ಪ್ರೀಮಿಯಂ ಜೀವನಶೈಲಿ ಪ್ರದರ್ಶನಕ್ಕೆ ಇಂದು ಕೊನೆಯ ದಿನ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.26: ಕಳೆದ ಮೂರು ದಿನಗಳಿಂದ ನಗರದ ಹೋಟೆಲ್ ರಾಯಲ್ ಫೋರ್ಟ್‌ನಲ್ಲಿ ಜರುಗುತ್ತಿರುವ ದಕ್ಷಿಣ ಭಾರತದ ಅತ್ಯಂತ ಪ್ರೀಮಿಯಂ ಜೀವನಶೈಲಿ ಪ್ರದರ್ಶನಕ್ಕೆ ಇಂದು ಕೊನೆಯ ದಿನವಾಗಿದೆ
ಎಂದು ಪ್ರದರ್ಶನದ ಸಂಘಟಕ ರವಿ ಆರೋರ ತಿಳಿಸಿದ್ದಾರೆ.
ಅವರು ಸಂಜೆವಾಣಿಯೊಂದಿಗೆ ಮಾತನಾಡಿ, ಈ ಪ್ರದರ್ಶನದಲ್ಲಿ ಇರುವ  ಐಷಾರಾಮಿ ವಸ್ತುಗಳ ಪರಾಕಾಷ್ಠೆಯನ್ನು ಅನುಭವಿಸಿ ಇಲ್ಲಿ ಭಾರತೀಯ ಜೀವನಶೈಲಿಯ 25 ಕ್ಕೂ ಹೆಚ್ಚು ಟಾಪ್ ಬ್ರ್ಯಾಂಡ್‌ಗಳು ತಮ್ಮ ಇತ್ತೀಚಿನ ಸಂಗ್ರಹಣೆಗಳು ಮತ್ತು ವಿನ್ಯಾಸಗಳನ್ನು ಪ್ರದರ್ಶಿಸುತ್ತಿವೆ. 
ಈ ಪ್ರದರ್ಶನವು ಇಂದು ರಾತ್ರಿಗೆ ಅಂತ್ಯಗೊಳ್ಳಲಿದ್ದು,, ಸಾರ್ವಜನಿಕರು ಟ್ರೆಂಡಿ ಬಟ್ಟೆಗಳು, ಸೊಗಸಾದ ಸೀರೆಗಳು, ಕುರ್ತಿಗಳು, ಆಭರಣಗಳು, ಗೃಹಾಲಂಕಾರಗಳು, ಸ್ಟೈಲಿಶ್ ಪರಿಕರಗಳು ಅಥವಾ ಅನನ್ಯ ವಿನ್ಯಾಸಕ ಉಡುಗೆಗಳು ಮತ್ತು ಹೆಚ್ಚಿನದನ್ನು ಹುಡುಕುತ್ತಿದ್ದರೆ.  ಈಗ ಅವು ಇಲ್ಲಿ ದೊರೆಯುತ್ತಿವೆ.. ಫ್ಯಾಷನ್, ಜೀವನಶೈಲಿ ಮತ್ತು ಆಭರಣಗಳನ್ನು ಹುಡುಕುವ ಯಾರಿಗಾದರೂ ಇದು ಪರಿಪೂರ್ಣ ಸ್ಥಳವಾಗಿದೆ!  
 ಈ ಅದ್ಭುತವಾದ ಈವೆಂಟ್ ಅನ್ನು ನೀವು ತಪ್ಪಿಸಿಕೊಳ್ಳಬೇಡಿ ಭೇಟಿ ನೀಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಳೆದ ಮೂರು ದಿನಗಳಿಂದ ಪ್ರದರ್ಶನವನ್ನು
 ವೀಕ್ಷಿಸಿದ ಜನತೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ತಮಗೆ ಇಷ್ಟವಾದ ವಸ್ತ್ರಾಭರಣಗಳ ಖರೀದಿಯನ್ನು ಮಾಡುತ್ತಿದುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

One attachment • Scanned by Gmail