ಪ್ರಿಯಾಂಕ ಉಗ್ರಾವತಾರ ಟೀಸರ್ ಬಿಡುಗಡೆ

ಮಿಸಸ್ ಯೂನಿವರ್ಸ್ ಸುಧಾ.ಎಂ  ಫ್ಯಾಷನ್ ಶೋ ದಲ್ಲಿ ಹಿರಿಯ ನಟಿ ಪ್ರಿಯಾಂಕ ಉಪೇಂದ್ರ ಅಭಿನಯದ ’ಉಗ್ರಾವತಾರ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಿಯಾಂಕ ಸೆಣೆದಾಡುವ ಭರ್ಜರಿ ಸಾಹಸ ದೃಶ್ಯಗಳು ಕಂಡು ಬಂದಿದೆ.

’ಸಲಗ’ ಚಿತ್ರಕ್ಕೆ ’ಕಹಚಲಿಗೇ ಬೆಂಗಳೂರು ದೇಖನೋಕೆ’ ಗೀತೆ ಹಾಡಿರುವ  ಉತ್ತರ ಕನ್ನಡ ಜಿಲ್ಲೆಯ ಗೀತಾಸಿದ್ದಿ ಮತ್ತು ಗಿರಿಜಾಸಿದ್ದಿ ಬಸೋಬಿ ಸಾಹಿತ್ಯದ ಕೊಂಕಣಿ ಭಾಷೆಯಲ್ಲಿ ಬರುವ ’ಅಯ್ಯೋ ಮಾಜೋದೇವ, ಅಯ್ಯೋಯ್ಯೋ ಮಾಜೋದೇವ’ ಗೀತೆಗೆ ಧ್ವನಿಯಾಗಿದ್ದಾರೆ. ಅಯ್ಯೋ ನನ್ನ ದೇವರೆ, ನಾವು ಕಷ್ಟದಲ್ಲಿ ಇದ್ದೇವೆ ನಮ್ಮನ್ನು ಬಂದು ಕಾಪಾಡಿ’ ಎಂದು ಕನ್ನಡದಲ್ಲಿ ಅರ್ಥ ಕೊಡುತ್ತದೆ.

ಗುರುಮೂರ್ತಿ ನಿರ್ದೇಶನದಲ್ಲಿ, ಎಸ್.ಜಿ.ಸತೀಶ್ ನಿರ್ಮಾಣ ಮಾಡಿದ್ದಾರೆ. ತಾರಾಗಣದಲ್ಲಿ ಸುಮನ್, ಪವಿತ್ರಾಲೋಕೇಶ್, ಶೋಭ, ನಟರಾಜ್ ಮುಂತಾದವರು ಅಭಿನಯಿಸಿದ್ದಾರೆ. ರಾಧಾಕೃಷ್ಣಬಸ್ರೂರು ಸಂಗೀತ, ಛಾಯಾಗ್ರಹಣ ನಂದಕುಮಾರ್ ಛಾಯಾಗ್ರಹಣವಿದೆ. ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.