ಪ್ರಿಯಾಂಕ್ ಸಂವಿಧಾನದ ಆಶಯದಂತೆ ನಡೆದುಕೊಳ್ಳಲಿ:ಜಾಧವ್

ಕಲಬುರಗಿ,ಆ 30: ಪ್ರಿಯಾಂಕ್ ಖರ್ಗೆ ತಾವೊಬ್ಬರೇ ಭಾರತ ದೇಶ ಹಾಗೂ ಕರ್ನಾಟಕವನ್ನು ರಕ್ಷಣೆ ಮಾಡೋರು ಅನ್ನುವ ಹಾಗೆ ಮಾತಾಡುತ್ತಿದ್ದಾರೆ.
ಸಂವಿಧಾನದ ಬಗ್ಗೆ ಮಾತಾಡುವ ಪ್ರಿಯಾಂಕ್ ಖರ್ಗೆ ಅದರಂತೆ ನಡೆದುಕೊಳ್ಳಲಿ ಎಂದು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಸಲಹೆ ನೀಡಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚಿತ್ತಾಪುರದ ಯುವಕನ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮಣಿಕಂಠ ರಾಠೋಡ್ ಹೋರಾಟ ಮಾಡುತ್ತಿದ್ದಾರೆ. ಆದರೆ, ಮಣಿಕಂಠ ಪ್ರತಿಭಟನೆ ತಡೆಯಲು ಆತನನ್ನು ಅರೆಸ್ಟ್ ಮಾಡಿಸಿದ್ದಾರೆ ಎಂದು ಟೀಕಿಸಿದರು.
ಬೆಳ್ಳಂ ಬೆಳಗ್ಗೆಯೇ ಮಣಿಕಂಠ ಮನೆಗೆ ಹೋಗಿ ಆತನ ಬಂಧನ ಮಾಡಿದ್ದಾರೆ. ಅಷ್ಟೇ ಅಲ್ಲ; ಮಣಿಕಂಠ ಮೇಲೆ ಬಹಳಷ್ಟು ಸುಳ್ಳು ಕೇಸ್ ದಾಖಲಿಸಲಾಗಿದೆ. ತಮ್ಮ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳ ವಿರುದ್ಧ ರಾಠೋಡ್ ಕಾನೂನು ಹೋರಾಟ ಮಾಡುತ್ತಿದ್ದಾರೆ ಎಂದರು.
ಪೆÇಲೀಸರು ಪ್ರಿಯಾಂಕ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ ಎಂದರು.
ಕಲಬುರಗಿಯಲ್ಲಿ ಖರ್ಗೆ ಪಾಲಿಗೆ ಕಾಂಗ್ರೆಸ್ ಲಿಮಿಟೆಡ್ ಕಂಪೆನಿ ಆಗಿದೆ. ಇಲ್ಲಿ ಬೇರೆಯವರಿಗೆ ಅವಕಾಶವೆ ಇಲ್ಲದಂತಾಗಿದೆ.ತಾವು ಕಾಂಗ್ರೆಸ್ ಬಿಡಲು ಪ್ರಿಯಾಂಕ್ ಖರ್ಗೆಯವರೇ ಕಾರಣ ಎಂದು ಒತ್ತಿ ಹೇಳಿದರು.
ಯಾರಾದರೂ ತಪ್ಪು ಮಾಡಿದರೆ ಕ್ರಮ ಕೈಗೊಳ್ಳಲಿ. ಆದರೆ ಪ್ರಿಯಾಂಕ್ ಖರ್ಗೆ ಮಾತೆತ್ತಿದರೆ ಒದ್ದು ಒಳಗೆ ಹಾಕಿ ಎನ್ನುತ್ತಾರೆ. ಹಾಗೆಲ್ಲಾ ಒದ್ದು ಒಳಗಡೆ ಹಾಕಲು ಇದೇನು ಅವರಪ್ಪನ ಜಾಗೀರಾ? ಎಂದು ಸಂಸದ ಜಾಧವ್ ಖಾರವಾಗಿ ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆಯವರು ಅವರ ತಂದೆಯರನ್ನು ನೋಡಿ ಕಲಿಯಬೇಕಾದ್ದು ಸಾಕಷ್ಟಿದೆ. ಅವರಿಂದ ಒಳ್ಳೆಯ ಗುಣಗಳನ್ನು ಕಲಿತು ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.