ಪ್ರಿಯಾ ಆಚಾರ್ ಹೊಸ ಫೋಟೋಶೂಟ್

ಬೆಂಗಳೂರು,ಮೇ.೮-ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿ ಪಾತ್ರದ ಮೂಲಕ ಮನೆ ಮಾತಾಗಿರುವ ನಟಿ ಪ್ರಿಯಾ ಆಚಾರ್ ಹೊಸ ಫೋಟೋಶೂಟ್ ಮಾಡಿಸಿದ್ದು, ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಪ್ರಿಯಾ ಆಚಾರ್ ತಮ್ಮ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇವರ ಫೋಟೋಗಳನ್ನು ನೋಡಿದ ಅಭಿಮಾನಿಗಳಿ ಲೈಕ್ಸ್ ಕೊಡುತ್ತಿದ್ದು, ವಾವ್, ಸೂಪರ್, ಲವ್ಲಿ, ಗೊಂಬೆ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
ಮೂಲತಃ ದಾವಣಗೆರೆಯವರಾಗಿರುವ ಪ್ರಿಯಾ ಆಚಾರ್ ಬಿಸಿಎ ಪದವಿ ಮುಗಿಸಿದ್ದಾರೆ. ’ಗಟ್ಟಿಮೇಳ’ ಧಾರಾವಾಹಿ ಶುರುವಾದಾಗ ಪ್ರಿಯಾ ಆಚಾರ್ ಅವರು ಓದು ಹಾಗೂ ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರು.
ಪ್ರಿಯಾ ಆಚಾರ್ ಕೇವಲ ಕಿರುತೆರೆ ನಟಿಯಷ್ಟೇ ಅಲ್ಲದೇ ಇತ್ತೀಚಿಗೆ ರಿಲೀಸ್ ಆಗಿದ್ದ ಧಮಾಕಾ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚಿಗಷ್ಟೇ ನಟಿ ಆದಿತಿ ಪಾರು ಸಿರೀಯಲ್‌ನ ನಟಿಸಿದ್ದ ಸಿದ್ದು ಮೂಲಿಮನೆ ಅವರ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.