ಪ್ರಿಯಾಂಕ್ ಖರ್ಗೆಗೆ,ಬೆಣ್ಣೂರಕರ್ ಸವಾಲ್

ಚಿತ್ತಾಪುರ:ಜು.14: ಸನ್ನತಿಯ ಬೌದ್ಧಸ್ತೂಪಗಳ ಅಭಿವೃದ್ದಿ ಕಾಮಗಾರಿಗೆ ನಮಗೆ ಅಹ್ವಾನಿಸಿಲ್ಲ ಎಂದು ಹೇಳುವ ಪ್ರಿಯಾಂಕ್ ಖರ್ಗೆ, ಇಲ್ಲಿವರೆಗೆ ತಾವು ಮಾಡಿದ ಅಭಿವೃದ್ದಿ ಕಾಮಗಾರಿಗಳ ಅಡಿಗಲ್ಲು ಸಮಾರಂಭಕ್ಕೆ ಶಿಷ್ಠಾಚಾರದ ಪ್ರಕಾರ ನೀವು ಎಷ್ಟು ಬಾರಿ ಸಂಸಧರನ್ನು ಅಹ್ವಾನಿಸಿದ್ದಿರಾ ಹೇಳಿ ಎಂದು
ಜಿಪಂ ಮಾಜಿ ಸದಸ್ಯ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್
ಸವಾಲ್ ಹಾಕಿ ತಿರುಗೇಟ್ ನೀಡಿದರು.

ಪಟ್ಟಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು,ತಾಲೂಕಿನ ಸನ್ನತಿ-ಕನಗನಳ್ಳಿ ಪ್ರದೇಶದಲ್ಲಿದ್ದ ಐತಿಹಾಸಿಕ ಬೌದ್ಧಸ್ತೂಪಗಳ ಅಭಿವೃದ್ದಿಗೆ ಇಲ್ಲಿವರೆಗೆ ಗಮನ ಹರಿಸಿದ ಶಾಸಕ ಪ್ರಿಯಾಂಕ್ ಖರ್ಗೆ ಈಗ ಸಂಸಧ ಡಾ.ಉಮೇಶ ಜಾಧವ ಅವರು ಅಭಿವೃದ್ದಿಗೆ ಚಾಲನೆ ನೀಡಿದ್ದಾರೆ ಇದು ಸಹಿಸಿಕೊಳ್ಳದೆ ವಿನಾಕಾರಣ ಸಂಸಧರ ವಿರುದ್ದ ಟೀಕೆ ಟಿಪ್ಪಣೆ ಮಾಡುತ್ತಿರುವುದು ಸರಿಯಲ್ಲ

ಸಂಸಧರು ಸನ್ನತಿಯ ಬೌದ್ಧ ಸ್ತೂಪಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೂರೇ ತಿಂಗಳಲ್ಲಿ ವರದಿ ತಯ್ಯಾರಿಸಿ ಸಂಸತ್ ನಲ್ಲಿ ಪ್ರಸ್ತಾಪ ಮಾಡಿ ಸಂಬಂಧಪಟ್ಟ ಇಲಾಖೆಯ ಮಂತ್ರಿ ಹಾಗೂ ಅಧಿಕಾರಿಗಳಿಗೆ ಬೇಟಿ ಮಾಡಿ ಒತ್ತಡ ಹೇರಿದ ಪರಿಣಾಮ ಇಂದು 3.50 ಕೋಟಿ ಅನುದಾನ ಬಿಡುಗಡೆಯಾಗಿದೆ, ಪ್ರಸ್ತುತ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಇದನ್ನು ಸ್ವಾಗತಿಸಬೇಕಾದ ಶಾಸಕ ಪ್ರಿಯಾಂಕ್ ಖರ್ಗೆ ಇಲ್ಲಸಲ್ಲದ ಹೊಟ್ಟೆಕಿಚ್ಚಿನ ಹೇಳಿಕೆ ನೀಡುತ್ತಾ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು.

