವಾಗಿ ಈ ನಾಟಕ ಪ್ರದರ್ಶನವನ್ನು ನಗರದ ಶಿವಸಾಯಿ ಕಲ್ಚರಲ್ ಟ್ರಸ್ಟ್ ಆಯೋಜಿಸಿತ್ತು. ರಂಗಕಲಾವಿದ ಜಿ.ಚನ್ನಬಸಪ್ಪ ಈ ಪ್ರದರ್ಶನದ ಉದ್ಘಾಟನೆ ಮಾಡಿದರು.
ನಾಟಕ ಪ್ರದರ್ಶನ ಮುನ್ನ  ಕಲ್ಯಾಣಿ ಮನ್ಸೂರು ಅವರಿಂದ ರಂಗಗೀತೆಗಳ ಗಾಯನ ನಡೆಯಿತು.
ಶಿವಸಾಯಿ ಕಲ್ಚರಲ್ ಟ್ರಸ್ಟ್ ನ ಅಧ್ಯಕ್ಷೆ ಎ.ವರಲಕ್ಷ್ಮಿ ಅಧ್ಯಕ್ಷತೆವಹಿಸಿದ್ದರು.  ಗಣ್ಯರಾದ  ಪಿ. ಎಲ್. ಗಾದಿಲಿಂಗನಗೌಡ. ಎಂ. ಮೋಹನ ರೆಡ್ಡಿ. ಜಿ. ಎಂ. ಚಂದ್ರ ಶೇಖರಯ್ಯ ಬಿ. ಬೀಮಣ್ಣ. ಜೆ‌ ಎಂ. ಶಿವುರುದ್ರಯ್ಯ ಸ್ವಾಮಿ. ಹೆಚ್. ಎಂ. ಚಂದ್ರ ಶೇಖರ್. ಹೇಚ್ . ಎಂ. ರಾಮೇಶ್ವರ. ಎಂ. ಪಾರ್ವತೀಶ್. ಬಿಜ್ಜಳರಾಜ. ಇದ್ದರು.   ಸಂಗೀತ ನಿರ್ದೇಶಕರು ತಿಪ್ಪೇಸ್ವಾಮಿ ಸೂಲದಹಳ್ಳಿ, ತಬಲ ಸಾಥ್ ಮಲ್ಲಿಕಾರ್ಜುನ ನಾಗಲಾಪುರ ಇವರು ನೀಡಿದರು.
ಪಾತ್ರ ವರ್ಗದಲ್ಲಿ ಶ್ರೀಕೃಷ್ಣ – ಜಗದೀಶಯ್ಯಸ್ವಾಮಿ. ಅಶ್ವತ್ಥಾಮ – ತಿಮ್ಮನಗೌಡ. ಭೀಮ – ಚಿಲಾರ್ ಸಾಬ್. ದುರ್ಯೋಧನ – ತಿಪ್ಪೇರುದ್ರಪ್ಪ. ಅರ್ಜುನ – ನಾಗಭೂಷಣ.  ಶಕುನಿ –  ಪ್ರಕಾಶ್. ಧರ್ಮರಾಯ – ಬಸಯ್ಯಸ್ವಾಮಿ. ಕರ್ಣ – ವೀರೇಶ್.ಗಂಧರ್ವ-  ಶಿವಕುಮಾರ ಸ್ವಾಮಿ. ಶಿವ – ಪ್ರಭು ಗೌಡ, ದ್ರೌಪದಿ – ಬಿ.ಶಿವುಕುಮಾರಿ, ಭಾನುಮತಿ – ವೀಣಾ.ಉತ್ತರೇ – ವರಲಕ್ಷ್ಮೀ, ಅನಂಗ ಪುಷ್ಪ – ಡಿ.ರಾದ ಅವರು ನಟಿಸಿದರು.
ಪ್ರದರ್ಶನಕ್ಕೂ ಮುನ್ನ ಡಿ. ರಾದ ಕೂಡ್ಲಿಗಿ ಇವರ ಹುಟ್ಟು ಹಬ್ಬದ ಅಮನಗವಾಗಿ‌ ಸಿಹಿ ಹಂಚಲಾಯ್ತು.