ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ: ಅಭಿಮಾನಿಗಳು, ಕಾರ್ಯಕರ್ತರ ಸಂಭ್ರಮ

ಕಲಬುರಗಿ,ಮೇ.21-ಪ್ರಿಯಾಂಕ್ ಖರ್ಗೆ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ವಿಕರಿಸಿದ ಪ್ರಯುಕ್ತ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರಿಯಾಂಕ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಣೆ ಮಾಡಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಅರುಣ್ ಭರಣಿ, ಸಂತೋಷ ಬಿ ಪಾಳಾ, ಸುನಿಲ ತಾರಫೇಲ್ ,ಭೀಮ ತಾರಫೇಲ್ ,ಭೀಮೂ ಆರಮುಗ, ಗುಂಡು ಫರತಾಬಾದ, ಪೃಥ್ವಿ ಪಾಟೀಲ್, ಅರವಿಂದ ಹೊಸಮನಿ, ಕಾರ್ತಿಕ್ ಹೊಸಮನಿ, ಬಾಬು ನಾಯಕೋಡಿ, ಮಲ್ಲು ನಾಯಕ, ಅವಿನಾಶ ಆಜಾದಪೂರ, ಪ್ರೀತಮ್ ಹುಗ್ಗಿ, ರಾಜ್ ಯಾಕಪೂರ್ ಹಾಗೂ ಇತರರು ಇದ್ದರು.
ಇದೇ ಸಂದರ್ಭದಲ್ಲಿ ಜೇವರ್ಗಿ ಶಾಸಕರಾದ ಡಾ.ಅeಯಸಿಂಗ್ ಅವರಿಗೂ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಲಾಯಿತು.