ಪ್ರೀತಿ ಆರೈಕೆ ಆರೋಗ್ಯ ಉಚಿತ ಶಿಬಿರಕ್ಕೆ 50ರ ಸಂಭ್ರಮ


ಸಂಜೆವಾಣಿ ವಾರ್ತೆ

ಜಗಳೂರು.ಜ.30;ಹುಟ್ಟಿ ಬೆಳೆದು ಆಡಿದ ಊರಿನಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮೂಲಕ ಜನ್ಮಭೂಮಿಗೆ ಸೇವೆ ಸಲ್ಲಿಸುತ್ತಿರುವ ಸಾರ್ಥಕತೆಯು ಪ್ರೀತಿ ಆರೈಕೆ ಟ್ರಸ್ಟ್ ಕುಟುಂಬಕ್ಕೆ ಒದಗಿದೆ ಎಂದು ಜಗಳೂರು ಮಾಜಿ ಶಾಸಕ ಟಿ. ಗುರುಸಿದ್ಧನಗೌಡ ಹೇಳಿದರು.ಡಾ. ರವಿಕುಮಾರ್ ಟಿ.ಜಿ ನೇತೃತ್ವದಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಜಗಳೂರು ತಾಲೂಕಿನ ಬಿದರಿಕೆರೆಯಲ್ಲಿ ನಡೆದ ಆರೋಗ್ಯ ತಪಾಸಣೆ ಉಚಿತ 50ನೇ ಶಿಬಿರ ಉದ್ಘಾಟಿಸಿ ಮಾತನಾಡಿದರು.ದಾವಣಗೆರೆಯಂಥ ದೊಡ್ಡ ಪಟ್ಟಣಗಳಿಗೆ ಗ್ರಾಮೀಣ ಭಾಗದ ಬಡವರು, ಕೃಷಿಕರು ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಕಷ್ಟ ಸಾಧ್ಯ. ಅವರೆಲ್ಲರಿಗೂ ಮನೆಬಾಗಿಲಿಗೆ ಆರೋಗ್ಯ ಚಿಕಿತ್ಸೆ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದೊಂದಿಗೆ ಪ್ರೀತಿ ಆರೈಕೆ ಟ್ರಸ್ಟ್ ಹೆಜ್ಜೆ ಹಾಕುತ್ತಿದೆ‌ ಎಂದರು.ಈ ವೇಳೆ ಮಾತನಾಡಿದ ಡಾ.‌ರವಿಕುಮಾರ್,  ಅತಿ ಕಡಿಮೆ ಅವಧಿಯಲ್ಲೇ 50ನೇ ಆರೋಗ್ಯ ಶಿಬಿರದ ಸಾರ್ಥಕತೆಗೆ ಬಂದು ತಲುಪಿದ್ದೇವೆ. ಕಳೆದ ಏಪ್ರಿಲ್ ಅಂತ್ಯದಲ್ಲಿ ದಿವಂಗತ ಶ್ರೀಮತಿ ಪ್ರೀತಿ ಅವರ ಸ್ಮರಣೆಗಾಗಿ ಟ್ರಸ್ಟ್ ಪ್ರಾರಂಭ ಮಾಡಲಾಯಿತು. ಅಂದಿನಿಂದಲೂ ಹಲವು ಸಮಾಜ ಹಿತವಾದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. ಮುಖ್ಯವಾಗಿ ಆರೋಗ್ಯ ಉಚಿತ ತಪಾಸಣೆ ಶಿಬಿರಗಳಿಗೆ ದಾವಣಗೆರೆ ಜಿಲ್ಲೆಯಾದ್ಯಂತ ಹೆಚ್ಚಿನ ಮನ್ನಣೆ, ಮೆಚ್ಚುಗೆ ದೊರೆತಿದೆ, ಇದಕ್ಕೆ ನಾನು ಅಭಾರಿ ಎಂದು ಹೇಳಿದರು.ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಇದ್ದಾಗಲೇ ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯ. ಭಾರತವನ್ನು ವಿಶ್ವದ ಸರ್ವಶ್ರೇಷ್ಠ ದೇಶ ಮಾಡಲು ನಾವೆಲ್ಲರೂ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿ ಇರುವ ಮೂಲಕ ನಮ್ಮ ಯೋಗದಾನ ನೀಡೋಣ ಎಂದು ಕಿವಿಮಾತು ಹೇಳಿದರು.ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಬಾಬು ಮಸತನಾಡಿ, ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಏರ್ಪಡಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಸರಿಸುಮಾರು 28 ಸಾವಿರಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ಉಚಿತ ತಪಾಸಣೆ ಮಾಡಿರುವುದು ಸಣ್ಣ ಸಾಧನೆಯಲ್ಲ. ಜನರ ಮನೆಬಾಗಿಲಿಗೇ ಬಂದು ಉಚಿತವಾಗಿ ಆರೋಗ್ಯ ತಪಾಸಣೆ ಮಾಡುವಂತಹ ಸಮಾಜ ಪರವಾದ, ಜೀವ ಪರವಾದ ಕರ್ತವ್ಯ ಮಾಡುತ್ತಿರುವ ಡಾ. ಟಿ.ಜಿ. ರವಿಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.ಗ್ರಾಪಂ ಸದಸ್ಯರಾದ ಮಹಂತೇಶ್, ಮಂಗಳಮ್ಮ, ಶಿವರುದ್ರಪ್ಪ, ಪ್ರಸನ್ನ ಕುಮಾರ್, ಮುಖಂಡರಾದ ಕಬ್ಬೂರ್ ನಿಂಗಪ್ಪ, ಬೋರನಾಯಕ್, ಸದಾನಂದರೆಡ್ಡಿ, ಬಾರಿಕೆರೆ ತಿಪ್ಪಣ್ಣ, ರಸ್ತೆ ಮಾಚಿಕೆರೆ ತಿಪ್ಪೇಸ್ವಾಮಿ, ನಿಬಗೂರು ಮಲ್ಲಿಕಾರ್ಜುನ, ಮ
ಆದಿಮನೆ ಶೇಖರಪ್ಪ, ಪ್ರವೀಣ್ ಪಾಟೀಲ್, ಅರವಿಂದ್, ನುಂಕೇಶ್ ಸೇರಿದಂತೆ ಹಲವು ಗ್ರಾಮಸ್ಥರು ಹಾಜರಿದ್ದರು.