ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡಲು ಮನವಿ

ಕಲಬುರಗಿ,ಮೇ.18- ಜಿಲ್ಲೆಯ ಚಿತ್ತಾಪೂರ ಮತಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಅವರು, ಸತತ 3ನೇ ಸಲ ಚುನಾಯಿತರಾಗಿದ್ದು, ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡುವಂತೆ ಭಾರತೀಯ ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಇಂಗನಕಲ್ ಅವರು ಮನವಿ ಮಾಡಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಿಕ ಜಾಲತಾಣದ ರಾಜ್ಯ ಸಂಯೋಜಕರಾಗಿ ಆಡಳಿತರೂಢ ಬಿಜೆಪಿಯ ಜನವಿರೋಧಿ ಧೋರಣೆಗಳನ್ನು ಮತ್ತು ಭ್ರಷ್ಟಾಚಾರವನ್ನು ಜಾಲತಾಣದ ಮೂಲಕ ಜನಸಾಮಾನ್ಯರಿಗೆ ತಲುಪಿಸಲುವಲ್ಲಿ ಪ್ರಿಯಾಂಕ ಖರ್ಗೆ ಅವರು ಪಟ್ಟಿರುವ ಪರಿಶ್ರಮದ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರು, ಪ್ರಿಯಾಂಕ ಖರ್ಗೆ ಅವರಿಗೆ ಗೃಹ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು ವಹಿಸಲು ಮುಂದಾಗಬೇಕು ಎಂದು ಹೊಸಮನಿ ಅವರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಿಲಿಂದ ಸನಗುಂದಿ, ಭೀಮರಾಯ ನಗನೂರ, ರಮೇಶ ಚಿಮ್ಮಾಇದ್ಲಾಯಿ, ಕಲ್ಯಾಣರಾವ ಡೊಣ್ಣೂರ, ಕಾಶಿನಾಥ ವಿವಂಟಗಿ, ಭರತ ಬುಳ್ಳಾ, ಪ್ರದೀಪ ಡಿ ಮತ್ತು ದಿನೇಶ ಮೋಘಾ ಇದ್ದರು.