ಪ್ರಿಯಾಂಕ್ ಖರ್ಗೆ ಯಾರು ?: ಸಚಿವ ಸೋಮಣ್ಣ

ಕಲಬುರಗಿ ನ 17: ನನಗೆ ಮಲ್ಲಿಕಾರ್ಜುನ ಖರ್ಗೆ ಅವರು ಗೊತ್ತು. ಈ ಪ್ರಿಯಾಂಕ್ ಖರ್ಗೆ ಯಾರು ಅಂತ ಗೊತ್ತಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಹೇಳಿದರು.
ನಗರಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಟ್ ಕಾಯಿನ್ ಹಗರಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಲಿ
ಯಾಗಲಿದ್ದಾರೆ ಎಂಬ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸಚಿವ ಸೋಮಣ್ಣ ಕಿಡಿಕಾರಿದರು.ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು
ಖರ್ಗೆ ಮನೆತನ ನಾನು ನೋಡಿದಂತೆ ದೊಡ್ಡದು.ಆ ಯುವಕ ಮೊದಲು ತಿಳಿದು ಮಾತಾಡಬೇಕು.ಯಾವುದೇ ಅರಿವಿರದೇ ಮಾತಾಡೋದು ತಪ್ಪು ಎಂದು ಸಚಿವ ಸೋಮಣ್ಣ ಹೇಳಿದರು.
ಬಿಟ್ ಕಾಯಿನ್ ಸುಳ್ಳೇ ಸುಳ್ಳು. ಈಗಾಗಲೇ ಇದನ್ನು ಮುಖ್ಯಮಂತ್ರಿಗಳು ಹಾಗೂ ಸಚಿವ ಸುಧಾಕರ ಸೇರಿದಂತೆ ಹಲವರು ಹೇಳಿದ್ದಾರೆ ಎಂದರು.