ಪ್ರೀತಿ ಆರೈಕೆ ಟ್ರಸ್ಟ್ ನಿಂದ ಆರೋಗ್ಯ ಶಿಬಿರ

ದಾವಣಗೆರೆ. ಅ.29; ವೈದ್ಯರಾದ ಡಾ. ರವಿಕುಮಾರ್ ಟಿ.ಜಿ ಅವರ ನೇತೃತ್ವದಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ  31ನೇ ಆರೋಗ್ಯ ತಪಾಸಣೆ ಉಚಿತ ಶಿಬಿರವು  ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ  ನಡೆಯಿತು. ನಲ್ಲೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಆರೋಗ್ಯ ದಾಸೋಹದ ಸೇವೆಯನ್ನು ಎಲ್ಲರೂ ಸದ್ಭಳಕೆ ಮಾಡಿಕೊಂಡು, ಆರೋಗ್ಯವಂತರಾಗಿ ಬಾಳಬೇಕು ಎಂದು ಡಾ. ರವಿಕುಮಾರ್ ಟಿ.ಜಿ  ಆಶಯ ವ್ಯಕ್ತಪಡಿಸಿದ್ದಾರೆ.