ಪ್ರಿಯಾಂಕ್ ಅವಧಿಯಲ್ಲಿ ಅಭಿವೃದ್ಧಿ ಪರ್ವ

ವಾಡಿ:ಎ.25: ಪಟ್ಟಣದ ವಾರ್ಡ್ 8ರ ಅಂಬಿಗರ ಚೌಡಯ್ಯ ವೃತ್ತದಿಂದ, ನವಬೌದ್ಧ ಸಮಾಜದ ರುದ್ರಭೂಮಿಯವರೆಗೆ ನಗರತ್ಪೋನ ಯೋಜನೆಡಿಯಲ್ಲಿ 70.ಲಕ್ಷ ವೆಚ್ಚದಲ್ಲಿ ಮಂಜೂರಾಗಿರುವ ಸಿಸಿ ರಸ್ತೆ ಕಾಮಗಾರಿಗೆ, ಸ್ಥಳೀಯ ಪುರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಚಾಲನೆ ನೀಡಿದರು.

ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಮುಖಂಡ ನಾಗೇಂದ್ರ ಜೈಗಂಗಾ, ನಮ್ಮ ಮತಕ್ಷೇತ್ರದ ಜನಪ್ರಿಯ ಶಾಸಕ ಪ್ರಿಯಾಂಕ್ ಖರ್ಗೆ ಅವರು ಇಡೀ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಶೈಕ್ಷಣಿಕ ಪ್ರಗತಿ, ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಚಿತ್ತಾಪುರ ಅಭಿವೃದ್ದಿಗಾಗಿ ಸಾಕಷ್ಟು ಕೆಲಸಗಳನ್ನು ಅವರು ಕೈಗೊಂಡಿದ್ದಾರೆ. ಸಾವಿರಾರು ಕೋಟಿ ರೂ. ಅನುದಾನ ತೆಗೆದುಕೊಂಡು ಬಂದು ಚಿತ್ತಾಪುರ ಮತಕ್ಷೇತ್ರದ ಏಳಿಗೆಗೆ ಹಗಲಿರಳು ಶ್ರಮಿಸುತ್ತಿದ್ದಾರೆ ಎಂದರು.

ಪುರಸಭೆ ಸದಸ್ಯ ದೇವಿಂದ್ರ ಕರದಳ್ಳಿ, ಮಹಮ್ಮದ ಗೌಸ, ಮಲ್ಲಯ್ಯ ಗುತ್ತೇದಾರ, ಕಾಂಗ್ರೆಸ್ ಮುಖಂಡರಾದ ರಾಜಾಪಟೇಲ್, ಶರಣಬಸ್ಸು ಶಿರೂರಕರ, ಶ್ರವಣಕುಮಾರ ಮೌಸಲಗಿ, ವಿಜಯಕುಮಾರ ಸಿಂಗೆ, ಮುಕ್ರಮ ಪಟೇಲ, ಖೇಮಲಿಂಗ ಬೆಳಮಗಿ, ಉದಯಕುಮಾರ ಯಾದಗಿರಿ, ರಮೇಶ ಬಡಿಗೇರ, ಕಿಶೋರ ಸಿಂಗೆ ಸೇರಿದಂತೆ ಗುತ್ತಿಗೇದಾರ ದೇವರಾಜ ಎಸ್ ವಾರದ ಪಾಲ್ಗೋಂಡಿದ್ದರು.