ಪ್ರಿಯಕರನೊಂದಿಗೆ ಮದುವೆ

ರಾಯಚೂರು.ಜೂ.೦೯- ಶತಪ್ರಯತ್ನದಿಂದ ಕೊನೆಗೂ ತಾನು ಪ್ರಿತಿಸಿದವನೊಂದಿಗೆ ಮದುವೆಯಾಗುವಲ್ಲಿ ಪ್ರೇಯಸಿ ಯಶಸ್ವಿಯಾಗಿದ್ದಾಳೆ.
ಬಾಪೂರು ಗ್ರಾಮದ ಉಮೇಶಮ್ಮ ಮತ್ತು ವಡವಾಟಿ ಗ್ರಾಮದ ಮಲ್ಲೇಶ ಇವರ ಮಧ್ಯೆ ಪ್ರೀತಿಯ ಪ್ರಸಂಗ ನಡೆದಿತ್ತು. ಆದರೆ, ಮಲ್ಲೇಶ ಬೇರೆಯವರನ್ನು ಮದುವೆಯಾಗಲು ಮುಂದಾಗಿದ್ದರು. ಪ್ರೇಯಸಿ ಉಮೇಶಮ್ಮ ಪೊಲೀಸ್ ಠಾಣೆ ಮುಂದೆ ಮೇ.೩೦ ರಂದು ಎಸ್ಪಿ ಕಛೇರಿ ಮುಂದೆ ಕಣ್ಣೀರಿಟ್ಟು ಮದುವೆಗೆ ಗೋಗರೆದಿದ್ದರು. ಆದರೆ, ನಂತರದ ಬೆಳವಣಿಗೆಯಲ್ಲಿ ಇವರಿಬ್ಬರು ಮದುವೆಯಾದರೆಂದು ಸ್ಥಳೀಯ ಮುಖಸ್ಥರಾದ ಚಿಟ್ಟಿ ನರಸಣ್ಣ ತಿಳಿಸಿದ್ದಾರೆ. ಈ ಮದುವೆಯಲ್ಲಿ ಅಯ್ಯಣ್ಣ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.