ಪ್ರೀತಿಸುತ್ತಿದ್ದ ಯುವಕ-ಯುವತಿ ಶವ ಪತ್ತೆ

ಬೆಂಗಳೂರು,ಸೆ.21-ಹೆಬ್ಬಗೋಡಿಯ‌ ಮನೆಯೊಂದರಲ್ಲಿ ಯುವಕ-ಯುವತಿ ಶವ ಪತ್ತೆಯಾಗಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಚೌಡ ಸಮುದ್ರದ ನಿವಾಸಿಗಳಾದ ಮಲ್ಲಿಕಾರ್ಜುನ್ (27),‌ ನೇತ್ರಾವತಿ (23)‌ಮೃತ ದುರ್ದೈವಿಗಳು.
ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ಮಲ್ಲಿಕಾರ್ಜುನ್, ನೇತ್ರಾವತಿ 4 ವರ್ಷ‌ದಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಖಾಸಗೀ ಕಂಪನಿಯಲ್ಲಿ ಕೆಲಸ‌ ಮಾಡುತ್ತಿದ್ದ ನೇತ್ರಾವತಿ ಹೆಬ್ಬಗೋಡಿ ಸಮೀಪದ ‌ಮನೆಯಲ್ಲಿ ಬಾಡಿಗೆಗಿದ್ದರು.
ಮಲ್ಲಿಕಾರ್ಜುನ್ ಆಗಾಗ ನೇತ್ರ ಭೇಟಿ ಆಗಲು ಮನೆಗೆ ಬರುತ್ತಿದ್ದು. ಇದೇ ತಿಂಗಳ 19 ರಂದು ಇಬ್ಬರ ಮಧ್ಯೆ ಜಗಳ ನಡೆದಿತ್ತು. ಪ್ರೀತಿಗಾಗಿ ಶುರುವಾದ ಜಗಳ ಸಾವಿನಲ್ಲಿ‌ ಅಂತ್ಯವಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮಲ್ಲಿಕಾರ್ಜುನ್ ಮತ್ತು ನೇತ್ರಾವತಿ ಶವ ಪತ್ತೆಯಾಗಿದೆ.