ಪ್ರೀತಿಗಾಗಿ ಹಿಂದೂ ಆದ ಮುಸ್ಲಿಂ ನಟಿ ನರ್ಗಿಸ್ ಜೀವನ ಎಷ್ಟು ಸುಂದರವೋ, ಸಾವೂ ಅಷ್ಟೇ ನೋವು: ಕ್ಯಾನ್ಸರ್ ನಿಂದ ಸಾವು

ತನ್ನ ನಟನೆಯಿಂದ ಮಾತ್ರವಲ್ಲದೆ ತನ್ನ ಸೌಂದರ್ಯದಿಂದಲೂ ಜನರನ್ನು ಹುಚ್ಚೆಬ್ಬಿಸಿದ್ದ ’ಮದರ್ ಇಂಡಿಯಾ’ ಎಂದೇ ಕರೆಸಿಕೊಂಡಿರುವ ನರ್ಗೀಸ್ ಅವರ ಪುಣ್ಯತಿಥಿ ಮೇ ೩.
ಪುಣ್ಯತಿಥಿಯ ದಿನವಾದ ಶುಕ್ರವಾರ ಆಕೆಯ ಮಗ ಮತ್ತು ನಟ ಸಂಜಯ್ ದತ್ ತನ್ನ ತಾಯಿಯನ್ನು ನೆನಪಿಸಿಕೊಂಡಿದ್ದಾರೆ. ತಾಯಿ ನರ್ಗೀಸ್ ಜೊತೆಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನೀನು ನನ್ನೊಂದಿಗಿಲ್ಲದಿದ್ದರೂ ನಿನ್ನ ಸಾನ್ನಿಧ್ಯ ಸದಾ ಹತ್ತಿರದಲ್ಲಿಯೇ ಇದೆ ತಾಯಿ” ಎಂದು ಸಂಜಯ್ ದತ್ ಬರೆದುಕೊಂಡಿದ್ದಾರೆ.


ಸಂಜಯ್ ದತ್ ಅವರ ಹೃದಯದಲ್ಲಿ ತಾಯಿಯ ನೆನಪುಗಳು ಇನ್ನೂ ಜೀವಂತವಾಗಿವೆ ಎಂದು ಬರೆದುಕೊಂಡಿದ್ದಾರೆ. ಖ್ಯಾತ ನಟಿ ನರ್ಗೀಸ್ ೧೯೮೧ ರ ಮೇ ೩ ರಂದು ೫೧ ನೇ ವಯಸ್ಸಿನಲ್ಲಿ ಕ್ಯಾನ್ಸರ್ ನಿಂದ ನಿಧನರಾದರು. ಸಂಜಯ್ ದತ್ ಅವರ ಮೊದಲ ಚಿತ್ರ ’ರಾಕಿ’ ಬಿಡುಗಡೆಯ ಮೂರು ದಿನಮೊದಲು ನರ್ಗಿಸ್ ನಿಧನರಾದರು.
ಸಂಜಯ್ ದತ್ ತಾಯಿ ನರ್ಗೀಸ್ ಜೊತೆಗಿನ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಅವರು ತನ್ನ ತಾಯಿಯ ಪಕ್ಕದಲ್ಲಿ ನಿಂತಿದ್ದಾರೆ. ಆಗ ಸಂಜಯ್‌ಗೆ ಮೂರು-ನಾಲ್ಕು ವರ್ಷ ವಯಸ್ಸಾಗಿತ್ತು. ಎರಡನೇ ಮತ್ತು ಮೂರನೇ ಫೋಟೋದಲ್ಲಿ ತನ್ನ ತಾಯಿಯ ಮಾತನ್ನು ಕೇಳುತ್ತಿದ್ದಾರೆ ಸಂಜಯ್.
