ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ: ಆರೋಪಿ ಪತ್ತೆಗೆ ಅರಳಿ ಆಗ್ರಹ

ಬೀದರ್,ಮಾ.31-ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿರುವ ವ್ಯಕ್ತಿಗೆ ಪತ್ತೆ ಹಚ್ಚಿ, ಬಂಧಿಸಿ ಕಠಿಣ ಶಿಕ್ಷಗೆ ಒಳಪಡಿಸುವಂತೆ ವಿಧಾನ ಪರಿಷತ್ ಸದಸ್ಯ ಅರವಿಂದ ಅರಳಿ ಆಗ್ರಹಿಸಿದ್ದಾರೆ.
ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದ ಯುವಕರ ಕಣ್ಮಣಿಯಾಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಸಚಿವರಾದ ಪ್ರಿಯಾಂಕ್ ಖರ್ಗೆ ಯವರಿಗೆ ಕೊಲೆ ಬೆದರಿಕೆ ಪತ್ರ ಬಂದಿರುವ ಹಿನ್ನಲೆಯಲ್ಲಿ ಅವರ ರಕ್ಷಣೆ ಸರ್ಕಾರದ ಹೊಣೆಯಾಗಿರುತ್ತದೆ. ಸಚೀವರಿಗೆÉ ಮೊದಲು ಸೆಕ್ಯೂರಿಟಿ ನೀಡಬೇಕು, ನಂತರದಲ್ಲಿ ತಡ ಮಾಡದೆ ಆ ಪತ್ರ ಎಲ್ಲಿಂದ ಬಂತು ?, ಯಾರಿಂದ ಬಂತು ? ಎನ್ನುವುದು ಪತ್ತೆ ಹಚ್ಚಿ ಅವರನ್ನು ಕೂಡಲೆ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರು ಒಳ್ಳೆಯ ಜನನಾಯಕಾರಾಗಿ ಬೆಳೆಯುತ್ತಿರುವುದು ವಿರೋಧಿಗಳಗೆ ಸಹಿಸಲು ಆಗುತ್ತಿಲ್ಲ. ಅವರ ನೇರ ನುಡಿ, ಸತ್ಯವಾದ ಪ್ರಶ್ನೆಗಳು ಹಾಗೂ ಹರಿತವಾದ ಮಾತುಗಳಿಂದ ವಿರೋಧಿಗಳು ತಲೆ ತಗ್ಗಿಸುವಂತೆ ಆಗುತ್ತಿದೆ. ಹಾಗಾಗಿ ಇಂತಹ ಕ್ಷುಲ್ಲಕ ಕೆಲಸ ಮಾಡುತ್ತಿದ್ದಾರೆ. ಇಂತಹ ಮನೋಭಾವ ಹೊಂದಿದ ವ್ಯಕ್ತಿಗಳು ಯಾರೆ ಆಗಿರಲಿ ಅವರನ್ನು ಕಾನೂನು ರೀತಿಯಲ್ಲಿ ಕೂಡಲೆ ಕಠಿಣ ಕ್ರಮ ವಹಿಸಬೇಕು. ಪ್ರಿಯಾಂಕ್ ಖರ್ಗೆಯವರು ನಮ್ಮ ನಾಡಿನ ಅಸ್ತಿ. ಅದರಲ್ಲಿಯೂ ದಲಿತ ಸಮುದಾಯದ ಯುವರಾಜಕಾರಣಿ ಅವರಿಗೇನಾದರು ಆದರೆ ಸುಮ್ಮನಿರಲು ಸಾಧ್ಯವಿಲ್ಲ. ಆದುದರಿಂದ ದಯಮಾಡಿ ಮೊದಲು ಅವರಿಗೆ ರಕ್ಷಣೆ ನೀಡಿ ನಂತರ ಅವರಿಗೆ ಈ ರೀತಿ ಧಮ್ಕಿಯ ಪತ್ರ ಬರೆದವರಿಗೆ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.