ಪ್ರೀತಿ ಒಪ್ಪದ ಯುವತಿ ಕೊಂದ ಭಗ್ನ ಪ್ರೇಮಿ!

ಸಿರಾ, ಏ. ೫- ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ತಾಲ್ಲೂಕಿನ ದೊಡ್ಡಗುಳದಲ್ಲಿಂದು ನಡೆದಿದೆ.
ತಾಲ್ಲೂಕಿನ ದೊಡ್ಡಗುಳ ಗೊಲ್ಲರಹಟ್ಟಿ ನಿವಾಸಿ ಕಾವ್ಯ ಎಂಬಾಕೆಯೇ ಕೊಲೆಯಾಗಿರುವ ದುರ್ದೈವಿ. ಈಕೆಯನ್ನು ಕೊಲೆ ಮಾಡಿರುವ ಯುವಕ ಈರಣ್ಣ ತಲೆಮರೆಸಿಕೊಂಡಿದ್ದಾನೆ.
ದೊಡ್ಡಗುಳ ಗ್ರಾಮದ ಯುವಕ ಈರಣ್ಣ ಅದೇ ಗ್ರಾಮದ ಗೊಲ್ಲರಹಟ್ಟಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಯುವತಿಯನ್ನು ಪ್ರೀತಿಸುವಂತೆಯೂ ಸಾಕಷ್ಟು ಬಾರಿ ಮನವಿ ಮಾಡಿದ್ದನು ಎನ್ನಲಾಗಿದೆ. ಆದರೆ ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ.
ಇದರಿಂದ ಕುಪಿತಗೊಂಡ ಯುವಕ ಇಂದು ಯುವತಿ ಕಾಲೇಜಿಗೆ ಹೋಗುವ ಸಮಯದಲ್ಲಿ ತಾಳಿ ಕಟ್ಟಲು ಯತ್ನಿಸಿದ್ದು, ಇದಕ್ಕೆ ಯುವತಿ ಒಪ್ಪದೆ ವಿರೋಧ ವ್ಯಕ್ತಪಡಿಸಿದರಿಂದ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದಾನೆ.
ಈ ಸಂಬಂಧ ತಾಲ್ಲೂಕಿನ ಕಳ್ಳಂಬೆಳ್ಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.