ಪ್ರೀತಿ ಅಭಿಮಾನ ಸಾಲದು ಮತ ನೀಡಿ ಆಶಿರ್ವದಿಸಿ: ಲಕ್ಷ್ಮೀ ಅರುಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.16: ನಗರದ 11 ನೇ ವಾರ್ಡಿನ ಹೂವಿನ ಬಜಾರ್ ಕಮ್ಮಿಂಗ್ ರಸ್ತೆ, ಕಾಳಮ್ಮ ಬೀದಿ, ಬ್ರಾಹ್ಮಣ ಬಜಾರ್, ಜ್ಯುವೆಲರಿ ಅಂಗಡಿ ರಸ್ತೆ, ಸಣ್ಣ ಮಾರೆಮ್ಮ ಗುಡಿ ಓಣಿ ಭಾಗದ ಮನೆ ಮನೆಗೆ ತೆರಳಿದ ಕೆಅರ್ ಪಿ  ಪಕ್ಷದ ಅಭ್ಯರ್ಥಿ ಗಾಲಿ ಲಕ್ಷ್ಮೀ ಅರುಣ ಅವರು ತಮಗೆ ಮತ ನೀಡುವಂತೆ  ಮನವಿ ಮಾಡಿದರು.
ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರ ಅಭಿವೃದ್ಧಿ ಬಗ್ಗೆ, ನಾನು ಒಂಟಿಯಾಗಿ ನಡೆಸುತ್ತಿರುವ ಹೋರಾಟ  ಮತ್ತು ಕಷ್ಟ ಪಡುತ್ತಿರುವ ಬಗ್ಗೆ  ಮತದಾರರು ಕಂಬನಿ ಮಿಡಿಯುತ್ತಿದ್ದಾರೆ. ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ಪ್ರೀತಿ ಅಭಿಮಾನವಷ್ಟೇ ಸಾಲದು ಮತ ನೀಡಿ ಶಾಸಕಿಯನ್ನಾಗಿ ಮಾಡಿ ಎಂಬುದು ನನ್ನ ಆಶಯ ಎಂದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್  ಸುಧಾಕರ್ ದೇಸಾಯಿ, ರಾಘವೇಂದ್ರ ದೇಸಾಯಿ, ಮಹಿಳಾ ಶಕ್ತಿ ಘಟಕದ ಅಧ್ಯಕ್ಷೆ ಹಂಪಿ ರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಲ್ಲಿಕಾರ್ಜುನಚಾರ್,  ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಪರ್ವೀನ್ ಬಾನು, ಕಾರ್ಯದರ್ಶಿ ತಿಮ್ಮಪ್ಪ  ,  ಅಲ್ಪಸಂಖ್ಯಾತ ಘಟಕದ ಅಮೀನಾ, ಪ್ರವೀಣ್ ರೆಡ್ಡಿ , ಬೆಲ್ಲಂ ವಾಸುರೆಡ್ಡಿ,  ರೂಪ, ರಾಜೇಶ್ವರಿ,ಕಲಾವತಿ, ಶ್ರೀದೇವಿ, ಇಂದ್ರಸೇನಾ ರೆಡ್ಡಿ, ಲೋಕರೆಡ್ಡಿ ಗೋಪಿ ರಾಣಿತೋಟ, ವೀರೇಶ್, ವಂಶೀ,ಶಾಬಾಜ್, ಮಣಿ, ಬಸವ  ಮುಂತಾದ ಪಕ್ಷದ ಮುಖಂಡರು ಭಾಗವಹಿಸಿದ್ದರು.