ಪ್ರಿಯಕರನ ಆಸೆಗೆ ಮೊದಲ ಮದುವೆ ಮರೆಮಾಚಿದ ಯುವತಿ

ಬೀದರ್:ಜ.17: ಪ್ರಿಯಕರನ ಜೊತೆ ಮದುವೆ ಮಾಡಿಕೊಂಡಿದ್ದಕ್ಕೆ, ಕುಟುಂಬಸ್ಥರಿಂದ ಜೀವಭಯವಿದೆ ಎಂದು ಬೀದರ್ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿ ರಕ್ಷಣೆ ಕೋರಿದ್ದ ನವಜೋಡಿಗಳ ಪ್ರಕರಣ ತಿರುವು ಪಡೆದುಕೊಂಡಿದ್ದು, ಯುವತಿಗೆ ಈಗಾಗಲೇ ಮೊದಲ ಮದುವೆ ಆಗಿರುವ ವಿಚಾರ ಬಹಿರಂಗವಾಗಿದೆ.

ಆದ್ರೆ ಮದುವೆ ಒತ್ತಾಯವಾಗಿ ಮಾಡಲಾಗದೆ, ನನಗೆ ಮದುವೆ ಆಗಿದ್ದೆ ಗೊತ್ತಿಲ್ಲಾ ಎಂದು ಯುವತಿ ಹೇಳುತ್ತಿದ್ದಾಳೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದ ಲೊಕೇಶ್ ಹಾಗೂ ಭಾಲ್ಕಿ ತಾಲುಕಿನ ಕುರ್ನಳ್ಳಿ ನಿರ್ಮಲಾ ಪರಸ್ಪರ ಪ್ರೀತಿಸಿದ್ದಾರೆ. ಪ್ರೀತಿ ಬಳಿಕ ಅಕ್ಟೋಬರ್ 23 ರಂದು ಮದುವೆ ಆಗಿ, ಡಿಸೆಂಬರ್ 18 ರಂದು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮದುವೆಯನ್ನು ಮಾಡಿಕೊಂಡಿದ್ದಾರೆ.

ಇನ್ನು ಯುವತಿ ನಾಪತ್ತೆ ಕುರಿತು ಜನವಾಡ ಠಾಣೆಯಲ್ಲಿ ಯುವತಿ ತಂದೆ ನೀಡಿದ ದೂರಿನ ಮೇರೆಗೆ ವಿಚಾರಣೆ ನಡೆಸಿದಾಗ,
ಯುವತಿಗೆ ಈಗಾಗಲೇ ನಿತೇಶ ಎಂಬುವವರು ಮದುವೆ ಆಗಿದೆ ಎಂಬ ಮಾಹಿತಿ ಬಹಿರಂಗವಾಗಿದ್ದು, ಪೆÇಟೋಗಳು ಕೂಡಾ ಪೆÇಲೀಸ್ ಠಾಣೆಗೆ ನೀಡಿದ್ದಾರೆ. ಆದ್ರೆ ಮೊದಲ ಮದುವೆ ವಿಷಯವನ್ನ ನವಜೋಡಿಗಳಾದ ಲೊಕೇಶ ಹಾಗೂ ನಿರ್ಮಲಾ ತಿರಸ್ಕರಿಸಿದ್ದಾರೆ.