
ಕಲಬುರಗಿ:ಮೇ.23: ನಗರದ ಬಿದ್ದಾಪೂರ ಕಾಲೋನಿಯ ಶರಣಬಸವೇಶ್ವರ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಶ್ರೀಮತಿ ಪ್ರೀತಿ ಹೆಚ್.ಭಕರೆ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯವು ಪಿಹೆಚ್.ಡಿ ಪದವಿ ಪ್ರದಾನ ಮಾಡಿದೆ.
ಪ್ರಾಣಿಶಾಸ್ತ್ರ ವಿಭಾಗದಲ್ಲಿ ಡಾ.ಸೋಮನಾಥರೆಡ್ಡಿ ಸಿ.ಪಾಟೀಲ ಇವರ ಮಾರ್ಗದರ್ಶನದಲ್ಲಿ “ ಸ್ಟಡಿಸ್ ಆನ್ ಎಂಡೋಕ್ರೈನ್ ಆಸ್ಪೆಕ್ಟಸ್ ಆಫ್ ಮೇಲ್ ರಿಪ್ರೋಡಕ್ಷನ್ ಇನ್ ಸೆಲೆಕ್ಟೆಡ್ ಸಿಎನ್‍ಎಸ್ ಇನ್‍ಪ್ಲೂಯಸ್ಸಿಂಗ್ ಡ್ರಗ್ಸ್ ಟ್ರಿಟೆಡ್ ಅಲ್ಬಿನೋ ರ್ಯಾಟ್” ಎಂಬ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಹೆಚ್.ಡಿ. ಲಭಿಸಿದೆ.