ಪ್ರೀತಿಯ ಮೋಸ ಕಿರುಚಿತ್ರ ಟೈಟಲ್ ಬಿಡುಗಡೆ

ಯಾದಗಿರಿ;ಸೆ.16: ಪವಿತ್ರಾ ಕಂಪ್ಯೂಟರ್ಸ್ ಸೇವಾ ಸಂಸ್ಥೆ ಕ್ರಿಯೇಷನ್ಸ್ ಆಶ್ರಯದಲ್ಲಿ ನಿರ್ಮಿಸಲಾಗುತ್ತಿರುವ ‘ಪ್ರೀತಿಯ ಮೋಸ’ ಕನ್ನಡ ಕಿರು ಚಲನಚಿತ್ರದ ಟೈಟಲ್ ಬಿಡುಗಡೆ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಮಾಡಲಾಯಿತು.
ಕರ್ನಾಟಕ ರಣಧೀರ ಪಡೆ ಜಿಲ್ಲಾದ್ಯಕ್ಷ ಡಿ. ಭಾಸ್ಕರ್ ಅಲ್ಲಿಪುರ ಟೈಟಲ್ ಬಿಡುಗಡೆ ಮಾಡಿ ಮಾತನಾಡಿ ಯಾದಗಿರಿ ಜಿಲ್ಲೆಯ ಯುವ ಪ್ರತಿಭೆಗಳು ಮಾಡುತ್ತಿರುವ ಹೊಸ ಸಾಹಸ ಇತರರಿಗೆ ಮಾದರಿಯಾಗಿದ್ದು ಹಿಂದುಳಿದ ಯಾದಗಿರಿ ಭಾಗದಲ್ಲಿಯೂ ಕಿರು ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ಕಾಲಿಸಿರುವುದು ಶ್ಲಾಘನೀಯ ಎಂದು ನುಡಿದರು,.
ಈ ಸಂದರ್ಭದಲ್ಲಿ ಕಿರು ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಸ್.ಎಸ್. ರವಿ ಬಾಚವಾರ ಅವರು ಇದ್ದರು. ಬೆಂಜಮಿನ್ ಶಿವನೂರ, ಎಜಿಕೆಲ್ ಯಡ್ಡಳ್ಳಿ, ಕೀರ್ತಿಕುಮಾರ ಬಾಚವಾರ, ಅಶೋಕ ನಾಯಕ ಬಾಚವಾರ ಇನ್ನಿತರರು ಪಾಲ್ಗೊಂಡಿದ್ದರು.