ಪ್ರಿಯಾಂಕ್ ಖರ್ಗೆ ಹುಟ್ಟು ಹಬ್ಬ; ಕಾರ್ಮಿಕರಿಗೆ ಬಟ್ಟೆ, ಆಹಾರ ಕೀಟ್ ವಿತರಣೆ

ಅಫಜಲಪುರ: ನ.23:ರಾಜ್ಯದಲ್ಲೇ ಅತಿ ಚಿಕ್ಕ ವಯಸ್ಸಿನಲ್ಲೇ ಶಾಸಕ ಹಾಗೂ ಸಚಿವರಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ತಂದೆಗೆ ತಕ್ಕ ಮಗನಾಗಿ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಡವರ,ದಿನ ದಲಿತರ ಹಾಗೂ ನೊಂದವರ ಆಪತ್ಬಾಂಧವರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜೆ.ಎಂ.ಕೊರಬು ಫೌಂಡೇಶನ್ ಅಧ್ಯಕ್ಷ ಶಿವಪುತ್ರಪ್ಪ ಜಿಡ್ಡಗಿ ಬಣ್ಣಿಸಿದರು.ಪಟ್ಟಣದ ಪುರಸಭೆಯ ಕಾರ್ಮಿಕರಿಗೆ ಪ್ರಿಯಾಂಕ್ ಖರ್ಗೆ ಅವರ 43ನೇ ಜನ್ಮದಿನದ ಅಂಗವಾಗಿ ಜೆ.ಎಂ.ಕೊರಬು ಫೌಂಡೇಶನ್ ವತಿಯಿಂದ ಆಹಾರ ಸಾಮಗ್ರಿ ಕಿಟ್ ಹಾಗೂ ಸಮವಸ್ತ್ರ ವಿತರಣೆ ಮಾಡಿ ಮಾತನಾಡಿದ ಅವರು ಬಡವರ,ದಿನ ದಲಿತರ,ರೈತರ ಹಾಗೂ ಅಲ್ಪಸಂಖ್ಯಾತರ ಸವಾರ್ಂಗೀಣ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಚಿತ್ತಾಪುರ ಮತ ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಮತಕ್ಷೇತ್ರವಾಗಿ ನಿರ್ಮಿಸಿದ್ದಾರೆ. ಕ್ಷೇತ್ರದ ರಸ್ತೆಗಳ ಸುಧಾರಣೆ, ಆರೋಗ್ಯ ಕ್ಷೇತ್ರದ ಸುಧಾರಣೆ, ಕೃಷಿ ಕಾರ್ಮಿಕರ ಸುಧಾರಣೆ,ಜಿಲ್ಲೆಯ ಸವಾರ್ಂಗೀಣ ಅಭಿವೃದ್ಧಿಗೆ ಪ್ರಿಯಾಂಕ್ ಖರ್ಗೆ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ.ಹಾಗೂ ಪ್ರತಿ ಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಒದಗಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ,ಭೀರಣ್ಣಾ ಕನಕ ಟೇಲರ್,ಮಹಾಂತೇಶ್ ಬಳೂಂಡಗಿ,ಕರೇಪ್ಪ ಪೂಜಾರಿ,ರವಿ ಗೌರ,ಗುರು ಹವಳಗಾ,ರಾಜು ಆರೇಕರ,ಹಿರಿಗಪ್ಪ ಪೂಜಾರಿ, ಸಂತೋಷ ಚಲವಾದಿ, ಮಲ್ಲಯ್ಯ ಹಿರೇಮಠ, ಮಲ್ಲು ಮಾತೋಳಿ,ಗುರುದೇವ ಪೂಜಾರಿ ಸೇರಿದಂತೆ ಇನ್ನಿತರು ಇದ್ದರು.

ಪ್ರಿಯಾಂಕ್ ಖರ್ಗೆ ಅಭಿವೃದ್ಧಿಯ ಹರಿಕಾರರಾಗಿದ್ದಾರೆ.ಅತೀ ಕಿರಿಯ ವಯಸ್ಸಿನಲ್ಲಿಯೇ ರಾಜಕೀಯ ಕ್ಷೇತ್ರದಲ್ಲಿ ತುಂಬಾ ಎತ್ತರಕ್ಕೆ ಬೆಳೆದಿದ್ದಾರೆ.ಐಟಿ-ಬಿಟಿ, ಪ್ರವಾಸೋದ್ಯಮ, ಸಮಾಜಕಲ್ಯಾಣದಂತಹ ಮಹತ್ವದ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರಿಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಈ ಭಾಗಕ್ಕೆ ಅವರು ಹೆಚ್ಚಿನ ಸೌಲಭ್ಯ ಒದಗಿಸಿ ಮಾದರಿ ಜಿಲ್ಲೆಯನ್ನಾಗಿಸಲು ಶ್ರಮಿಸುತ್ತಿದ್ದಾರೆ.
-ಜೆ.ಎಂ.ಕೊರಬು,ಸಮಾಜ ಸೇವಕರು ಅಫಜಲಪುರ