ಪ್ರೀತಿ ಆರೈಕೆ ಟ್ರಸ್ಟ್ ನಿಂದ ಆರೋಗ್ಯ ಉಚಿತ ತಪಾಸಣೆ

ದಾವಣಗೆರೆ.ಜೂ.೧೦; ಪ್ರೀತಿ ಆರೈಕೆ ಟ್ರಸ್ಟ್, ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಟ್ರೈಡೆಂಟ್ ಡಯೋಗ್ನೋಸ್ಟಿಕ್ ಸಹಭಾಗಿತ್ವದಲ್ಲಿ ಟ್ರಸ್ಟ್‌ ಸಂಸ್ಥಾಪಕರಾದ ಡಾ. ರವಿ ಕುಮಾರ್ ಟಿ. ಜಿ. ನೇತೃತ್ವದಲ್ಲಿ ದಾವಣಗೆರೆಯ ವಾಟರ್ ಟ್ಯಾಂಕ್ ಉದ್ಯಾನವನದಲ್ಲಿ ಆರೋಗ್ಯ ಉಚಿತ ತಪಾಸಣೆ ಶಿಬಿರ ನಡೆಯಿತು.ಮುಂಜಾನೆ 7 ಗಂಟೆಯಿಂದಲೇ ತಪಾಸಣೆ ಶಿಬಿರದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ತಪಾಸಣೆಯಲ್ಲಿ ಭಾಗವಹಿಸಿದರು.ಪ್ರೀತಿ ಆರೈಕೆ ಟ್ರಸ್ಟ್ ಆಯೋಜಿಸಿರುವ ಉಚಿತ ತಪಾಸಣೆ ಬಗ್ಗೆ, ಡಾ. ರವಿ ಕುಮಾರ್ ಅವರ ಸಾಮಾಜಿಕ ಕಳಕಳಿ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಪ್ರಾಥಮಿಕ ತಪಾಸಣೆಯ ವರದಿಗಳ ಆಧಾರದಲ್ಲಿ ಚಿಕಿತ್ಸೆಗಳ ಬಗ್ಗೆ ಸಲಹೆ ನೀಡಲಾಯಿತು.ಈ ವೇಳೆ ಮಾತನಾಡಿದ ಡಾ. ರವಿಕುಮಾರ್ ಟಿ.ಜಿ ಬಿ.ಪಿ, ಮಧುಮೇಹ, ದೇಹದ ತೂಕ, ಪಲ್ಸ್ ಗಳ ನಿಯಮಿತ ತಪಾಸಣೆಯು ಅತ್ಯಗತ್ಯ. ಕೆಲಸಗಳ ಒತ್ತಡ, ಸಮಯದ ಅಭಾವದಿಂದ ತಪಾಸಣೆಗೆ ಅವಕಾಶವೂ ಸಿಗುತ್ತಿಲ್ಲ.ಉದ್ಯಾನದಲ್ಲಿ ಮುಂಜಾನೆ ಸಾರ್ವಜನಿಕರು ಲಭ್ಯರಿದ್ದು, ಈ ವೇಳೆ ಆರೋಗ್ಯದ ತಪಾಸಣೆಯನ್ನು ಪ್ರೀತಿ ಆರೈಕೆ ಟ್ರಸ್ಟ್ ನಿಂದ ಮಾಡುತ್ತಿದ್ದೇವೆ. ಆರೋಗ್ಯವಂತ ಸಮಾಜ‌ ನಿರ್ಮಾಣದ ಸಂಕಲ್ಪ ನಮ್ಮದು ಎಂದರು.