ಪ್ರಿಯಾಂಕಾ ಹೆಚ್ಚು ಸಂಭಾವನೆ ಪಡೆಯುವ ನಟಿ

ಮುಂಬೈ,ಜೂ.೧-ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಮೀರ್ ಖಾನ್ ಸೇರಿದಂತೆ ಅನೇಕ ನಟ-ನಟಿಯರಿಗೆ ದೇಶ-ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಅಮಿತಾಭ್ ಬಚ್ಚನ್ ಹಾಗೂ ಶಾರುಖ್ ಖಾನ್ ಪ್ರತಿ ಸಿನಿಮಾಕ್ಕೂ ಹೆಚ್ಚಿನ ಮೊತ್ತದ ಸಂಭಾವನೆ ಪಡೆಯುತ್ತಾರೆ. ನಟರಂತೆ ನಟಿಯರಿಗೂ ಈಗ ಬೇಡಿಕೆ ಹೆಚ್ಚಾಗಿದೆ. ೨೦೨೩ರಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಯಾರು ಗೊತ್ತೆ.
ಭಾರತೀಯ ಚಿತ್ರೋದ್ಯಮವು ವಿಶ್ವದ ಅತಿದೊಡ್ಡ ಚಲನಚಿತ್ರೋದ್ಯಮವಾಗಿದೆ. ಬಾಲಿವುಡ್ ನಟರು ಕೂಡ ವಿಶ್ವ ಖ್ಯಾತಿಯನ್ನು ಗಳಿಸಿದ್ದಾರೆ. ನಮ್ಮ ಸ್ಟಾರ್ ಹೀರೋಗಳಿಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಅದೇ ರೀತಿ ಪ್ರಮುಖ ನಟಿಯರಿಗೂ ಜಗತ್ತಿನ ಮೂಲೆ ಮೂಲೆಯಲ್ಲಿ ಅಭಿಮಾನಿಗಳಿದ್ದಾರೆ.
ಸಮಂತಾ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚಿಗಷ್ಟೆ ಸಮಂತಾ ಅಭಿನಯದ ಶಕುಂತಲಾ ಸಿನಿಮಾ ಓಡಲಿಲ್ಲ. ವಿಜಯ್ ದೇವರಕೊಂಡ ಅಭಿನಯದ ’ಖುಷಿ’ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಅವರು ಬಾಲಿವುಡ್ ನಲ್ಲಿ ವರುಣ್ ಧವನ್ ಅವರೊಂದಿಗೆ ಸಿಟಾಡೆಲ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ವರದಿಯ ಪ್ರಕಾರ ಸಮಂತಾ ಒಂದು ಸಿನಿಮಾಗೆ ೩ ರಿಂದ ೮ ಕೋಟಿ ಸಂಭಾವನೆ ಪಡೆಯುತ್ತಾರೆ.
ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ದುಬಾರಿ ನಟಿ. ಒಂದು ಚಿತ್ರಕ್ಕೆ ನಿರ್ಮಾಪಕರಿಂದ ಭಾರೀ ಸಂಭಾವನೆ ಪಡೆಯುತ್ತಾರೆ. ಒಂದು ಸಿನಿಮಾಗೆ ೨ ರಿಂದ ೧೦ ಕೋಟಿ ಸಂಭಾವನೆ ಪಡೆಯುತ್ತಾರೆ. ಶಾರೂಖ್ ಖಾನ್ ಅಭಿನಯದ ’ಜವಾನ್’ ಚಿತ್ರದ ಶೂಟಿಂಗ್ ನಲ್ಲಿ ನಯನತಾರಾ ಬ್ಯುಸಿಯಾಗಿದ್ದಾರೆ.
ಮಾಜಿ ಸೂಪರ್ ಸ್ಟಾರ್ ಐಶ್ವರ್ಯ ರೈ ಬಚ್ಚನ್ ಒಂದು ಸಿನಿಮಾಗೆ ೧೦ ಕೋಟಿ ರೂ. ’ದೇವದಾಸ್’ ಚಿತ್ರದಿಂದ ’ಧೂಂ’ ಚಿತ್ರಗಳವರೆಗೆ ಐಶ್ವರ್ಯಾ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ’ಪೊನ್ನಿಯನ್ ಸೆಲ್ವನ್’ ಚಿತ್ರಕ್ಕಾಗಿ ೧೦ ಕೋಟಿ ಸಂಭಾವನೆ ಪಡೆದಿದ್ದಾರೆ.
