ಪ್ರೆಸಿಡೆನ್ಸಿ ವಿವಿ ಅಕ್ರಮಕ್ಕೆ ಅಶ್ವತ್ ಮೌನಕ್ಕೆ ಕೈ ತರಾಟೆ

ಬೆಂಗಳೂರು, ಜ. ೯- ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿ ಕೊಲೆಪ್ರಕರಣದಲ್ಲಿ ಚಕಾರವೆತ್ತುತ್ತಿಲ್ಲ. ಇವರೆಂತ ಶಿಕ್ಷಣ ಸಚಿವರು ಎಂದು ಕೆಪಿಸಿಸಿ ವಕ್ತಾರ ಮಂಜುನಾಥ ಅದ್ದೆ ಕಿಡಿಕಾರಿದ್ದಾರೆ.
ಯಲಹಂಕ ಮಾಧ್ಯಮ ಕೇಂದ್ರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತಮಾಡಿದ ಅವರು, ರಾಜಕೀಯದಲ್ಲಿ ಗಂಡಸ್ಥನದ ಬಗ್ಗೆ ಮಾತನಾಡುವ ಮಂತ್ರಿಗಳಿಗೆ ಪ್ರೆಸಿಡೆನ್ಸಿ ಯೂನಿವರ್ಸಿಟಿಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಅರಿವಿಲ್ಲವೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಕಂಡಿದೆ. ವಿದ್ಯಾರ್ಥಿನಿ ಹತ್ಯೆಯಾಗಿ, ಡ್ರಗ್ಸ್ ಮಾಫಿಯಾ, ಕಾನೂನು ಬಾಹಿರ ಚಟುವಟಿಕೆ ನಡೆದು ಮಾಧ್ಯಮಗಳಲ್ಲಿ ವರದಿಯಾಗಿದ್ದರೂ ಸಹ ಕ್ರಮ ಕೈಗೊಳ್ಳದೆ ಮೌನವಾಗಿರುವುದೇಕೆ ಶಿಕ್ಷಣ ಸಚಿವರು ಅಧಿಕಾರ ನಡೆಸುತ್ತಿದ್ದಾರ ಇಲ್ಲವೆ ಆಡಳಿತ ನಡೆಸುತ್ತಿದ್ದಾರ ಎಂದು ಪ್ರಶ್ನಿಸಿದರು.
ಸಮಿತಿ ರಚನೆ ಸ್ಥಳೀಯರಿಗೆ ಅವಕಾಶ: ಸ್ಥಳೀಯರ ಪ್ರಜ್ಞಾವಂತರ ಹಿತರಕ್ಷಣಾ ಸಮಿತಿ ರಚಿಸಬೇಕು. ಸ್ಥಳೀಯರಿಗೆ ಶೇ. ೧೦ ಉದ್ಯೋಗ ನೀಡಬೇಕು. ನಮ್ಮ ವ್ಯಾಪ್ತಿಯ ಅರ್ಹ ವಿದ್ಯಾರ್ಥಿಗಳಿಗೆ ಓದಲು ಅವಕಾಶ ಮಾಡಿಕೊಡಬೇಕು. ಶೇ. ೩೦ ರಿಯಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.ನಾವು ಯೂನಿವರ್ಸಿಟಿ ವಿರೋಧಿಗಳಲ್ಲ. ಸಾರ್ವಜನಿಕ ಹಿತಾಸಕ್ತಿ ಪರವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಯುಜಿಸಿ ಜಾರಿದಳಕ್ಕೆ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ತನಿಖೆ ಮಾಡಲು ದೂರು ಸಲ್ಲಿಸಿದ್ದು ತನಿಖೆ ಮಾಡುವ ಭರವಸೆ ನೀಡಿದ್ದಾರೆ.ನೇರ ಚರ್ಚೆ ಮೂಲಕ ಸಮಸ್ಯೆ ಪರಿಹಾರ ಮಾಡದಿದ್ದರೆ ತಿಂಗಳಾಂತ್ಯದ ವೇಳೆ ಕಾನೂನು ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ತಾಲೂಕು ಆಡಳಿತ ವೈಫಲ್ಯ: ತಾಲೂಕು ಆಡಳಿ ದಿಬ್ಬೂರಿನ ಕೆರೆ ಉಳಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಎಂದು ಜಿ.ಪಂ.ಮಾಜಿ ಸದಸ್ಯೆ ಲಾವಣ್ಯ ನರಸಿಂಹಮೂರ್ತಿ ಆರೋಪಿಸಿದರು. ವಿದ್ಯಾಸಂಸ್ಥೆ ಕೆರೆ ಒತ್ತುವರಿ ಮಾಡಿರುವುದು ಖಂಡನೀಯ ಮೌಲ್ಯ ಹೇಳಿಕೊಡುವವರೆ ಈ ರೀತಿ ಮಾಡಿದರೆ ಮೌಲ್ಯಯುತ ಹೋರಾಟ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.