ಪ್ರೀತಿಯ ಶಿಕ್ಷಕರಿಗೆ ಗೌರವಿಸಿ ಗುರು ಭಕ್ತಿ ಮೆರೆದ ಪುಟಾಣಿಗಳು

ಔರಾದ :ಸೆ.6: ನಗರದ ಬಸವ ಗುರುಕುಲ ಶಾಲೆಯ ಮಕ್ಕಳಿಂದ ಅಕ್ಷರ ಕಲಿಸುವ ತಮ್ಮ ಶಿಕ್ಷಕ ವೃಂದದವರಿಗೆ ಮಕ್ಕಳು ಗೌರವ ಸನ್ಮಾನ ಮಾಡುವ ಮೂಲಕ ಶಿಕ್ಷಕರ ದಿನ ಆಚರಣೆ ಮಾಡಿದರು.

ಬಸವ ಗುರುಕುಲ ಶಾಲೆಯ ಎಲ್.ಕೆ.ಜಿ. ಮಕ್ಕಳಾದ ಸಂಸ್ಕøತಿ ಚಂಡೇಶ್ವರೆ, ಶ್ರದ್ಧಾ ಚಂಡೇಶ್ವರೆ,ಇವರು ತಮ್ಮ ಶಾಲೆಯ ಮುಖ್ಯ ಶಿಕ್ಷಕಿ ರೇಖಾ ನೌಬಾದೆ, ಶಾಲೆ ಮುಖ್ಯೋಪಾಧ್ಯಾಯಿನಿ ಇಂದುಮತಿ ಎಡವೆ ಅವರಿಗೆ ಗೌರವ ಸನ್ಮಾನ ಮಾಡಿ ಶಿಕ್ಷಕರ ದಿನಾಚರಣೆಯ ಶುಭಕೋರಿ ಗಮನ ಸೆಳೆದರು.

ಈ ಸಂದರ್ಭದಲ್ಲಿ ಬಸವ ಗುರುಕುಲ ಪ್ರಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಇಂದುಮತಿ ಎಡವೆ ಅವರು ಮಾತನಾಡಿ, ನಮ್ಮ ದೇಶದಲ್ಲಿ ಶಿಕ್ಷಕ ವೃತ್ತಿಗೆ ಪವಿತ್ರವಾದ ಸ್ಥಾನವಿದೆ, ವಿದ್ಯಾರ್ಥಿಗಳ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಶಿಕ್ಷಕರ ಪಾತ್ರ ಬಹುಮುಖ್ಯ, ಬಾಲ್ಯದಿಂದ ವೃದ್ಧಾಪ್ಯದವರೆಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಬದುಕಿಗೆ ಪಾಠ ಕಲಿಸುವ ಶಿಕ್ಷಕರಾಗುತ್ತಾರೆ. ಜೀವನದ ಗುರಿಯನ್ನು ತೋರಿದ ಗುರುವಿನ ನೆನೆಯ ಎಂದರು.

ಸಹ ಶಿಕ್ಷಕಿ ರೇಖಾ ನೌಬಾದೆ, ಅವರು ಮಾತನಾಡಿ ಮಕ್ಕಳನ್ನು ಸರಿಯಾದ ದಾರಿ ತೋರಿಸಿ ಅವರ ಭವಿಷ್ಯ ಉಜ್ವಲಗೊಳಿಸುವವನೆ ನಿಜವಾದ ಶಿಕ್ಷಕ ಎಂದೆನಿಸುತ್ತದೆ. ಅಜ್ಞಾನದ ಕತ್ತಲೆಯನ್ನು ತೊಡೆದು ಹಾಕಿ ಜ್ಞಾನದ ಬೆಳಕು ಚಲ್ಲುತಾ ತನ್ನ ಜೀವನದ ಜೊತೆಗೆ ಮಕ್ಕಳ ಜೀವನವನ್ನು ಪ್ರಕಾಶಮಾನಗೊಳಿಸುವವರೇ ನಿಜವಾದ ಶಿಕ್ಷಕರು ಎಂದರು.

ಈ ಸಂದರ್ಭದಲ್ಲಿ ಬಸವ ಗುರುಕುಲ ಪ್ರಾಥಮಿಕ ಶಾಲೆ ಸಿಬ್ಬಂದಿ, ಪ್ರೌಢ ಶಾಲೆಯ ಸಿಬ್ಬಂದಿ, ಡಿಎಡ್, ಕಾಲೇಜಿನ ಸಿಬ್ಬಂದಿ,ಐಟಿಐ ಕಾಲೇಜಿನ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.