ಒಂದು ಚಿತ್ರಕ್ಕೆ ೮ ರಿಂದ ೧೨ ಕೋಟಿ ಸಂಭಾವನೆ ಪಡೆಯುವ ನಟಿಯರಲ್ಲಿ ಅನುಷ್ಕಾ ಶರ್ಮಾ ಕೂಡ ಒಬ್ಬರು. ’ರಬ್ ನೇ ಬನಾ ದಿ ಜೋಡಿ’ಯಿಂದ ಹಿಡಿದು ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ’ಚಕ್ದಾ ಎಕ್ಸ್ಪ್ರೆಸ್’ ವರೆಗೆ ಅನುಷ್ಕಾ ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
’ಸ್ಟೂಡೆಂಟ್ ಆಫ್ ದಿ ಇಯರ್’ನಿಂದ ’ರಾಜಿ’ವರೆಗೆ ಸೂಪರ್ಹಿಟ್ ಚಿತ್ರಗಳಲ್ಲಿ ನಟಿಸಿರುವ ಆಲಿಯಾ ಭಟ್ ಈಗ ದುಬಾರಿ ನಟಿಯರ ಪಟ್ಟಿಯಲ್ಲಿ ೫ನೇ ಸ್ಥಾನದಲ್ಲಿದ್ದಾರೆ. ಫೋರ್ಬ್ಸ್ ನ ಟಾಪ್ ೧೦೦ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಆಲಿಯಾ ಕೂಡ ಸ್ಥಾನ ಪಡೆದಿದ್ದಾರೆ. ಒಂದು ಚಿತ್ರಕ್ಕೆ ೧೦ ರಿಂದ ೨೦ ಕೋಟಿ ಸಂಭಾವನೆ ಪಡೆಯುತ್ತಾರೆ.
ಮುಗ್ಧ ಮುಖದ ಮೂಲಕ ಪ್ರೇಕ್ಷಕರ ಮನ ಗೆದ್ದ ಕತ್ರಿನಾ ಕೈಫ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಂದು ಚಿತ್ರಕ್ಕೆ ೧೫ ರಿಂದ ೨೧ ಕೋಟಿ ಸಂಭಾವನೆ ಪಡೆಯುತ್ತಾರೆ.
ಮೂರನೇ ಸ್ಥಾನದಲ್ಲಿ ಬಾಲಿವುಡ್ ನಟಿ ಇದ್ದಾರೆ. ’ಕ್ವೀನ್’ ಮತ್ತು ’ತನು ವೆಡ್ಸ್ ಮನು’ ಚಿತ್ರಗಳ ಮೂಲಕ ಕಂಗನಾ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕಂಗನಾ ಒಂದು ಚಿತ್ರಕ್ಕೆ ೧೫ ರಿಂದ ೨೭ ಕೋಟಿ ಸಂಭಾವನೆ ಪಡೆಯುತ್ತಾರೆ.
ಇತ್ತೀಚಿಗಷ್ಟೆ ತೆರೆಕಂಡ ’ಪಠಾನ್’ ಚಿತ್ರದ ಮೂಲಕ ದೀಪಿಕಾ ಪಡುಕೋಣೆ ಕ್ರೇಜ್ ಮತ್ತಷ್ಟು ಹೆಚ್ಚಾಗಿದೆ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ದೀಪಿಕಾ ಸದ್ಯ ಒಂದು ಸಿನಿಮಾಗೆ ೧೫ ರಿಂದ ೩೦ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಮೊದಲ ಸ್ಥಾನದಲ್ಲಿದ್ದಾರೆ. ಬಾಲಿವುಡ್ ನಿಂದ ಹಿಡಿದು ಹಾಲಿವುಡ್ ಚಿತ್ರಗಳವರೆಗೆ ಪ್ರಿಯಾಂಕಾ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿದ್ದಾರೆ. ಒಂದು ಸಿನಿಮಾಗೆ ಪ್ರಿಯಾಂಕಾ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ವರದಿಯ ಪ್ರಕಾರ ಪ್ರಿಯಾಂಕಾ ಒಂದು ಚಿತ್ರಕ್ಕೆ ೧೫ ರಿಂದ ೪೦ ಕೋಟಿ ಸಂಭಾವನೆ ಪಡೆಯುತ್ತಾರೆ.