ಪ್ರಿಯಾಂಕ್ ಖರ್ಗೆ ಗೆಲುವು: ಸಿಹಿ ಹಂಚಿ ಸಂಭ್ರಮ

ಚಿತ್ತಾಪೂರ:ಮೇ.16: ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವು ಸಾಧಿಸಿದಕ್ಕಾಗಿ ಬಂಜಾರ ಸಮುದಾಯದ ಕಾಂಗ್ರೆಸ್ ಮುಖಂಡರು ಪರಸ್ಪರ ಸಿಹಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸದರು.

ಪಟ್ಟಣದ ಕಾಂಗ್ರೆಸ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ
ಪುರಸಭೆ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಜಗದೀಶ ಚವ್ಹಾಣ್ ಮಾತನಾಡಿ
ಬಿಜೆಪಿಯ ಭ್ರಷ್ಟ ಸರ್ಕಾರ ತೊಲಗಿಸಲು ನಾಡಿನ ಜನತೆ ತೀರ್ಮಾನಿಸಿದ್ದು, ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಮತ್ತು ಪ್ರಜಾ ಸಂಕಲ್ಪ ಯಾತ್ರೆ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದೆ ಎಂದರು.

ಬಂಜಾರ ಸಮುದಾಯಕ್ಕೆ ಪ್ರಿಯಾಂಕ ಖರ್ಗೆ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಿದ್ದಾರೆ ಹೀಗಾಗಿ ಅವರ ಸವಾರ್ಂಗೀಣ ಅಭಿವೃದ್ಧಿ ಕೆಲಸ ನೋಡಿ ಈ ಬಾರಿ ಬಂಜಾರ ಸಮುದಾಯ ಬೆಂಬಲ ನೀಡಿದೆ ಎಂದು ಖುಷಿ ಹಂಚಿಕೊಂಡರು.

ಈ ಸಂದರ್ಭದಲ್ಲಿ ಭೀಮಸಿಂಗ್ ಚವ್ಹಾಣ, ಚಂದು ಜಾಧವ್, ಬಾಲು ಚವ್ಹಾಣ್, ಗೋಪಾಲ ರಾಠೋಡ್, ದೇವಿದಾಸ್ ಚವ್ಹಾಣ್, ಪ್ರವೀಣ ಪವಾರ್, ರಾಕೇಶ ಪವಾರ್, ವಿಜಯ ಚವ್ಹಾಣ್, ಮಹಾದೇವು ರಾಠೋಡ್, ಲಕ್ಕನ್ ರಾಠೋಡ್, ಲಕ್ಷ್ಮಣ ನಾಯ್ಕ, ಸಂತೋಷ ರಾಠೋಡ್, ವಿನೋದ ರಾಠೋಡ್ ಸೇರಿದಂತೆ ಇತರರು ಇದ್ದರು.