ಪ್ರೀತಿಯ ಹಸುವಿನ ಅಂತಿಮ ಸಂಸ್ಕಾರ ನೇರವೇರಿಸಿದ ರೈತ

ಸಂಜೆವಾಣಿ ವಾರ್ತೆ
ಔರಾದ್:ಜ.29: ತಾಲೂಕಿನ ಕೊಳ್ಳೂರ ಗ್ರಾಮದಲ್ಲಿ ಮೃತಪಟ್ಟ ಹಸುವಿಗೆ ನಾನಾ ವಿಧಿವಿಧಾನಗಳ ಮೂಲಕ ಶುಕ್ರವಾರ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವಿಯತೆ Éೂೀರಿದರು.
ಗ್ರಾಮದ ಯುವ ರೈತ ಮಲ್ಲಿಕಾರ್ಜುನ ರೇವಣಪ್ಪ ದೇಗಲವಾಡೆ ಅಂತ್ಯಸಂಸ್ಕಾರ ನಡೆಸಿದವರು. 30 ವರ್ಷಗಳ ಕಾಲ ಬದುಕಿದ್ದ ಹಸುವಿನ ಪಾರಮ್ಮ(ಪಾರಿ) ಬಗ್ಗೆ ಕುಟುಂಬ ಸದಸ್ಯರು ಕಂಬನಿ ಮಿಡಿದರು. 15 ಕ್ಕೂ ಹೆಚ್ಚು ಕರುಗಳಿಗೆ ಜನ್ಮ ನೀಡಿದ್ದ ಹಸು ಹಸು ಬಂಗಾರ ಎನ್ನುವುದು ಸುಳ್ಳಲ್ಲ.
ಸಾಕ್ಷಾತ್ ಬಸವಣ್ಣನೆಂದೇ ನಂಬಿದ್ದ ಅದಕ್ಕೆ ವಯಸ್ಸಾಗಿದೆ ಎಂದು ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಕಟ್ಟಿ ಜೋಪಾನ ಮಾಡಲಾಗಿತ್ತು. ದುಡ್ಡಿನ ಆಸೆಗೆ ಅದನ್ನು ಮಾರುವ ವಿಚಾರ ಕನಸಿನಲ್ಲಿಯೂ ಈ ರೈತನಿಗೆ ಬಂದಿರಲಿಲ್ಲ. ಕಳೆದ ಒಂದು ವಾರದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಹಸುವಿಗೆ ಬದುಕಿಸಿಕೊಳ್ಳಲು ವೆದ್ಯಕೀಯ ಚಿಕಿತ್ಸೆ ಕೊಡಿಸುವ ಮೂಲಕ ಮಗುವಿನಂತೆ ಜೋಪಾನ ಮಾಡಿದರೂ ಮನೆಯ ಋಣ ಮುಗಿಸಿದ ಹಸುವಿನ ಸಾವಿನ ಸುದ್ದಿಯಿಂದ ಮನೆಯೊಡತಿ, ಮಕ್ಕಳು ಮತ್ತು ಓಣಿಯ ಜನರ ಕಣ್ಣಲ್ಲಿ ನೀರು ತರಿಸಿತ್ತು.
ಸೂಮಾರು ಮೂವತ್ತು ವರ್ಷಗಳಿಂದ ಮನೆಯಲ್ಲಿ ಪಾರಮ್ಮ ಆಕಳು ಇದ್ದು ನಾವು ಚಿಕ್ಕವರಿದ್ದಾಗ ಇದೆ ಆಕಳ ಹಾಲನ್ನು ಕುಡಿದು ದೂಡ್ಡವರಾಗಿದ್ದೇವೆ ಪಾರಿಯು ನಮ್ಮ ಕುಟುಂಬದ ಲಕ್ಷ್ಮಿ ಇದ್ದು ಅದನ್ನು ಕಳೆದುಕೊಂಡ ನಾವು ಬಡ ರಾಗಿದ್ದೇವೆ ಎಂದು ಯುವ ರೈತ ಮಲ್ಲಿಕಾರ್ಜುನ ಕಣ್ಣಿರು ಹಾಕಿದ್ದಾರೆ. ಮನುಷ್ಯರಂತೆಯೇ ಅದಕ್ಕೂ ಅಂತಿಮ ನಮನ ಸಲ್ಲಿಸಿ ವಿಧಿ ವಿಧಾನಗಳನ್ನು ಪುರೈಸಿದರು.