ಅಭಿವೃದ್ದಿ ಕಾಮಗಾರಿಗಳಿಗೆ ಅಡಿಗಲ್ಲು ಅಥವಾ ಗುದ್ದಲಿ ಪೂಜೆ ಮಾಡಲು ಟೆಂಟ್ ಖುರ್ಚಿ ಹಾಕಿಸಿ ಕಾರ್ಯಕ್ರಮ ಮಾಡಲೇಬೇಕು ಎಂದೇನಿಲ್ಲ ಸಾವಿರಾರು ಜನರನ್ನು ಸೇರಿಸಿ ಜಾತ್ರೆ ಮಾಡುವುದು ಮುಖ್ಯವಲ್ಲ ಅಭಿವೃದ್ದಿ ಕಾರ್ಯಗಳಿಗೆ ವೇಗ ನೀಡುವುದು ಮುಖ್ಯ ಹೀಗಾಗಿ ಸಂಸಧರು ಅಭಿವೃದ್ದಿ ಕಾರ್ಯ ದೊಡ್ಡದಿದ್ದರೂ ಯಾವುದೇ ಆಡಂಬರ ಇಲ್ಲದೇ ಸರಳವಾಗಿ ಗುದ್ದಲಿ ಪೂಜೆ ಮಾಡಿದ್ದಾರೆ ಇದೊಂದು ಮಾದರಿ ಎಂದರು. ಸಣ್ಣ ಅಭಿವೃದ್ದಿ ಕಾಮಗಾರಿ ಇದ್ದರೂ ದೊಡ್ಡ ಟೆಂಟ್ ಖುರ್ಚಿ ಹಾಕಿಸಿ ಕಾರ್ಯಕ್ರಮ ಮಾಡಿ ಜನರನ್ನು ಮರಳು ಮಾಡುವುದು ನಿಮಗೆ ಚಾಳಿಯಾಗಿದೆ ಎಂದು ವ್ಯಂಗ್ಯವಾಡಿದರು.

ನಾವು ಮಾಡಿದ ರಸ್ತೆಯಲ್ಲಿ ಬಿಜೆಪಿ ನಾಯಕರು ತಿರುಗಾಡುತ್ತಾರೆ ಎಂದು ಹೇಳುವ ಪ್ರಿಯಾಂಕ್ ಖರ್ಗೆ ತಾವು ಸರಕಾರದ ಅನುದಾನದಲ್ಲಿ ಮಾಡಿದ್ದೀರಿ ಹೊರತು ನಿಮ್ಮ ವಯಕ್ತಿಕ ಹಣದಲ್ಲಿ ಇಲ್ಲ ಎಂಬುದು ಮರೆಯಬೇಡಿ, ಎಲ್ಲವೂ ನಾನೇ ಮಾಡಿದ್ದೇನೆ ಎಂದು ಜಂಬ ಕೊಚ್ಚಿಕೊಳ್ಳುವುದನ್ನು ಬಿಟ್ಟುಬೀಡಿ ಎಂದು ಕುಟುಕಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಅವರು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕುಳಿತುಕೊಂಡು ಪತ್ರಿಕಾಗೋಷ್ಠಿ ಮಾಡುವುದು ಅಷ್ಟೇ ಗೊತ್ತಿದೆ, ಸನ್ನತಿ ಬೌದ್ಧಸ್ತೂಪ ಬಗ್ಗೆ ಯಾವುದೇ ಮಾಹಿತಿ ಇಲ್ಲ ಸುಮ್ಮನೇ ಪ್ರಚಾರಕ್ಕಾಗಿ ಸಂಸಧ ಜಾಧವ ಅವರ ವಿರುದ್ದ ಹೇಳಿಕೆ ನೀಡುವುದನ್ನು ಬಿಡಿ ಎಂದರು.