
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೨೦: ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ನಡೆಯುವ ಆರೋಗ್ಯ ಉಚಿತ ತಪಾಸಣೆಯ 17ನೇ ಶಿಬಿರವು ಯಶಸ್ವಿಯಾಗಿ ನೆರವೇರಿತು.ನಗರದ ಕುಂದವಾಡ ಕೆರೆ ಬಳಿ ನೇತಾಜಿ ಕ್ರೀಡಾಂಗಣದ ದ್ವಾರದ ಬಳಿ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದಲೂ ಪ್ರೀತಿ ಆರೈಕೆ ಟ್ರಸ್ಟ್ ನಗರದ ಹಲವು ಭಾಗ ಮತ್ತು ಗ್ರಾಮೀಣ ಭಾಗಗಳಲ್ಲಿ ಶಿಬಿರಗಳನ್ನು ಆಯೋಜನೆ ಮಾಡುತ್ತಿದೆ. ಈವರೆಗೂ 2400ಕ್ಕೂ ಹೆಚ್ಷಿನ ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಚಿಕಿತ್ಸೆ, ಮಾರ್ಗದರ್ಶನ ನೀಡಲಾಗಿದೆ.ಶಿಬಿರದ ಕುರಿತು ವಾಯುವಿಹಾರ ಬಳಗದ ಪರವಾಗಿ ಮಾತನಾಡಿದ ಬಳಗದ ಸದಸ್ಯ ರಾಮಮೂರ್ತಿ, ದಿನನಿತ್ಯದ ಕೆಲಸದ ಒತ್ತಡ, ಭಾನುವಾರ ರಜಾದಿನವಾದ ಕಾರಣ ಆರೋಗ್ಯ ತಪಾಸಣೆಗೆ ಹೆಚ್ಚಿನ ಜನರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಸಮಾಜದ ಆರೈಕೆಯ ಸದುದ್ದೇಶ ಹೊಂದಿರುವ ಪ್ರೀತಿ ಆರೈಕೆ ಟ್ರಸ್ಟ್ ಸಾರ್ವಜನಿಕರು ಇರುವ ಸ್ಥಳಕ್ಕೇ ಬಂದು ಉಚಿತವಾಗಿ ತಪಾಸಣೆ ಶಿಬಿರ ಏರ್ಪಡಿಸುತ್ತಿದ್ದಾರೆ. ಇದೊಂದು ಶ್ಲಾಘನೀಯ, ಮಾದರಿ ಕಾರ್ಯ. ಮುಂದಿನ ದಿನಗಳಲ್ಲಿ ಟ್ರಸ್ಟ್ ನಿಂದ ಹೆಚ್ಚಿನ ಸಮಾಜಮುಖಿ ಕಾರ್ಯಗಳು ಮುಂದುವರಿಯಲಿ ಎಂದು ಹಾರೈಸುತ್ತೇವೆ ಎಂದು ಹೇಳಿದರು.ಟ್ರಸ್ಟ್ ಕಾರ್ಯದರ್ಶಿ, ಆಸ್ಪತ್ರೆ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ. ತಪಾಸಣೆಯ ನೇತೃತ್ವ ವಹಿಸಿಕೊಂಡಿದ್ದರು. ಮಾಜಿ ಶಾಸಕರಾದ ಟಿ.ಜಿ.ಗುರುಸಿದ್ಧನಗೌಡ, ಉದ್ಯನಿಗಳಾದ ಪ್ರವೀಣ್ ಪಾಟೀಲ್, ಅರವಿಂದ್, ಟ್ರಸ್ಟ್ ಸಿಬ್ಬಂದಿಗಳಾದ ನುಂಕೇಶ್, ಅಭಿಜಿತ್, ಶ್ವೇತಾ ಇತರರು ಇದ್ದರು.