ನಿಸ್ಸಂಶಯವಾಗಿ ಸಂಜಯ್ ದತ್ ತನ್ನ ತಾಯಿಗೆ ತುಂಬಾ ಹತ್ತಿರವಾಗಿದ್ದರು. ಆದರೆ, ಸಾಯುವ ವೇಳೆಗೆ ಸಂಜಯ್ ಡ್ರಗ್ಸ್ ನ ಹಿಡಿತದಲ್ಲಿದ್ದರು.
೫೦–೬೦ರ ದಶಕದಲ್ಲಿ ನಟಿ ತಮ್ಮ ನಟನೆಯಿಂದ ಜನರನ್ನು ಹುಚ್ಚರನ್ನಾಗಿ ಮಾಡುತ್ತಿದ್ದರು. ಅಭಿನಯದ ಕೌಶಲ್ಯ ಅವರ ಪ್ರತಿಯೊಂದು ದೃಶ್ಯದಲ್ಲೂ ಕಾಣಿಸಿದ್ದುದರಿಂದ ಅಂದಿನ ಪ್ರೇಕ್ಷಕರು ಮರೆಯುವಂತೆಯೇ ಇಲ್ಲ.
ತನ್ನ ಸೊಬಗು ಮತ್ತು ಸೌಂದರ್ಯದಿಂದ ಜನರ ಹೃದಯವನ್ನು ಗೆದ್ದ ಅಂತಹ ಒಬ್ಬ ನಟಿ ನರ್ಗಿಸ್.ಅವರು ನಟನೆಯ ಮೂಲಕ ಹಿಂದಿ ಚಿತ್ರರಂಗವನ್ನು ಎತ್ತರಕ್ಕೆ ಕೊಂಡೊಯ್ದರು. ಹಿಂದಿ ಚಿತ್ರರಂಗಕ್ಕೆ ಅನೇಕ ಅದ್ಭುತ ಚಿತ್ರಗಳನ್ನು ನೀಡಿದ ಹಿರಿಯ ನಟಿ ನರ್ಗೀಸ್ ವೃತ್ತಿ ಜೀವನಕ್ಕಿಂತ ವೈಯುಕ್ತಿಕ ಜೀವನಕ್ಕಾಗಿಯೇ ಹೆಚ್ಚು ಸುದ್ದಿಯಾಗಿದ್ದವರು.


ಪ್ರೀತಿಯ ವಿಷಯದಲ್ಲೂ ಅವರ ಬಳಿ ಉತ್ತರವಿರಲಿಲ್ಲ. ನರ್ಗೀಸ್ ಇಂದು ನಮ್ಮ ನಡುವೆ ಇಲ್ಲದಿರಬಹುದು ಆದರೆ ಅವರ ಚಿತ್ರಗಳು ಮತ್ತು ಹಾಡುಗಳಿಂದ ಅವರು ನಮ್ಮ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತಾರೆ.
ಮುಸಲ್ಮಾನಳಾದ ಆಕೆ ಪ್ರೇಮಕ್ಕಾಗಿ ಧರ್ಮ ಬದಲಾಯಿಸಿದ್ದರು, ಅಷ್ಟೇ ಅಲ್ಲ ಕಪೂರ್ ಕುಟುಂಬದ ಮಗನ ಜೊತೆಗಿನ ಪ್ರೇಮ ಸಂಬಂಧದ ಚರ್ಚೆಗಳೂ ಗಾಸಿಪ್ ಕಾರಿಡಾರ್ ನಲ್ಲಿ ಬಿಸಿಯಾಗಿಯೇ ಉಳಿದಿವೆ. ನಟಿಯ ಸಾವು ಕೂಡ ತುಂಬಾ ನೋವಿನಿಂದ ಕೂಡಿದೆ, ಅವರು ಕ್ಯಾನ್ಸರ್ ವಿರುದ್ಧ ಹೋರಾಡುವಾಗಲೇ ನಿಧನರಾದರು. ನಿನ್ನೆ ಶುಕ್ರವಾರ ನರ್ಗೀಸ್ ಅವರ ಪುಣ್ಯತಿಥಿ.
