ಪ್ರೆಸೆಂಟ್ ಪ್ರಪಂಚ ತೆರೆಗೆ ಸಿದ್ದ

ರೊಮ್ಯಾಂಟಿಕ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಪ್ರೆಸೆಂಟ್ ಪ್ರಪಂಚ ಝೀರೋ ಪರ್ಸೆಂಟ್ ಲವ್ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಚಿತ್ರ ತೆರೆಗೆ ಬರುವ ಮುನ್ನ ನಿರ್ದೇಶಕ ಅಭಿರಾಮ್ ನಾಯಕ ಅರ್ಜುನ್ ಮಂಜುನಾಥ್ ಇಬ್ಬರಯ ಇಲಹೋಕ ತ್ಯಜಿಸಿದ್ದಾರೆ.
ಚಿತ್ರದ ಪತ್ರಿಕಾಗೋಷ್ಠಿ ವೇಳೆ ನಿರ್ಮಾಪಕ ಕೃಷ್ಣಮೂರ್ತಿ, ಇಬ್ಬರ ಅನುಪಸ್ಥಿತಿ ಕಾಡುತ್ತಿದೆ. ಇಬ್ಬರು ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಗಿಯುವ ತನಕ ಜೊತೆಗಿದ್ದರು. ಆಮೇಲೆ ಯಾರು ನಿರೀಕ್ಷಿಸದ್ದು ನಡೆದು ಹೋಯಿತು ಎಂದರು.
ಆ ಬಳಿಕ ಎರಡನೇ ನಾಯಕ ಯಶಸ್ ಅಭಿ ಸೇರಿದಂತೆ ಚಿತ್ರತಂಡದ ಸದಸ್ಯರ ಸಹಕಾರದಿಂದ ಸಿನಿಮಾ ಪೂರ್ಣವಾಗಿದೆ. ಸದ್ಯದಲ್ಲೇ ಬಿಡುಗಡೆ ಮಾಡುವ ಯೋಜನೆ ಇದೆ ಎಂದರು
ಚಿತ್ರಕ್ಕೆ ಕೃಷ್ಣಮೂರ್ತಿ, ರವಿಕುಮಾರ್ ಇಬ್ಬರು ಸೇರಿ ನಿರ್ಮಿಸಿದ್ದಾರೆ. ನಾಗರಾಜ್ ಹೊಸಳ್ಳಿ ಹಾಗೂ ದೇವರಾಜ್ ಅವರ ಸಹ ನಿರ್ಮಾಣವೂ ಇದೆ.
ಎರಡನೇ ನಾಯಕ ಯಶಸ್ ಅಬಿ ಮಾಹಿತಿ ನೀಡಿಪ್ರೆಸೆಂಟ್ ಪ್ರಪಂಚದಲ್ಲಿ ಎಲ್ಲದಕ್ಕಿಂತ ಪ್ರೀತಿನೇ ಮುಖ್ಯ.ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕ ಝಿರೋ ಪರ್ಸೆಂಟ್ ಪ್ರೀತಿ ಎಂದು ಕೊಂಡು ಬಂದರೆ, ಹೋಗುವಾಗ ಶೇ.೧೦೦ ಪ್ರೀತಿ ಹೊತ್ತಿಕೊಂಡು ಹೋಗುವುದು ಖಚಿತ ಎಂದರು.
ನಾಯಕಿ ಸಂಭ್ರಶ್ರೀ ಮದುವೆಯಾದ ಮೇಲೆ ಗಂಡ ಹೆಂಡತಿ ನಡುವೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಅದು ವಿಚ್ಛೇದನದ ತನಕ ಹೋಗಬಾರದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಲಾಗಿದೆ ಎಂದರು.
ನಟರಾದ ಗೋವಿಂದೇಗೌಡ, ಕುರಿ ಸುನೀಲ್ ಹಾಗೂ ಸಂಗೀತ ನಿರ್ದೇಶಕ ರವಿತೇಜಸ್ ಚಿತ್ರದ ಕುರಿತು ಮಾತನಾಡಿದರು.