ಪ್ರೆಸ್ಟೀಟ್ ಕಿಚನ್  ಅಂಗಡಿ, ಹಣ್ಣಿನ ಕೋಲ್ಡ್  ಸ್ಟೋರೆಜ್ ಗೋಡೌನ್ ಗೆ  ಬೆಂಕಿ; ಕೋಟ್ಯಾಂತರ ರೂ. ನಷ್ಟ


ಸಂಜೆವಾಣಿ ವಾರ್ತೆ
ಗಂಗಾವತಿ, ಏ.05: ಪ್ರೆಸ್ಟೀಟ್ ಕಿಚನ್ ಸ್ಟೋರ್ ಹಾಗೂ ಹಣ್ಣಿನ ಕೋಲ್ಡ್ ಸ್ಟೋರೆಜ್ ಗೋಡೌನ್ ಗೆ  ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಾಂತರ ರೂ. ನಷ್ಟವಾಗಿರುವ ಘಟನೆ ನಗರದ ಬನ್ನಿಗಿಡದ ಕ್ಯಾಂಪ್ ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಅಕ್ಬರ್ ಸಾಬ ಎಂಬುವವರಿಗೆ ಸೇರಿದ ಹಣ್ಣಿನ ಕೋಲ್ಡ್ ಸ್ಟೋರೆಜ್  ಹಾಗೂ ರಮೇಶ ಮಾರ್ವಾಡಿ ಎಂಬವವರಿಗೆ ಸೇರಿದ ಪ್ರೆಸ್ಟೀಟ್ ಕಿಚನ್ ಸ್ಟೋರ್ ಎಲೆಕ್ಟ್ರಾನಿಕ್ ಅಂಗಡಿಗಳು ಎಂದು ತಿಳಿದು ಬಂದಿದೆ.
ಗೋಡೌನ್ ನಲ್ಲಿ  ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಇದರಿಂದಾಗಿ ಹಣ್ಣಿನ ಗೋಡೌನ್ ನಲ್ಲಿದ್ದ ಬಾಳೆಹಣ್ಣು, ಪ್ಲಾಸ್ಟಿಕ್ ಟ್ರೇಗಳು, ಟಾಟಾ ಎಸಿ ವಾಹನಗಳು, ಎಸಿ ಹಾಗೂ ನಾಲ್ಕು ಸಿಲಿಂಡರ್ ಗಳೊಂದಿಗೆ ಕೆಲ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಅಂಗಡಿಯಲ್ಲಿ ಕಿಚನ್ ಹಾಗೂ ಎಲೆಕ್ಟ್ರಾನಿಕ್ ಸಾಮಾಗ್ರಿಗಳು ಸಂಪೂರ್ಣವಾಗಿ ಸುಟ್ಟು ಹೋಗಿದೆ ಎನ್ನಲಾಗಿದ್ದು, ಈ ಪರಿಣಾಮ ಕೋಟ್ಯಾಂತರ ರೂ. ನಷ್ಡವಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ವಾಹನ ಸಿಬ್ಬಂದಿ ಆಗಮಿಸಿದ್ದು, ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಬೆಂಕಿ ನಂದಿಸುವಲ್ಲಿ ಯಶಸಿಯಾಗಿದ್ದಾರೆ.
ಬೆಂಕಿ ಅನಾಹುತಕ್ಕೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಜೆಸ್ಕಾಂ, ನಗರಸಭೆಯ ಅಧಿಕಾರಿಗಳು‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.