ಬಾಲ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದರು:
ನರ್ಗೀಸ್ ಹುಟ್ಟಿದ್ದು ೧ ಜೂನ್ ೧೯೨೯ ರಂದು. ನಟಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ನಟಿ ಕೇವಲ ೬ ವರ್ಷ ವಯಸ್ಸಿನಲ್ಲೇ ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಾಲ್ಯದಲ್ಲಿಯೂ ತುಂಬಾ ಮುದ್ದಾಗಿದ್ದರೂ, ನಟಿ ಮುಖ್ಯ ಭೂಮಿಕೆಯಲ್ಲಿ ತೆರೆಗೆ ಬಂದ ನಂತರ, ಜನರು ಅವರ ಸೌಂದರ್ಯದ ಬಗ್ಗೆ ಹುಚ್ಚರಾದರು.


ನರ್ಗೀಸ್ ಕಪೂರ್ ಕುಟುಂಬದ ಹುಡುಗನನ್ನು ಹುಚ್ಚನಂತೆ ಪ್ರೀತಿಸುತ್ತಿದ್ದರು:
ನರ್ಗೀಸ್ ಸಿನಿಮಾಗಳಲ್ಲಿ ನಟಿಸಿ ಜನರ ಮನ ಗೆದ್ದಿದ್ದರೂ ಕೂಡ ತನ್ನ ಪ್ರೀತಿಯಿಂದ ಸುದ್ದಿಯಲ್ಲಿದ್ದರು. ಅಂದಾಜ್ ಚಿತ್ರದ ಸೆಟ್‌ನಲ್ಲಿ ನರ್ಗೀಸ್ ರಾಜ್ ಕಪೂರ್ ಅವರನ್ನು ಭೇಟಿಯಾದರು. ಜನರು ಅವರ ಜೋಡಿಯನ್ನು ತುಂಬಾ ಇಷ್ಟಪಟ್ಟಿದ್ದಾರೆ. ರೀಲ್ ಜೀವನದ ಹೊರತಾಗಿ, ಜೋಡಿ ನಿಜ ಜೀವನದಲ್ಲೂ ಜನರಿಂದ ಪ್ರೀತಿಯನ್ನು ಪಡೆದರು. ಮೊದಲು ಸ್ನೇಹ ಮತ್ತು ನಂತರ ಆಳವಾದ ಪ್ರೀತಿ ಹುಟ್ಟಿತು. ಇಬ್ಬರೂ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುತ್ತಿದ್ದರು. ನಟಿ ರಾಜ್ ಕಪೂರ್ ಆರ್ಥಿಕ ಸಂಕಷ್ಟದಲ್ಲಿದ್ದಾಗ ಪ್ರೀತಿಗಾಗಿ ಆಭರಣಗಳನ್ನು ಮಾರಾಟ ಮಾಡಿ ಸಹಾಯ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಇಬ್ಬರೂ ಬೇರ್ಪಟ್ಟರು,ಅದು ಅವರ ಹೃದಯವನ್ನು ಒಡೆಯಿತು.


’ಬರ್ಸಾತ್’ ನಲ್ಲಿ ಎರಡನೇ ಬಾರಿಗೆ ಹೃದಯ ಒಪ್ಪಿಸಿದರು:
ರಾಜ್ ಕಪೂರ್ ಜೊತೆಗಿನ ವಿಘಟನೆಯ ನಂತರ ನರ್ಗೀಸ್ ಕೆಟ್ಟ ಸ್ಥಿತಿಯಲ್ಲಿದ್ದರು. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಪ್ರೀತಿ ಬೇಕಿತ್ತು, ಸುನಿಲ್ ದತ್ ಅವರಿಂದ ಆ ಪ್ರೀತಿ ಸಿಕ್ಕಿತು. ಹೌದು, ಬರ್ಸಾತ್ ಸೆಟ್‌ನಲ್ಲಿ, ಆಕೆಯ ಹೃದಯವು ಸುನಿಲ್‌ಗಾಗಿ ಬಡಿಯಲು ಪ್ರಾರಂಭಿಸಿತು ಮತ್ತು ಅವರ ನಡುವೆ ಪ್ರೀತಿ ಅರಳಿತು. ನರ್ಗೀಸ್‌ರ ಸರಳತೆಗೆ ಸುನಿಲ್ ಹುಚ್ಚನಾಗಿದ್ದರು. ಇಬ್ಬರೂ ತಮ್ಮ ಸಂಬಂಧವನ್ನು ಒಪ್ಪಿ ಮದುವೆಯಾದರು.
