ಪ್ರಿಯಾಂಕ್ ಖರ್ಗೆ ಜನ್ಮದಿನದ ನಿಮಿತ್ಯ ಬಡವರಿಗೆ ಕಿಟ್ ವಿತರಣೆ

ವಾಡಿ:ನ.22: ಮಾಜಿ ಸಚಿವ. ಹಾಲಿ ಶಾಸಕ ಪ್ರಿಯಾಂಕ್ ಖರ್ಗೆಯವರ 42ನೇ ಜನ್ಮದಿನದ ನಿಮಿತ್ಯ ವಾಡಿ ಬ್ಲಾಕ್ ಕಾಂಗ್ರೇಸ್ ಸಮಿತಿಯಿಂದ ರೇಷನ್ ಕೀಟ್ ವಿತರಿಸಿದರು.

ಡಾ. ಅಂಬೇಡ್ಕರ್ ವೃತ್ತದಲ್ಲಿ ಹಿರಿಯ ಕಾಂಗ್ರೇಸ್ ಮುಖಂಡ ಟೋಪಣ್ಣ ಕೊಮಟೆ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಹಿಮೂದ ಸಾಹೇಬ, ಪುರಸಭೆ ಅಧ್ಯಕ್ಷೆ ಝರೀನಾಬೇಗಂ, ಉಪಾಧ್ಯಕ್ಷ ತಿಮ್ಮಯ್ಯಾ ಪವಾರ್ ನೇತೃತ್ವದಲ್ಲಿ ಕೇಕ್ ಕತ್ತರಿಸಿ ಬಡಜನಗೆ ದವಸಧಾನ್ಯ ನೀಡಿದರು.

ಕಾಂಗ್ರೇಸ್ ಹಿರಿಯ ಮುಖಂಡ ಬಾಬುಮಿಯ್ಯಾ ಮಾತನಾಡಿ, ಅಭಿವೃದ್ದಿಯ ಹರಿಕಾರ, ಜನಪ್ರಿಯ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸದಾ ಜನರ ಸಮಸ್ಯೆಗೆ ಮೀಡಿಯುವ ಹೃದಯವಂತ ನಾಯಕರಾಗಿದ್ದಾರೆ. ತಮ್ಮ ಜನ್ಮದಿನವನ್ನು ಬಡವರೊಂದಿಗೆ ಆಚರಿಸಿಕೊಳ್ಳಿ ಎನ್ನುವ ಸಂದೇಶವು ಮಾನವಿಯತೆಗೆ ಜಲ್ವಂತ ಸಾಕ್ಷಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ದೇವಿಂದ್ರ ಕರದಳ್ಳಿ, ಮಲ್ಲಯ್ಯಾ ಗುತ್ತೇದಾರ್, ಮಹಮ್ಮದ ಗೌಸ್, ತುಕಾರಮ ರಾಠೋಡ, ಮರೆಪ್ಪಾ ಕಲ್ಕುಟಗಿ, ಶರಣು ನಾಟೇಕರ್, ಮುಖಂಡರಾದ ಮಹ್ಮದ ಅಶ್ರಫಖಾನ, ಚಂದ್ರಸೇನ್ ಮೇನಗಾರ್, ಶ್ರವಣಕುಮಾರ ಮೌಸಲಗಿ, ವಿಜಯಕುಮಾರ ಸಿಂಘೆ, ನಾಸೀರ ಹುಸೇನ, ನಾಗೇಂದ್ರ ಜೈಗಂಗಾ, ಬಸವರಾಜ ಕೇಶ್ವಾರ್, ಚಾಂದಮಿಯ್ಯಾ, ಉಮೇರ್ ಜುನೈದಿ, ಸಿದ್ದು ಪೂಜಾರಿ ಸೇರಿದಂತೆ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.