ನರ್ಗೀಸ್ ಮುಸ್ಲಿಂ . ಆದ್ದರಿಂದ ಆಕೆ ಪ್ರೀತಿಯ ಸಲುವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡರು ಮತ್ತು ನರ್ಗೀಸ್ ತನ್ನ ಹೆಸರನ್ನು ನಿರ್ಮಲಾ ದತ್ ಎಂದು ಬದಲಾಯಿಸಿಕೊಂಡರು. ಆದರೆ ಅವರು ನರ್ಗೀಸ್ ಎಂಬ ಹೆಸರಿನಿಂದಲೇ ಪರಿಚಿತಳಾಗಿದ್ದರು.
ಕ್ಯಾನ್ಸರ್ ಅವರ ಜೀವವನ್ನು ಬಲಿ ತೆಗೆದುಕೊಂಡಿತು:
ನರ್ಗೀಸ್ ತಮ್ಮ ಚಿತ್ರರಂಗದಲ್ಲಿ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ನಟಿಯ ಸಾವು ತುಂಬಾ ನೋವಿನಿಂದ ಕೂಡಿದೆ, ಅವರಿಗೆ ಕ್ಯಾನ್ಸರ್ ಇತ್ತು, ಚಿಕಿತ್ಸೆಯ ಸಮಯದಲ್ಲಿ ಅವರು ಕೋಮಾಕ್ಕೆ ಹೋದರು. ಪತಿ ಸುನೀಲ್ ದತ್ ಕೂಡ ಆಕೆಯನ್ನು ಚಿಕಿತ್ಸೆಗಾಗಿ ಅಮೆರಿಕಕ್ಕೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ನಟಿಯ ಸ್ಥಿತಿಯನ್ನು ನೋಡಿದ ವೈದ್ಯರು ಆಕೆಯ ಜೀವರಕ್ಷಕ ವ್ಯವಸ್ಥೆಯನ್ನು ಸ್ವಿಚ್ ಆಫ್ ಮಾಡಲು ಸಲಹೆ ನೀಡಿದರು, ಇದರಿಂದ ಅವರು ನೋವು ಸಹಿಸುವುದಿಲ್ಲ ಎಂದರು.
ಆದರೆ ಸುನಿಲ್ ದತ್ ಇದಕ್ಕೆ ಅವಕಾಶ ನೀಡಲಿಲ್ಲ ಮತ್ತು ಅವರು ಕ್ಯಾನ್ಸರ್ನೊಂದಿಗೆ ಹೋರಾಡುತ್ತಿರುವಾಗ ೩ ಮೇ ೧೯೮೧ ರಂದು ನಿಧನರಾದರು.
ನರ್ಗಿಸ್ ಅವರು ೧೯೪೦ ಮತ್ತು ೧೯೫೦ ರ ದಶಕಗಳಲ್ಲಿ ಬರ್ಸಾತ್, ಅಂದಾಜ್, ಅವಾರಾ, ದೀದಾರ್, ಶ್ರೀ ೪೨೦, ಚೋರಿ ಚೋರಿ ಮುಂತಾದ ಅನೇಕ ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ನರ್ಗೀಸ್ ಮತ್ತು ರಾಜ್ ಕಪೂರ್ ೧೬ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಆಕೆಯ ಮತ್ತು ರಾಜ್ ಕಪೂರ್ ಜೋಡಿಯು ಹೆಚ್ಚು ಮಾತನಾಡಲ್ಪಟ್ಟಿತ್ತು.